ಜಿಲ್ಲಾ ಪಂಚಾ ಯತ್ ಸಭಾಂಗ ಣದಲ್ಲಿ ಇಂದು ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.ಮರಳು ನೀತಿಯಿಂದಾಗಿ ಜಿಲ್ಲೆಯಲ್ಲಿ ಮನೆಕಟ್ಟಲು ಮರಳು ಸಿಗದಂತಾಗಿದೆ. ಇದರಿಂದ ಜನಸಾಮಾನ್ಯರು ತೊಂದರೆ ಪಡುವಂತಾಗಿದೆ ಎಂದು ಸಭೆಯಲ್ಲಿ ಉಪಸ್ಥಿರಿದ್ದ ಶಾಸಕರಾದ ಯು.ಟಿ.ಖಾದರ್, ಅಭಯಚಂದ್ರ ಜೈನ್ ಹಾಗೂ ಕೋಟ ಶ್ರೀನಿವಾಸ ಪೂಜಾರಿ ವಿಷಯ ಪ್ರಸ್ತಾಪಿಸಿದರು. ಸರಕಾರದಿಂದ ಆದೇಶಬರುವವರೆಗೆ ಮಾನವಶ್ರಮದಿಂದ ಮರಳುಗಾರಿಕೆ ನಡೆಸಲು ಪರವಾನಿಗೆ ನೀಡುವಂತೆ ಸೂಚಿಸಿದರು. ಈ ಸಂದರ್ಭ ಮನೆಕಟ್ಟಲು ಅಗತ್ಯವಾದ ಕೆಂಪುಕಲ್ಲಿನ ಕೊರತೆಯ ಸಮಸ್ಯೆ ಸಭೆಯಲ್ಲಿ ಪ್ರಸ್ತಾಪವಾಯಿತು.ಪಡಿತರ ಚೀಟಿಯಲ್ಲಾಗಿರುವ ಸಮಸ್ಯೆ ಚರ್ಚೆಗೆ ಉತ್ತರಿಸಿದ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಉಪನಿರ್ದೇಶಕರು, ಬಡ ಕುಟುಂಬಗಳು ತಾವು ವಾಸ್ತವ್ಯ ಇರುವ ಕುರಿತಂತೆ ಸ್ಥಳೀಯ ಪಿಡಿಒಗಳಿಂದ ವಾಸ್ತವ್ಯ ಸರ್ಟಿಫಿಕೇಟ್ ಗಳನ್ನು ನೀಡಿದ್ದಲ್ಲಿ ಅಂತಹವರಿಗೆ ಪಡಿತರ ಚೀಟಿಗಳನ್ನು ಮತ್ತೆ ಮುಂದುವರಿಸಲಾಗುವುದು ಎಂದು ಹೇಳಿದರು.
ನಿಗ ದಿತ ದರ ಕ್ಕಿಂತ ಹೆಚ್ಚಿನ ಬೆಲೆಗೆ ರಸ ಗೊಬ್ಬ ರಗ ಳನ್ನು ಪೂ ರೈಕೆ ಮಾಡು ವುದು ಕಂಡು ಬಂದರೆ ತಕ್ಷಣ ಅಧಿ ಕಾರಿ ಗಳು ದಾಳಿ ನಡೆಸಿ ವಶ ಪಡಿಸಿ ಕೊಳ್ಳಿ. ಇದಕ್ಕೆ ಅಗತ್ಯ ವಾದ ಪೊಲೀಸ್ ನೆರವು, ಸ್ಥಳೀಯ ತಹ ಶೀಲ್ದಾ ರರ ನೆರ ವನ್ನು ಪಡೆದು ಕೊಳ್ಳಿ ಎಂದು ಜಿಲ್ಲಾ ಉಸ್ತು ವಾರಿ ಸಚಿವರು ಕೃಷಿ ಇಲಾಖೆಯ ಅಧಿಕಾ ರಿಗಳಿಗೆ ಸೂಚಿ ಸಿದರು.ಈ ಬಗ್ಗೆ ಜಾಗೃತ ದಳ ರಚಿಸಿ ದಾಳಿ ನಡೆಸಲು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್ ಸೂಚನೆ ನೀಡಿದ್ದರು. ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಪದ್ಮಯ್ಯ ನಾಯಕ್ ಸಾಮಾನ್ಯ ಸಭೆಯ ನಿರ್ಣಯದ ಹಿನ್ನೆಲೆಯಲ್ಲಿ ನಿನ್ನೆ ನಡೆದಿರುವ ಬೆಳವಣಿಗೆಯ ಕುರಿತಂತೆ ಮಾಹಿತಿ ನೀಡಿದರು. ರಸಗೊಬ್ಬರವನ್ನು ಅಕ್ರಮವಾಗಿ ಅಧಿಕ ಬೆಲೆಗೆ ಮಾರಾಟ ಮಾಡುವವರಿಗೆ ಲೈಸೆನ್ಸ್ ರದ್ದುಪಡಿಸಲು ನೋಟೀಸು ನೀಡುವ ಎಚ್ಚರಿಕೆ ನೀಡಲಾಗಿದೆ. ಮಾತ್ರವಲ್ಲದೆ ನಿನೆ ಜಾಗೃತ ದಳದ ಅಧಿಕಾರಿಗಳು ಸುಳ್ಯ ಮತ್ತು ಉಪ್ಪಿನಂಗಡಿ ಮತ್ತು ನೆಲ್ಯಾಡಿ ಪ್ರದೇಶಗಳಿಗೆ ಭೇಟಿ ನೀಡಿ ನಿಗದಿತ ದರದಲ್ಲಿ ಮಾರಾಟ ಮಾಡಲು ಸೂಚಿರುವುದಾಗಿ ತಿಳಿಸಿದರು.ರಸಗೊಬ್ಬರದ ಮೇಲೆ ಹಾಕಲಾಗಿರುವ ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಯನ್ನು ಮಾರಾಟದಾರರು ಕೇಳಿದರೆ ತಕ್ಷಣ ಸಹಾಯಕ ಕೃಷಿ ನಿರ್ದೇಶಕರಿಗೆ ದೂರು ನೀಡುವಂತೆ ಕೋರಿಕೊಂಡರಲ್ಲದೆ, ಇತರ ಅಧಿಕಾರಿಗಳ ನೆರವನ್ನು ಅವರು ಕೋರಿದರು.
ಮಂಗ ಳೂರು ವಿಮಾನ ನಿಲ್ದಾ ಣದ ರನ್ ವೇ ವಿಸ್ತ ರಣೆ ಹಾಗೂ ಅಂತಾ ರಾಷ್ಟ್ರೀಯ ನಿರ್ಮಾ ಣವಾ ಗಿಸಲು ಡೆಕ್ಕನ್ ಪಾರ್ಕ್ ಭೂ ಸ್ವಾಧೀ ನಕ್ಕೆ 3,09,19,560 ರೂ. ಹಾಗೂ ರೆನ್ವೇ ವಿಸ್ತ ರಣೆಗೆ 150 ಎಕರೆ ಜಮೀನಿನ ಭೂ ಸ್ವಾಧೀ ನಕ್ಕೆ ತಗಲುವ ಅಂ ದಾಜು ವೆಚ್ಚ 138.39 ಕೋಟಿ ರೂ. ಬಿಡು ಗಡೆಗೆ ಸರ ಕಾರಕ್ಕೆ ಪ್ರಸ್ತಾ ವನೆ ಸಲ್ಲಿಸಲಾಗಿದೆ ಎಂಬ ಮಾಹಿತಿಯನ್ನು ಅಧಿಕಾರಿಗಳು ಸಭೆಗೆ ನೀಡಿದರು.ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಎಲ್ಲಾ ರಸ್ತೆಗಳ ಹೊಂಡಗಳನ್ನು ಮುಚ್ಚಿಸಲು ಸಂಬಂಧಪಟ್ಟ ಎಲ್ಲಾ ವಿಭಾಗದ ಅಧಿಕಾರಿಗಳು ಕಾರ್ಯತತ್ಪರರಾಗಿ ಕ್ರಮ ಕೈಗೊಳ್ಳಬೇಕು. ಜನವರಿಯೊಳಗೆ ಎಲ್ಲಾ ರಸ್ತೆಗಳ ಹೊಂಡ ಮುಚ್ಚಿಸಬೇಕು. ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಆದೇಶ ನೀಡಿದ್ದಾರೆ ಎಂದು ಸಚಿವ ಪಾಲೆಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶೈಲಜಾ ಭಟ್, ಉಪಾಧ್ಯಕ್ಷರಾದ ಧನಲಕ್ಷ್ಮಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಜನಾರ್ದನ ಗೌಡ, ನವೀನ್ ಕುಮಾರ್ ಮೇನಾಲ ಉಪಸ್ಥಿತರಿದ್ದರು.