Saturday, October 1, 2011

ಆಧಾರ್ ಶ್ರೀ ಸಾಮಾನ್ಯನ ಅಧಿಕಾರ: ವಿದ್ಯಾಶಂಕರ್

ಮಂಗಳೂರು, ಅಕ್ಟೋಬರ್. 01: ಜಿಲ್ಲೆಯಲ್ಲಿ ಆಧಾರ್ ಪ್ರಕ್ರಿಯೆಗೆ ವೇಗೋತ್ಕರ್ಷ ನೀಡುವ ಸಂಬಂಧ ಕೈಗೊಂಡಿರುವ ಎಲ್ಲ ಕ್ರಮಗಳು/ಆದೇಶಗಳ ಪ್ರತಿಯನ್ನು ಇ ಗವರ್ನನೆನ್ಸ್ ಇಲಾಖೆಗೆ ಕಳುಹಿಸಿಕೊಡುವಂತೆ ಇ ಆಡಳಿತದ ಪ್ರಧಾನ ಕಾರ್ಯದರ್ಶಿ ಎಂ ಎನ್ ವಿದ್ಯಾಶಂಕರ್ ಅವರು ತಿಳಿಸಿದರು.ಇಂದು ಸಂಜೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಆಧಾರ್ ನ ಪ್ರಕ್ರಿಯೆಯಲ್ಲಾಗಿರುವ ಅಭಿವೃದ್ಧಿಗಳನ್ನು ಪರಿಶೀಲಿಸಿದ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಧಾರ್ ಅನುಷ್ಠಾನಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.
ಎಲ್ಲರ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಿಕೊಂಡು ಆಧಾರ್ ನ ಅಗತ್ಯವನ್ನು ಜನರಿಗೆ ತಿಳಿಹೇಳಿ ಎಂದ ಅವರು, ಯಾವುದೇ ಸಮಸ್ಯೆ ಇದ್ದರೂ ತಮ್ಮನ್ನು ಇ ಮೇಲ್ ಮುಖಾಂತರ ಸಂಪರ್ಕಿಸಿ ಎಂದು ಸಹಾಯಕ ಆಯುಕ್ತರಾದ ಡಾ ವೆಂಕಟೇಶ್ ಅವರಿಗೆ ಹೇಳಿದರು.ವಿಡಿಯೋ ಕಾನ್ಫರೆನ್ಸ್ ನಲ್ಲಿ ಸಿಇಒ ರವೀಂದ್ರನ್ ಅವರು ಉಪಸ್ಥಿತರಿದ್ದರು.
ಆಧಾರ್ ಎನ್ ರೋಲ್ ಮೆಂಟ್ ಗೆ ವೆರಿಫೈಯರ್ಸ್ ನ್ನು ಚುನಾವಣಾ ಪ್ರಕ್ರಿಯೆಗೆ ನೇಮಿಸುವ ತರಹವೇ ಗಂಭೀರವಾಗಿ ಪರಿಗಣಿಸಿ ನೇಮಿಸಿ ಎಂದು ವಿದ್ಯಾಶಂಕರ್ ಹೇಳಿದರು. ಜಿಲ್ಲೆಯಲ್ಲಿ ಆಧಾರ್ ಮೇಲ್ವಿಚಾರಣೆ ನೋಡಿಕೊಳ್ಳುತ್ತಿರುವ ಸಾಂಖ್ಯಿಕ ಅಧಿಕಾರಿ ಸಂಧ್ಯಾ ಉಪಸ್ಥಿತರಿದ್ದರು.