Saturday, October 22, 2011

ಮಂಗಳೂರಿನಲ್ಲಿ 17ನೇ ರಾಷ್ಟ್ರೀಯ ಯುವಜನೋತ್ಸವ

ಮಂಗಳೂರು,ಅಕ್ಟೋಬರ್.22: ಜನವರಿ 12ರಿಂದ 16ರವರೆಗೆ 17ನೇ ರಾಷ್ಟ್ರೀಯ ಯುವಜನೋತ್ಸವವನ್ನು ವಿಜೃಂಭಣೆಯಿಂದ ಮಂಗಳೂರಿನಲ್ಲಿ ಆಯೋಜಿಸಲು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ. ಕೃಷ್ಣ ಪಾಲೇಮಾರ್ ಅವರ ಅಧ್ಯಕ್ಷತೆಯಲ್ಲಿ ಇಂದು ಪೂರ್ವಭಾವಿ ಸಭೆ ನಡೆಯಿತು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಚಿವರು, ರಾಷ್ಟ್ರೀಯ ಮಟ್ಟದ ಈ ಉತ್ಸವವನ್ನು ಎಲ್ಲರ ಸಹಕಾರ ಹಾಗೂ ಸಮನ್ವಯದಿಂದ ಅತ್ಯುತ್ತಮವಾಗಿ ಎಲ್ಲರೂ ಶ್ಲಾಘಿಸುವಂತೆ ಏರ್ಪಡಿಸಬೇಕೆಂದು ಸೂಚಿಸಿದರು.
ರಾಷ್ಟ್ರ ಮಟ್ಟದಲ್ಲಿ ಮಂಗಳೂರು ಗುರುತಿಸಲ್ಪಡುವ ಅತ್ಯುತ್ತಮ ಅವಕಾಶ ನಮ್ಮ ಜಿಲ್ಲೆಗೆ ಬಂದಿದ್ದು, ಅವಕಾಶದ ಸದ್ಬಳಕೆಯ ಜೊತೆಗೆ ಕರಾವಳಿಯ ವೈಶಿಷ್ಟ್ಯ ವನ್ನು, ಆತಿಥ್ಯವನ್ನು ಅತಿಥಿಗಳಿಗೆ ನೀಡಲು ಎಲ್ಲರೂ ಒಗ್ಗಟ್ಟಿನಿಂದ ಕರ್ತವ್ಯ ನಿರ್ವಹಿಸಬೇಕೆಂದರು. ಹಲವು ಸಮಾರಂಭಗಳನ್ನು ನಿರ್ವಹಿಸಿ ಹೆಸರು ಮಾಡಿದ ಮಹನೀಯರು ಜಿಲ್ಲೆಯಲ್ಲಿದ್ದು, ಜಿಲ್ಲಾಡಳಿತ ಇಂತಹ ಪರಿಣತರ ನೆರವನ್ನು, ಯುವಶಕ್ತಿಯನ್ನು ಈ ಸಂದರ್ಭದಲ್ಲಿ ಬಳಸಿಕೊಳ್ಳಬೇಕೆಂದು ನುಡಿದರು.
ಅತಿಥಿಗಳಿಗೆ ವಸತಿ ಮತ್ತು ಸಾರಿಗೆ ವ್ಯವಸ್ಥೆ ಹಾಗೂ ಊಟದ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಿ ಎಲ್ಲ ಸಮಿತಿಗಳಲ್ಲೂ ಜನಪ್ರತಿನಿಧಿಗಳನ್ನು ಸೇರಿಸಿಕೊಂಡು ಉತ್ಸವ ಯಶಸ್ವಗೊಳಿಸಬೇಕು ಎಂದ ಅವರು, ನಗರದ ಎಲ್ಲ ದೇವಾಲಯ, ಮಸೀದಿ, ಚರ್ಚು ಗಳು ಈ ದಿನಗಳಲ್ಲಿ ದೀಪಾಲಂಕಾರಗಳಿಂದ ಕಂಗೊಳಿಸಬೇಕು. ಇದಕ್ಕೆ ಎಲ್ಲ ಧಾರ್ಮಿಕ ಸಂಸ್ಥೆಗಳವರೇ ಸ್ವಯಂ ಸನ್ನದ್ಧರಾಗಬೇಕೆಂದರು. ಮಹಾನಗರಪಾಲಿಕೆ ನಗರದ ಸೌಂದರ್ಯ ಮತ್ತು ದೀಪಾಲಂಕಾರದ ಹೊಣೆ ವಹಿಸಬೇಕು ಎಂದ ಅವರು, ವಿಫುಲ ಪ್ರವಾಸಿ ಕ್ಷೇತ್ರಗಳನ್ನು ಹೊಂದಿರುವ ನಗರದಲ್ಲಿ ಎಲ್ಲರಿಗೂ ಅನುಕೂಲವಾಗುವಂತೆ ಮಾರ್ಗದರ್ಶಕ ಫಲಕಗಳಿರಬೇಕೆಂದರು. ಅತಿಥಿಗಳಿಗೆ ಊಟ ಹಾಗೂ ವ್ಯವಸ್ಥೆಯಲ್ಲಿ ಯಾವುದೇ ಕುಂದುಂಟಾಗ ಬಾರದು. ನಗರದಲ್ಲೆಡೆ ಹಬ್ಬದ ವಾತಾವರಣವಿರಬೇಕೆಂದರು. ಸಭೆ ಯಲ್ಲಿ ಉಪಸ್ಥಿ ತರಿದ್ದ ಉಪ ಸಭಾ ಪತಿ ಗಳಾದ ಎನ್. ಯೋ ಗೀಶ್ ಭಟ್ ಅವರು ಮಾತ ನಾಡಿ, ದಕ್ಷಿಣ ಕನ್ನಡ ಜಿಲ್ಲೆಯು ಆದಾರಾ ತಿಥ್ಯಕ್ಕೆ ಹೆಸ ರಾಗಿದ್ದು, ಎಲ್ಲ ವಲ ಯದ ಪರಿಣ ತರ ನೆರ ವಿನಿಂದ ಯುವ ಜನೋ ತ್ಸವ ಯಶಸ್ವಿ ಯಾಗು ವಂತೆ ನೋಡಿ ಕೊಳ್ಳುವ ಹೊಣೆ ಯರಿತು ಕಾರ್ಯೋ ನ್ಮುಖ ರಾಗ ಬೇಕೆಂ ದರು. ಆರು ಸಾವಿರ ಅತಿಥಿ ಗಳನ್ನು ದೇಶ ದೆಲ್ಲೆಡೆ ಯಿಂದ ನಿರೀಕ್ಷಿ ಸಲಾ ಗುತ್ತಿದ್ದು, ನಮ್ಮ ಪ್ರವಾಸೋದ್ಯಮ ಅಭಿವೃದ್ಧಿಗೆ ಇದೊಂದು ಅತ್ಯುತ್ತಮ ವೇದಿಕೆಯಾಗಲಿದೆ. ಉತ್ತಮವಾಗಿ ಕಾರ್ಯಕ್ರಮ ಆಯೋಜಿಸುವುದರಿಂದ ರಾಷ್ಟ್ರದೆಲ್ಲೆಡೆ ಜಿಲ್ಲೆಯ ಬಗ್ಗೆ ಉತ್ತಮ ಸಂದೇಶ ಹರಿಯಲಿದೆ ಎಂದರು. ರಾಜ್ಯ ಮಟ್ಟದಲ್ಲಿ ಈ ಸಂಬಂಧ ಪೂರ್ವಭಾವಿ ಸಭೆಯಾಗಿದ್ದು, ಜಿಲ್ಲೆಯಲ್ಲಿ ಪ್ರಥಮ ಸಭೆ ಇದಾಗಿದೆ. ಈ ಸಂಬಂಧ ಹಲವು ಸಮಿತಿಗಳನ್ನು ರಚಿಸಲಾಗಿದ್ದರೂ ಮುಂದಿನ ಸಭೆಯಲ್ಲಿ ಸಮಿತಿಗೆ ಅಂತಿಮ ರೂಪು ರೇಷೆ ನೀಡಲಾಗುವುದು ಎಂದು ಸಭೆಯಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿದ ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪ ಗೌಡ ತಿಳಿಸಿದರು. ಯುವ ಜನ ಸೇವೆ ಮತ್ತು ಕ್ರೀಡಾ ಇಲಾಖೆ ನಿರ್ದೇಶಕರಾದ ಡಾ ಚಂದ್ರಶೇಖರ್ ಅವರು ಯುವಜನೋತ್ಸವದ ಆಶಯವನ್ನು ಸಭೆಗೆ ವಿವರಿಸಿದರು. ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಕಸಾಪ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ಅವರನ್ನೊಳಗೊಂಡಂತೆ ಎಲ್ಲ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.