Friday, October 7, 2011

ತುಳು ಸಂಶೋಧಕರಿಗೆ ಪ್ರೋತ್ಸಾಹ: ಇಂಧನ ಸಚಿವರು

ಮಂಗಳೂರು, ಅಕ್ಟೋಬರ್.07: ತುಳು ಭಾಷೆಯನ್ನು ಬೆಳೆಸಲು ಸರ್ಕಾರ ಬದ್ಧವಾಗಿದ್ದು, ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಸರ್ವಯತ್ನ ಮಾಡಲಾಗುವುದು. ಈಗಾಗಲೇ ಪಠ್ಯದಲ್ಲಿ ತುಳು ಭಾಷೆಯನ್ನು ಪರಿಚಯಿಸಲಾಗಿದ್ದು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ತುಳು ಭಾಷೆಯ ಬಗ್ಗೆ ಸಂಶೋಧನೆ ನಡೆಸಲಾಗುತ್ತಿದೆ ಎಂದು ರಾಜ್ಯದ ಇಂಧನ ಹಾಗೂ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವರಾದ ಕುಮಾರಿ ಶೋಭಾ ಕರಂದ್ಲಾಜೆಯವರು ನುಡಿದರು.ಅವರು ರಾಜ್ಯ ತುಳು ಅಕಾ ಡೆಮಿ ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗ ಳೂರು, ವಿದ್ಯಾ ರಶ್ಮಿ ಸಮೂಹ ಸಂಸ್ಥೆ ಗಳು ಸವಣೂ ರಿನಲ್ಲಿ ಏರ್ಪ ಡಿಸಿದ ಅಖಿಲ ಭಾರತ ತುಳು ಸಾಹಿತ್ಯ ಸಮ್ಮೇ ಳನ 2011 ರಲ್ಲಿ ತುಳು ಲೇಖ ಕರು ಬರೆದ ತುಳು ಸಾಹಿತ್ಯ ಪುಸ್ತಕ ಗಳನ್ನು ಬಿಡು ಗಡೆ ಗೊಳಿಸಿ ಮಾತ ನಾಡು ತ್ತಿದ್ದರು.2009 ರಲ್ಲಿ ಶ್ರೀ ಕ್ಷೇತ್ರ ಧರ್ಮ ಸ್ಥಳದ ವತಿ ಯಿಂದ ನಡೆಸ ಲಾದ ವಿಶ್ವ ತುಳು ಸಮ್ಮೇ ಳನ ಅತ್ಯಂತ ಯಶಸ್ವಿ ಯಾಗಿ ನೆರ ವೇರಿ ವಿಶ್ವ ದೆಲ್ಲೆಡೆ ತುಳು ಭಾಷೆ ಪಸರಿಸಿ ದಂತಾ ಗಿದೆ ಎಂದರು.
ವಿಶ್ವದೆಲ್ಲೆಡೆ ತುಳು ಭಾಷೆ ಮಾತನಾಡುವವರು ಇದ್ದಾರೆಂದ ಅವರು ತುಳು ಭಾಷೆ ಸಂಶೋಧನೆಗಾಗಿ ವಾರ್ಷಿಕ 10 ಲಕ್ಷ ರೂ. ನೀಡುವುದಾಗಿ ನುಡಿದರು. ಸಮ್ಮೇಳನವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧಧಿಕಾರಿಯವರಾದ ಡಾ.ವೀರೇಂದ್ರ ಹೆಗಡೆಯವರು ಉದ್ಘಾಟಿಸಿ ಮಾತನಾಡುತ್ತಾ, ತುಳುನಾಡು ಪರಶುರಾಮನ ಸೃಷ್ಠಿಯಾಗಿದ್ದು, ಹಲವಾರು ಕ್ಷೇತ್ರಗಳು ರಾರಾಜಿಸುತ್ತಿವೆ. ನಾಡಿನಲ್ಲಿ ನಾಗಾರಾಧನೆ ಅತ್ಯಂತ ಶ್ರೇಷ್ಠ ಪೂಜೆಯಾಗಿದೆ. ವಿಶ್ವದಾದ್ಯಂತ ಪ್ರವಾಸಿಗರು ತುಳುನಾಡಿನ ಮಹತ್ವವನ್ನು ಅರಿತು ಎಲ್ಲಾ ಕ್ಷೇತ್ರಗಳಿಗೆ ವರ್ಷಂ ಪ್ರತಿ ಭೇಟಿ ನೀಡುತ್ತಾರೆಂದು ನುಡಿದರು.ಸಮ್ಮೇ ಳನದ ಅಧ್ಯಕ್ಷ ತೆಯನ್ನು ದಕ್ಷಿಣ ಕನ್ನಡ ಸಂಸ ದರಾದ ನಳಿನ್ ಕುಮಾರ್ ಕಟೀಲ್ ವಹಿ ಸಿದ್ದರು.ಮುಖ್ಯ ಅತಿಥಿ ಗಳಾಗಿ ತುಳು ಸಾಹಿತ್ಯ ಅಕಾಡೆ ಮಿಯ ಸ್ಥಾಪ ಕಾಧ್ಯ ಕ್ಷರಾದ ಹಾಗೂ ಹಾಲಿ ಜರ್ಮನ್ ವಿ.ವಿ.ಯಲ್ಲಿ ಸಂದ ರ್ಶಕ ಪ್ರಾದ್ಯಾ ಪಕ ರಾಗಿ ಸೇವೆ ಸಲ್ಲಿ ಸುತ್ತಿ ರುವ ಪ್ರೊ.ವಿವೇಕ ರೈ,ವಿಶ್ವ ವಿದ್ಯಾ ನಿಲಯದ ಕುಲ ಸಚಿವ ಡಾ. ಚಿನ್ನಪ್ಪ ಗೌಡ,ತುಳು ಸಾಹಿತ್ಯ ಅಕಾಡೆಮಿಯ ಹಾಲಿ ಅಧ್ಯಕ್ಷರಾಗಿರುವ ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್, ಮುಂಬಯಿಯ ಹಿರಿಯ ಸಾಹಿತಿ ಸುನೀತ ಶೆಟ್ಟಿ ಉಪಸ್ಥಿತರಿದ್ದರು. ವಿದ್ಯಾರಶ್ಮಿ ಸಮೂಹ ಸಂಸ್ಥೆಗಳ ಸ್ಥಾಪಕಾಧ್ಯಕ್ಷರಾದ ಸೀತಾರಾಮ ರೈ ಪ್ರಸ್ತಾವನೆಗೈದು ಅತಿಥಿಗಳನ್ನು ಸ್ವಾಗತಿಸಿದರು.