Wednesday, August 7, 2013

ಶಾಲೆಯಿಂದ ಹೊರಗುಳಿದ ಮಕ್ಕಳ ಪತ್ತೆಕಾರ್ಯ

ಮಂಗಳೂರು, ಆಗಸ್ಟ್.07:-ದಿನಾಂಕ 02-08-2013ರಂದು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್.ಸಿ ರವರ ನೇತೃತ್ವದಲ್ಲಿ ಶಾಲೆಯಿಂದ ಹೊರಗುಳಿದ, ಭಿಕ್ಷೆ ಬೇಡುವ ಅಜಯ್, ಲಲಿತಾ, ಖಾದಲಿನ್ ಮತ್ತು ರಾಕೇಶ್ ಎಂಬ 14 ವರ್ಷದೊಳಗಿನ 4 ಮಕ್ಕಳನ್ನು ಗುರುತಿಸಿ, ಸರ್ವ ಶಿಕ್ಷಣ ಅಭಿಯಾನದಿಂದ ನಡೆಸಲ್ಪಡುವ ಚಿಣ್ಣರ ತಂಗುಧಾಮ ಕಾಪಿಕಾಡು ಇಲ್ಲಿಗೆ ಸೇರಿಸಲಾಯಿತು.
    ದಾಳಿ ಸಮಯದಲ್ಲಿಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ  ಪೀತಾಂಬರ.ಕೆ ನೋಡೆಲ್ಅಧಿಕಾರಿ ದಯಾನಂದ ಪಾಟಾಳಿ.ಕೆ, ಬಿ.ಆರ್.ಪಿಗಳಾದ ಗ್ರೇಸಿ ಡೇಸಾ, ಮ್ಯಾಗ್ದಲಿನ್ ಡಿಸೋಜ, ಸಿ.ಆರ್.ಪಿಗಳಾದ ಜಗದೀಶ್ ನಾವಡ, ಜೋಯ್ಸ್ಡಿಸೋಜ ಮತ್ತು ಮಕ್ಕಳ ರಕ್ಷಣಾಘಟಕದ ಜಿಲ್ಲಾಧಿಕಾರಿ ಗ್ರೇಸಿ ಗೊನ್ಸಾಲಿಸ್,ಚೈಲ್ಡ್ ಲೈನ್ ಮತ್ತು ಕಾಪಿಕಾಡು ಚಿಣ್ಣರ ತಂಗುಧಾಮದ ಸಿಬ್ಬಂದಿಗಳು ಹಾಜರಿದ್ದರು. ಬಂದರು ಪೊಲೀಸ್ಠಾಣೆಯ ಸಿಬ್ಬಂದಿ ಹಾಗೂ ಟ್ರಾಫಿಕ್ ಪೊಲೀಸ್ ಎ.ಎಸ್.ಐರೋಸಮ್ಮ ದಾಳಿಯ ಸಮಯದಲ್ಲಿ ಸಹಕರಿಸಿದರು.
    ರಾಜಸ್ಥಾನ ಹಾಗೂ ಉತ್ತರ ಭಾರತದ ವಿವಿಧ ರಾಜ್ಯಗಳಿಂದ ಬಲೂನ್ ಹಾಗೂ ಇತರ ಆಟಿಕೆಗಳನ್ನು ಮಾರಾಟ ಮಾಡಲು ಬಂದ ಪೋಷಕರೊಂದಿಗಿನ ಮಕ್ಕಳು ಮಂಗಳೂರು ನಗರದಲ್ಲಿ  ಭಿಕ್ಷಾಟಣೆಯಲ್ಲಿ ನಿರತರಾಗಿದ್ದು, ಈ ಮಕ್ಕಳನ್ನು ಶಾಲೆಗೆ ಸೇರಿಸಲುಸರ್ವ ಶಿಕ್ಷಣ ಅಭಿಯಾನಯೋಜನೆಯ ಸಹಕಾರದೊಂದಿಗೆ ಚಿಣ್ಣರ ತಂಗುಧಾಮಕ್ಕೆ ನಿರಂತರಕ್ರಮ ಕೈಗೊಳ್ಳಲಾಗುತ್ತಿದೆ.