Monday, October 24, 2011

'ನಮ್ಮ ಗ್ರಾಮ - ನಮ್ಮ ರಸ್ತೆ' ಕಾಮಗಾರಿಗೆ ಮುಖ್ಯಮಂತ್ರಿ ಚಾಲನೆ

ಮಂಗಳೂರು,ಅಕ್ಟೋಬರ್.24:ಮುಖ್ಯಮಂತ್ರಿ ಗ್ರಾಮಸಡಕ್ ಯೋಜನೆಯ 'ನಮ್ಮ ಗ್ರಾಮ - ನಮ್ಮ ರಸ್ತೆ' ಯೋಜನೆಯಡಿ ರಸ್ತೆ ಅಭಿವೃದ್ದಿ ಕಾಮಾಗಾರಿಗಳಿಗೆ ಪುತ್ತೂರಿನಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಇಂದು ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿ ಗ್ರಾಮಸಡಕ್ ಯೋಜನೆಯ 'ನಮ್ಮ ಗ್ರಾಮ - ನಮ್ಮ ರಸ್ತೆ' ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯ 7,916 ಕಿ.ಮೀ. ಉದ್ದದ ಗ್ರಾಮೀಣ ರಸ್ತೆಯಲ್ಲಿ 2,653 ಕಿ.ಮೀ ರಸ್ತೆಯ ಗುಂಡಿ ಮುಚ್ಚುವ ಕಾಮಗಾರಿಗೆ ರೂ.13.16 ಕೋಟಿ ಬಿಡುಗಡೆಯಾಗಿದೆ ಮತ್ತು ಮಾಣಿ-ಸಂಪಾಜೆ ರಸ್ತೆಯ ಕಾಮಗಾರಿಗಳನ್ನು ಮಾರ್ಚ್ ಒಳಗಡೆ ಮುಗಿಸಬೇಕೆಂದು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ ಮತ್ತು ಈ ಸಂಬಂಧ ನಾಳೆ ಮಂಗಳೂರಿನಲ್ಲಿ ಅಧಿಕಾರಿಗಳ ಸಭೆ ನಡೆಸಲಾಗುವುದು ಎಂದು ಹೇಳಿದರು.ಇಡೀ ರಾಜ್ಯದ ವಿವಿಧ ರಸ್ತೆಗಳ ಅಭಿ ವೃದ್ದಿಗೆ ಸಂಬಂ ಧಿಸಿ ದಂತೆ 875 ಕೋಟಿ ರೂ.ಗಳನ್ನು ಬಿಡು ಗಡೆ ಮಾಡಲು ಹಣ ಕಾಸು ಇಲಾಖೆ ಒಪ್ಪಿಗೆ ನೀಡಿದೆ.ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಿಗೂ ಯಾವುದೇ ರಾಜಕೀಯ ಮಾಡದೆ ರಸ್ತೆಗಳ ಅಭಿವೃದ್ದಿಗೆ ಸಮಾನವಾಗಿ ಹಣವನ್ನು ಬಿಡುಗಡೆ ಮಾಡಲಾಗುವುದು.ಇದೊಂದು ಮಾದರಿ ಕಾರ್ಯಕ್ರಮವಾಗಿದೆ.ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ ಪ್ರತೀ ವಿಧಾನ ಸಭಾ ಕ್ಷೇತ್ರಕ್ಕೆ ತಲಾ 20 ಕಿ.ಮೀ ನಂತೆ 139 ಕಿ.ಮೀ ರಸ್ತೆಯನ್ನು 45.45 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದರು.ಪುತ್ತೂರಿನಲ್ಲಿ ನಿರ್ಮಾಣವಾಗುತ್ತಿರುವ ಮಿನಿ ವಿಧಾನ ಸೌಧಕ್ಕೆ 9 ಕೋಟಿ ರೂಪಾಯಿಗಳ ವೆಚ್ಚದ ಅಂದಾಜು ಸಿದ್ದ ಪಡಿಸ ಲಾಗಿದ್ದು, ಬಿಡು ಗಡೆ ಯಾದ 3.5 ಕೋಟಿ ರೂ.ಗಳಲ್ಲಿ 2.8 ಕೋಟಿ ರೂ.ಗಳ ಕಾಮಗಾರಿ ನಡೆದಿದ್ದು, 2 ನೇ ಹಂತದಲ್ಲಿ 5.5 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿದರು.ಜಿಲ್ಲೆಯ ಅಡಿಕೆ ಬೆಳೆಗಾರರಿಗೆ ಆದ ನಷ್ಟವನ್ನು ಭರಿಸಲಿಕ್ಕೆ ಸರ್ಕಾರ ಬದ್ಧವಾಗಿದ್ದು,ಖಂಡಿತವಾಗಿಯೂ ಒಳ್ಳೆಯ ಪರಿಹಾರವನ್ನು ನೀಡಲಾಗುವುದು ಎಂಬ ಭರವಸೆ ನೀಡಿದರು.ಸಂಕಷ್ಟದಲ್ಲಿರುವ ಜನತೆ ನೇರವಾಗಿ ದೂರು ದಾಖಲಿಸಲು ಅನುಕೂಲವಾಗುವಂತೆ 24x7 ದೂರು ದಾಖಲಿಸುವ ವಿಭಾಗ ರಚನೆಗೆ ಈಗಾಗಲೇ ನಿರ್ಧರಿಸಲಾಗಿದ್ದು,ಇದೇ ನವೆಂಬರ್ 1 ರಂದು ಇದಕ್ಕೆ ಚಾಲನೆ ನೀಡಲಾಗುವುದು,ಅರಣ್ಯ ಇಲಾಖೆಯ ಭೂಮಿಯನ್ನು ಹೊರತು ಪಡಿಸಿ ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಲು ಅಡಿಪಾಯ ಹಾಕಿದ ಬಡ ಕುಟುಂಬಗಳಿಗೆ ಮನೆ ನಿರ್ಮಾಣ ಮಾಡಲು ಸಾಧ್ಯವಾಗುವಂತೆ ಹಕ್ಕು ಪತ್ರಗಳನ್ನು ನೀಡಲು ಅನುಕೂಲವಾಗುವಂತೆ ಕಾನೂನಿನಲ್ಲಿ ತಿದ್ದುಪಡಿ ತರಲು ಮುಂದಿನ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗುವುದು, ಒಟ್ಟಾರೆಯಾಗಿ ರಾಜ್ಯದ ಜನತೆ ನೆಮ್ಮದಿಯಿಂದ ಇರಲು ಹಾಗೂ ಒಳ್ಳೆಯ ಮತ್ತು ಜನಪರ ಆಡಳಿತ ನೀಡಲು ತಾನು ಬದ್ದನಾಗಿದ್ದೇನೆ ಎಂದು ಮುಖ್ಯಮಂತ್ರಿಗಳು ಹೇಳಿದರು.ಪುತ್ತೂರು ಮತ್ತು ಸುಳ್ಯದ ಎರಡು ಕಾಮ ಗಾರಿ ಗಳಿಗೆ ಮುಖ್ಯ ಮಂತ್ರಿ ಗಳು ಇದೇ ಸಂದ ರ್ಭದಲ್ಲಿ ಶಂಕು ಸ್ಥಾಪನೆ ನೆರ ವೇರಿ ಸಿದರು.ಪುತ್ತೂರು ತಾಲೂಕಿನ ಒಟ್ಟು 23.33 ಕಿ.ಮೀ ಉದ್ದದ ರಸ್ತೆಗೆ 678.77 ಲಕ್ಷ ರೂ.ಗಳ ಅನು ದಾನ ಬಿಡು ಗಡೆ ಯಾಗಿದೆ.ಸುಳ್ಯ ತಾಲೂಕಿನ 20.87 ಕಿ.ಮೀ ಉದ್ದದ ರಸ್ತೆಗೆ 688.08 ಲಕ್ಷ ರೂ.ಗಳ ಅನುದಾನ ಬಿಡುಗಡೆಯಾಗಿದೆ.ಪುತ್ತೂರು ಶಾಸಕ ರಾದ ಮಲ್ಲಿಕಾ ಪ್ರಸಾದ್ ಅವರು ಅಥಿತಿ ಗಳನ್ನು ಸ್ವಾಗ ತಿಸಿ ಪ್ರಾಸ್ತಾ ವಿಕ ಮಾತು ಗಳನ್ನಾ ಡಿದರು.ಜಿಲ್ಲಾ ಉಸ್ತುವರಿ ಸಚಿವ ರಾದ ಕೃಷ್ಣ ಜೆ.ಪಾಲೆ ಮಾರ್,ಇಂಧನ ಸಚಿವೆ ಶೋಭಾ ಕರಂದ್ಲಾಜೆ,ಸಂಸದ ನಳಿನ್ ಕುಮಾರ್ ಕಟೀಲ್,ಸೇರಿದಂತೆ ಮತ್ತಿತರ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.