Friday, August 2, 2013

ಆಹಾರದಷ್ಟೇ ಪರಿಸರದ ಸಂರಕ್ಷಣೆ ಮುಖ್ಯ-ರಮಾನಾಥ ರೈ

ಮಂಗಳೂರು, ಅಗೋಸ್ತು.02: ಆಹಾರದಷ್ಟೆ ಶುದ್ದ ಗಾಳಿ ಮನುಷ್ಯರಿಗೆ ಮುಖ್ಯ. ಮಾನವರು ತಮ್ಮ  ಸುತ್ತಲ ಪರಿಸರದ ಮರಗಿಡ,ನದಿತೊರೆ ಕಡಲುಸಾಗರಗಳನ್ನು ಸಂರಕ್ಷಿಸಬೇಕು.ಪರಿಸರ ಕಲುಷಿತಗೊಂಡರೆ ಪ್ರಾಣಿ ಪಕ್ಷಿಗಳ ಜೀವನವೇ ಬರಡಾಗಲಿದೆ ಎಂದು ಕರ್ನಾಟಕ ರಾಜ್ಯ ಅರಣ್ಯ,ಪರಿಸರ,ಜೀವಿಶಾಸ್ತ್ರ ಹಾಗೂ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ರಮಾನಾಥ ರೈ ತಿಳಿಸಿದ್ದಾರೆ.
ಅವರು ಇಂದು  ನಗರದ ಕದ್ರಿ ಉದ್ಯಾನದಲ್ಲಿ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ, ಅರಣ್ಯ ಇಲಾಖೆಯೊಂದಿಗೆ ಹಮ್ಮಿಕೊಂಡಿದ್ದ, 3ನೇ ವರ್ಷದ ವನಮಹೋತ್ಸವ ಕಾರ್ಯಕ್ರಮವನ್ನು ಗಿಡನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕದ ಅರಣ್ಯ ಸಂಪತ್ತನ್ನು ವೃದ್ಧಿಸುವ ನಿಟ್ಟಿನಲ್ಲಿ ಸರ್ಕಾರ ಲಕ್ಷವೃಕ್ಷ ಬೃಹತ್ ಕಾರ್ಯಕ್ರಮವನ್ನು  ಹಮ್ಮಿಕೊಂಡಿದೆ. ಈ ಕಾರ್ಯಕ್ರಮಕ್ಕೆ ಇತರೆ ಇಲಾಖೆಗಳು,ಸ್ವಯಂಸೇವಾ ಸಂಘಸಂಸ್ಥೆಗಳ ಪೂರ್ಣ ಸಹಕಾರ ಅಗತ್ಯವೆಂದು ಸಚಿವರು ತಿಳಿಸಿದರು.ಸಚಿವರೊಂದಿಗೆ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಹರೀಶ್ ರೈ, ನಗರ ಪಾಲಿಕೆ  ಸದಸ್ಯರಾದ ಶಶಿಧರ ಹೆಗ್ಡೆ, ಡಿಸಿಎಫ್ ಓ ಪಾಲಯ್ಯ,ವಲಯ ಸಂರಕ್ಷಣಾಧಿಕಾರಿ ಕ್ಲಿಫರ್ಡ್ ಲೋಬೋ ಅವರನ್ನೊಳಗೊಂಡಂತೆ ಗಣ್ಯರು, ಪತ್ರಕರ್ತರು ಹಾಜರಿದ್ದರು.