Tuesday, October 11, 2011

ಪಾರದರ್ಶಕ ಆಡಳಿತ ನೀತಿಗೆ ಸರ್ಕಾರ ಬದ್ದ: ಡಿ.ವಿ.ಸದಾನಂದ ಗೌಡ

ಮಂಗಳೂರು,ಅಕ್ಟೋಬರ್.11:ಪಾರದರ್ಶಕ ಆಡಳಿತ ನೀತಿಗೆ ರಾಜ್ಯ ಸರ್ಕಾರ ಬದ್ದವಾಗಿದ್ದು,ಆಡಳಿತದಲ್ಲಿ ಯಾವುದೇ ಕಾರಣಕ್ಕೂ ಭ್ರಷ್ಟಚಾರ ಸಹಿಸುದಿಲ್ಲ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು ಹೇಳಿದರು.ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಈಶ್ವರ ಮಂಗಲದ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ನಡೆದ ಸಾರ್ವಜನಿಕ ಸನ್ಮಾನವನ್ನು ಸ್ವೀಕರಿಸಿ ಮುಖ್ಯಮಂತ್ರಿಗಳು ಮಾತನಾಡಿದರು.ಈಗಾ ಗಲೇ ಸರ್ಕಾರ ದಲ್ಲಿನ ಉನ್ನತ ಮಟ್ಟದ ಅಧಿ ಕಾರಿ ಗಳು ಆಡ ಳಿತ ವ್ಯ ವಸ್ಥೆಗೆ ವೇಗ ನೀಡಲು ಇಚ್ಚಾ ಶಕ್ತಿ ಹೊಂದಿ ದ್ದಾರೆ.ತಾಲೂಕು ಕಚೇರಿ ಗಳಲ್ಲಿ ಜನ ಸಾಮ ನ್ಯರ ಕಡತ ಗಳು 15 ದಿನ ಕ್ಕಿಂತ ಹೆಚ್ಚು ಉಳಿ ಯಬಾ ರದು.15 ದಿನ ಗಳ ಬಳಿಕವೂ ಕಡತಗಳು ವಿಲೆಯಾಗದೆ ಉಳಿದರೆ ಸಂಬಂಧಪಟ್ಟ ಅಧಿಕಾರಿಗೆ ದಿನವೊಂದಕ್ಕ ನೂರು ರೂಪಾಯಿಗಳ ದಂಡ ವಿಧಿಸಲಾಗುವುದು.ಇದು ಮುಂದಿನ ನಾಲ್ಕು ತಿಂಗಳೊಳಗೆ ಅನುಷ್ಟಾನಕ್ಕೆ ತರುವಂತೆ ಈಗಾಗಲೇ ಸೂಚಿಸಲಾಗಿದೆ ಎಂದರು.ಪಾರದರ್ಶಕ ಆಡಳಿತ ನೀತಿಗೆ ಅನುಗುಣವಾಗಿ ಮುಖ್ಯಮಂತ್ರಿ ಕಚೇರಿ,ವಿಧಾನ ಸೌಧ ಸೇರಿದಂತೆ ತನ್ನ ಸರ್ಕಾರಿ ಕಚೇರಿಗಳಲ್ಲಿ ಸಿಸಿಟಿವಿ ಕ್ಯಾಮರಗಳನ್ನು ಅಳವಡಿಸಲಾಗುವುದು.ಮುಖ್ಯಮಂತ್ರಿಗಳ ಇಮೇಲ್ ವಿಳಾಸವನ್ನು ಸಾರ್ವಜನಿಕರಿಗೆ ನೀಡಲಾಗುವುದು ಇದರಿಂದ ಜನರು ತಮ್ಮ ದೂರುದುಮ್ಮನಗಳನ್ನು ನೇರವಾಗಿ ಮುಖ್ಯಮಂತ್ರಿಗೆ ಸಲ್ಲಿಸಲು ಅನುಕೂಲವಾಗುವುದು,ಮುಂದಿನ ಬಜೆಟ್ ರಾಜ್ಯದ ಸಮಗ್ರ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಮುಖ್ಯಮಂತ್ರಿಗಳು ನುಡಿದರು.ಡಾ.ಕಲ್ಲಡ್ಕ ಪ್ರಭಾ ಕರ ಭಟ್ ಅವರು ಸಮಾ ರಂಭದ ಅಧ್ಯ ಕ್ಷತೆ ಯನ್ನು ವಹಿ ಸಿದ್ದರು. ಕುಂ ಟಾರು ರವೀಶ ತಂತ್ರಿ ಅವರು ಮುಖ್ಯ ಮಂತ್ರಿ ಗಳನ್ನು ಸನ್ಮಾ ನಿಸಿ ಅಭಿ ನಂದಿ ಸಿದರು.ಜಿಲ್ಲಾ ಉಸ್ತು ವರಿ ಸಚಿವ ರಾದ ಕೃಷ್ಣ ಜೆ.ಪಾಲೆ ಮಾರ್,ವಿಧಾನ ಸಭಾ ಉಪ ಸಭಾ ಧ್ಯಕ್ಷ ಎನ್.ಯೋಗಿಶ್ ಭಟ್,ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್,ಶಾಸಕಿ ಮಲ್ಲಿಕಾ ಪ್ರಸಾದ್,ಕೆಎಸ್ ಆರ್ ಟಿಸಿ ಉಪಾ ಧ್ಯಕ್ಷ ಜಗ್ಗೇಶ್,ರಾಜ್ಯ ಬಾಲ ಭವನ ಸೊಸೈಟಿ ಅಧ್ಯಕ್ಷೆ ಸುಲೋಚನ ಭಟ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ರಂಗಮೂರ್ತಿ,ವಿಜಯ ರೆಡ್ಡಿ,ಮಂತ್ರಾಲಯದ ಕಾರ್ಯದರ್ಶಿ ಸುಯಮೀಂದ್ರ ಆಚಾರ್,ಕೃಷ್ಣ ಪ್ರಸಾದ್ ಅಡ್ಯಂತಯ,ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶೈಲಜಾ ಭಟ್,ಸಮಾರಂಭದಲ್ಲಿ ಉಪಸ್ಥಿತರಿದ್ದರು.