Tuesday, October 25, 2011

ಬರ ಮತ್ತು ವಿದ್ಯುತ್ ಕೊರತೆ ನೀಗಿಸಲು ಪ್ರಥಮ ಆದ್ಯತೆ; ಮುಖ್ಯಮಂತ್ರಿಗಳು

ಮಂಗಳೂರು,ಅಕ್ಟೋಬರ್.26: ನಾಡಿನ ಜನತೆಗೆ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ದೀಪಾವಳಿ ಶುಭಾಶಯಗಳನ್ನು ಹೇಳಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು ಬೆಳಕಿನ ಹಬ್ಬವಾದ ದೀಪಾವಳಿ ನಾಡಿನ ಜನತೆಗೆ ಸುಖ-ಶಾಂತಿ ಮತ್ತು ನೆಮ್ಮದಿ,ಸಮೃದ್ದಿ ಸಹ ಬಾಳ್ವೆಯನ್ನು ತರಲಿ ಎಂದು ಮುಖ್ಯಮಂತ್ರಿಗಳು ಹಾರೈಸಿದರು.ರಾಜ್ಯದ ಅನೇಕ ಭಾಗ ಗಳಲ್ಲಿ ಬರ ಪರಿಸ್ಥಿತಿ ತಲೆ ದೋರಿದ ಹಿನ್ನೆಲೆ ಯಲ್ಲಿ ದೀಪಾ ವಳಿ ಹಬ್ಬ ವನ್ನು ತಾನು ಆಚರಿ ಸಲ್ಲ ಎಂದ ಮುಖ್ಯ ಮಂತ್ರಿ ಗಳು, ಬರ ಪರಿಸ್ಥಿತಿಯನ್ನು ಎದು ರಿಸಲು ಈಗಾಗಲೇ ರಾಜ್ಯ ಸರ್ಕಾರ 200 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದು ಹೆಚ್ಚುವರಿಯಾಗಿ 82 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.ಈ ಹಣ ಈಗಾಗಲೇ ಆಯಾಯ ಜಿಲ್ಲಾಧಿಕಾರಿಗಳ ಬಳಿ ಇದ್ದು ಕೂಡಲೇ ವಿನಿಯೋಗಿಸಲು ಸೂಚನೆ ನೀಡಲಾಗಿದೆ ಎಂದರು.
ರಾಜ್ಯದಲ್ಲಿನ ವಿದ್ಯುತ್ ಕೊರತೆ ನೀಗಿಸಲು ಕ್ರಮ ಕೈಗೊಳ್ಳಲಾಗಿದ್ದು ಚತ್ತೀಸ್ ಘಡದಿಂದ 200 ಮೆಗಾ ವ್ಯಾಟ್ ವಿದ್ಯುತ್ ಖರೀದಿ ಮಾಡಲಾಗಿದೆ ಮತ್ತು ರಾಜ್ಯದ ಸಕ್ಕರೆ ಕಾರ್ಖಾನೆಗಳಲ್ಲಿ ಉತ್ಪಾದನೆಯಾಗುತ್ತಿರುವ 500 ಮೆಗಾ ವ್ಯಾಟ್ ವಿದ್ಯುತ್ ಖರೀದಿ ಮಾಡಲು ಸರ್ಕಾರ ತೀರ್ಮಾನಿಸಿದೆ. ಕಡಿಮೆ ದರದಲ್ಲಿ ವಿದ್ಯುತ್ ನೀಡಲು ಸಕ್ಕರೆ ಕಾರ್ಖಾನೆ ಮಾಲಿಕರು ಒಪ್ಪಿಗೆ ನೀಡಿದ್ದು,ಈ ಪ್ರಕ್ರಿಯೆ ಪೂರ್ಣ ಗೊಳಿಸಲು 7 ದಿನಗಳ ಕಡಿಮೆ ಅವಧಿಯ ಟೆಂಡರ್ ಕರೆಯಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಮುಂದಿನ ವಾರದೊಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಮುಖ್ಯಮಂತ್ರಿಗಳು ನುಡಿದರು.