Sunday, October 2, 2011

ನರಿಕೊಂಬು ಗ್ರಾಮದಲ್ಲಿ ಕೊರಗರಿಗೆ ಮಾದರಿ ಮನೆ

ಮಂಗಳೂರು,ಅಕ್ಟೋಬರ್.02: ಜಿಲ್ಲೆಯ ಅತ್ಯಂತ ಹಿಂದುಳಿದ ಸಮುದಾಯವೆಂದು ಗುರುತಿಸಲ್ಪಟ್ಟ ಕೊರಗ ಕುಟುಂಬದ 1126 ಜನರಿಗೆ ಘಟಕ ವೆಚ್ಚ ತಲಾ 2.09 ಲಕ್ಷದಂತೆ ಮನೆ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ ಪಾಲೆಮಾರ್ ಹೇಳಿದರು.ಅವ ರಿಂದು ನಾಗ ರೀಕ ಜಾಗೃತ ಸಮಿತಿ ನರಿ ಕೊಂಬು, ನರಿ ಕೊಂಬು ಗ್ರಾಮ ಪಂಚಾ ಯತ್, ರೋಟರಿ ಕ್ಲಬ್ ಬಂಟ್ವಾಳ ಮತ್ತು ಜಿಲ್ಲಾ ಪಂಚಾ ಯತ್ ಸಹ ಯೋಗ ದೊಂದಿಗೆ ಬಂಟ್ವಾಳ ತಾಲೂ ಕಿನ ನರಿಕೊಂಬು ಗ್ರಾಮದಲ್ಲಿ ಕೊರಗ ಸಮುದಾಯದವರಿಗೆ ನೂತನವಾಗಿ ನಿರ್ಮಿಸಿರುವ ಮನೆಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರ ದಿಂದ ದೊರೆ ಯುವ ಅನು ದಾನದ ಜೊತೆ ಕುದುರೆ ಮುಖ ಕಬ್ಬಿಣ ಅದಿರು ಕಂಪೆನಿ ಮತ್ತು ಎಸ್ ಇ ಝಡ್ ನವರ ಸಹ ಕಾರ ದಿಂದ ಈ ಮನೆ ಗಳನ್ನು ಆದಷ್ಟು ಶೀಘ್ರ ನಿರ್ಮಿಸಿ ನೀಡುವ ಯೋಜನೆ ಇದೆ ಎಂದು ಸಚಿವರು ಹೇಳಿದರು.ತಲಾ 3.50 ಸೆಂಟ್ಸ್ ಸ್ಥಳದಲ್ಲಿ ಇಂದು ನಿರ್ಮಾಣ ಗೊಂಡ ಮೂರು ಮನೆ ಗಳಿಗೆ ಸಹ ಕಾರ ನೀಡಿ ದವ ರನ್ನು ಶ್ಲಾಘಿ ಸಿದ ಸಚಿವರು, ಸ್ಥಳೀಯ ರಾದ ರೊಟೇ ರಿಯನ್ ಪ್ರಕಾಶ್ ಕಾರಂತ ಹಾಗೂ ಇತರರ ಸಾಮಾ ಜಿಕ ಜವಾ ಬ್ದಾರಿಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿ ಸಿದರು. ಸಮಾರಂಭದಲ್ಲಿ ನೂತನ ಗೃಹ ಉದ್ಘಾಟನೆ ಮಾಡಿದ ಸಂಸದ ನಳಿನ್ ಕುಮಾರ್ ಕಟೀಲ್ ಶುಭ ಹಾರೈಸಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಶೈಲಜಾಭಟ್, ತಾ.ಪಂ ಅಧ್ಯಕ್ಷರಾದ ಶೈಲಜಾ ಶೆಟ್ಟಿ,ಜಿ.ಪಂ ಸದಸ್ಯರಾದ ಮಮತಗಟ್ಟಿ, ಸಿಇಒ ಡಾ ಕೆ ಎನ್ ವಿಜಯಪ್ರಕಾಶ್, ಐಟಿಡಿಪಿ ಅಧಿಕಾರಿ ಡಾ ಹಲಗಪ್ಪ ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡರು.