Tuesday, October 4, 2011

ನ20 ರಿಂದ ಡಿ30ರವರೆಗೆ ಜಿಲ್ಲೆಯಲ್ಲಿ ಸಾಮಾಜಿಕ,ಆರ್ಥಿಕ ಮತ್ತು ಜಾತಿಗಣತಿ

ಮಂಗಳೂರು,ಅಕ್ಟೋಬರ್.04: ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯ ಹಾಗೂ ಕೇಂದ್ರ ವಸತಿ ಮತ್ತು ನಗರ ಬಡತನ ನಿರ್ಮೂಲನಾ ಮಂತ್ರಾಲಯದ ನಿರ್ದೇಶನದಂತೆ ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳನ್ನು ಗುರುತಿಸುವ ಸಲುವಾಗಿ ಸಾಮಾಜಿಕ, ಆರ್ಥಿಕ ಮತ್ತು ಜಾತಿ ಗಣತಿ-2011 ನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ನಡೆಸಲು ದಕ್ಷಿಣ ಕನ್ನಡ ಅಪರ ಜಿಲ್ಲಾಧಿಕಾರಿ ದಯಾನಂದ ಕೆ ಎ ಅವರು ಅಧಿಕಾರಿಗಳ ಪೂರ್ವಭಾವಿ ಸಭೆ ನಡೆಸಿದರು.
ಜಿಲ್ಲಾಧಿ ಕಾರಿ ಗಳ ಕಚೇರಿ ಯಲ್ಲಿ ಇಂದು ನಡೆ ಸಿದ ಸಭೆ ಯಲ್ಲಿ ಗಣತಿ ಸಂ ಬಂಧ ಅಧಿ ಕಾರಿ ಗಳು ನಡೆಸಿ ರುವ ತಯಾರಿ ಯನ್ನು ಪರಿ ಶೀಲನೆ ನಡೆ ಸಿದ ಅಪರ ಜಿಲ್ಲಾ ಧಿಕಾ ರಿಗಳು, ಸಮಗ್ರ ಗಣ ತಿಗೆ ಪೂರ್ವ ತಯಾ ರಿಯ ಅಗತ್ಯ ವನ್ನು ಅಧಿ ಕಾರಿ ಗಳು ಮನ ಗಾಣ ಬೇಕೆಂದು ಸೂಚಿಸಿದರು. ಎರಡು ದಿವಸಗಳೊಳಗೆ ಗಣತಿದಾರರನ್ನು ಬ್ಲಾಕ್ ಮಟ್ಟದಲ್ಲಿ ನೇಮಿಸಲು ಪಟ್ಟಿ ಸಿದ್ಧಪಡಿಸಬೇಕೆಂದು ಸೂಚಿಸಿದ ಅಪರ ಜಿಲ್ಲಾಧಿಕಾರಿಗಳು, ಶಿಕ್ಷಕರನ್ನು ಗಣತಿ ಕಾರ್ಯದಿಂದ ಈ ಬಾರಿ ಹೊರಗಿರಿಸಲಾಗಿದ್ದು ಅಂಗನವಾಡಿ, ಆಶಾ ಕಾರ್ಯಕರ್ತೆಯರು ಅಥವಾ ಎಸ್ ಎಸ್ ಎಲ್ ಸಿ ಮುಗಿಸಿದ ಅರ್ಹರನ್ನು ನೇಮಿಸಬಹುದೆಂದು ತಿಳಿಸಿದರು.ಗಣತಿ ಕಾರ್ಯ ದಲ್ಲಿ ನಾಲ್ಕು ಬ್ಲಾಕ್ ಗಳ ಗಣತಿ ನಡೆಸಿ ದವರಿಗೆ ಗರಿಷ್ಠ 18,000 ರೂ.ಗಳ ವರೆಗೆ ಗೌರ ವ ಧನ ನೀಡಲು ಅವ ಕಾಶ ವಿದ್ದು ಅಂಗನ ವಾಡಿ ಕಾರ್ಯ ಕರ್ತೆ ಯರು ಸಕ್ರಿ ಯವಾಗಿ ಗಣತಿ ಕಾರ್ಯ ದಲ್ಲಿ ಪಾಲ್ಗೊ ಳ್ಳಲು ಕೋರಿದೆ. 1931 ರ ನಂತರ ಪ್ರಥಮ ಬಾರಿಗೆ ಈ ಮಾದರಿ ಗಣತಿ ನಡೆ ಯುತ್ತಿದ್ದು ಹಲವು ರಾಜ್ಯ ಗಳಲ್ಲಿ ಈಗಾ ಗಲೇ ಗಣತಿ ಮುಗಿ ದಿದೆ. ಜಿಲ್ಲೆ ಯಲ್ಲಿ ನವೆಂಬರ್ 20 ರಿಂದ ಡಿಸೆಂಬರ್ 30ರವರೆಗೆ 40 ದಿನಗಳ ಕಾಲ ಗಣತಿ ನಡೆಯಲಿದೆ. 2001ರ ಜನಗಣತಿ ಮಾದರಿಯಂತೆ 4 ಬ್ಲಾಕ್ ಗಳನ್ನು ಒಬ್ಬರಿಗೆ ನೀಡಲಾಗುವುದು.
ತಾಲೂಕುಗಳಿಗೆ ತಹಸೀಲ್ದಾರ್ ಮುಖ್ಯಸ್ಥರಾಗಿದ್ದು, ಕಾರ್ಯನಿರ್ವಾಹಕ ಅಧಿಕಾರಿಗಳು ನೋಡಲ್ ಅಧಿಕಾರಿಗಳಾಗಿರುತ್ತಾರೆ. ನಗರ ಪ್ರದೇಶಕ್ಕೆ ಆಯುಕ್ತರು/ ಮುಖ್ಯಾಧಿಕಾರಿಗಳು ನೋಡಲ್ ಅಧಿಕಾರಿಗಳಾಗಿರುತ್ತಾರೆ. ಅನಿವಾರ್ಯ ಸಂದರ್ಭಗಳಲ್ಲಿ ಬೇರೆಯವರನ್ನು ನೇಮಿಸುವ ಅಧಿಕಾರ ಗಣತಿ ಅಧಿಕಾರಿಯಾಗಿರುವ ಅಪರ ಜಿಲ್ಲಾಧಿಕಾರಿಗಳಿಗಿರುತ್ತದೆ.
ಜಿಲ್ಲೆಗೆ 21+7 ಮಾಸ್ಟರ್ ಟ್ರೈನರ್ಸ್ ಗಳಿದ್ದು, ಬೆಲ್ ಸಂಸ್ಥೆಯಿಂದ ಟ್ಯಾಬ್ಲೆಟ್ ಪಿ ಸಿ(ಲ್ಯಾಪ್ ಟಾಪ್) ಮತ್ತು ಆಪರೇಟರ್ ಗಣತಿದಾರರ ಜೊತೆಗಿರುತ್ತಾರೆ. ಪ್ರತೀ 48 ಗಂಟೆಗಳಿಗೊಮ್ಮೆ ಮಾಹಿತಿ ಅಪ್ ಲೋಡ್ ಮಾಡಲು ಸೂಚಿಸಲಾಗಿದೆ. ಆರು ಗಣತಿದಾರರಿಗೆ ಒಬ್ಬರು ಮೇಲ್ವಿಚಾರಕರಿರುತ್ತಾರೆ.
ಅಕ್ಟೋಬರ್ 10 ರಂದು ಜಿಲ್ಲಾಧಿಕಾರಿಗಳ ಕಾನ್ಫರೆನ್ಸ್ ಹಾಲ್ ನಲ್ಲಿ ಒಂದು ದಿನ ಎಲ್ಲ ನೋಡಲ್ ಅಧಿಕಾರಿಗಳಿಗೆ ತರಬೇತಿಯಿದ್ದು, ಪರವಾಗಿ ಯಾರನ್ನೂ ಕಳುಹಿಸದೆ ಖುದ್ದಾಗಿ ನೋಡಲ್ ಅಧಿಕಾರಿಗಳು ತರಬೇತಿಯಲ್ಲಿ ಪಾಲ್ಗೊಳ್ಳಬೇಕೆಂದು ಅಪರ ಜಿಲ್ಲಾಧಿಕಾರಿ ದಯಾನಂದ್ ಸೂಚಿಸಿದರು.
ನವೆಂಬರ್ 2, 3 ಮತ್ತು 4ರಂದು ಮಾಸ್ಟರ್ ಟ್ರೈನರ್ಸ್ ತಾಲೂಕು ಮಟ್ಟದವರಿಗೆ 3 ದಿನಗಳ ತರಬೇತಿಯನ್ನು ನೀಡಲಿರುವರು. ಕೆಲಸದ ಹೊರೆಯನ್ನು ನಿಭಾಯಿಸಲು ಹೊರಗುತ್ತಿಗೆ ಆಧಾರದಲ್ಲಿ ತಾಲೂಕು ಕೇಂದ್ರಗಳಲ್ಲಿ ಡಾಟಾ ಆಪರೇಟರ್ ಮತ್ತು ಡಿ ಗ್ರೂಪ್ ನೌಕರರನ್ನು ನೇಮಿಸಲು ಅವಕಾಶ ಕಲ್ಪಿಸಲಾಗಿದೆ.
ರಾಷ್ಟ್ರೀಯ ಜನಗಣತಿ ಮೊದಲ ಹಂತದಲ್ಲಿ ಎನ್ ಪಿ ಆರ್ (ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟ್ರಾರ್ ನ್ನು ಆಧಾರವಾಗಿರಿಸಿ ಹಾಗೂ ಈ ಮಾಹಿತಿಯನ್ನು ಅಪ್ ಡೇಟ್ ಮಾಡಲು ಸಾಮಾಜಿಕ, ಆರ್ಥಿಕ ಮತ್ತು ಜಾತಿ ಗಣತಿ-2011 ನೆರವಾಗಲಿದೆ.
ಮಾಸ್ಟರ್ ಟ್ರೈನರ್ ನಾಗೇಂದ್ರ ಅವರು ಟ್ಯಾಬ್ಲೆಟ್ ಪಿ ಸಿಯನ್ನು ಬಳಸುವ ಬಗ್ಗೆ,ಗಣತಿ ಕಾರ್ಯದ ಬಗ್ಗೆ ಮಾಹಿತಿಯನ್ನು ನೀಡಿದರು.