Monday, October 24, 2011

50 ಅರ್ಹರಿಗೆ ರಾಜ್ಯೋತ್ಸವ ಪ್ರಶಸ್ತಿ: ಮುಖ್ಯಮಂತ್ರಿ ಸದಾನಂದ ಗೌಡ

ಮಂಗಳೂರು,ಅಕ್ಟೋಬರ್.24 : ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಯನ್ನು 50ಕ್ಕೆ ಸೀಮಿತಗೊಳಿಸಲಾಗಿದೆ ಎಂದು ಸನ್ಮಾನ್ಯ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.
ವಿವಿಧ ಕಾರ್ಯ ಕ್ರಮ ಗಳಲ್ಲಿ ಪಾಲ್ಗೊ ಳ್ಳಲು ದಕ್ಷಿಣ ಕನ್ನಡ ಜಿಲ್ಲೆಗೆ ಆಗ ಮಿಸಿದ ಅವರು ಸುಳ್ಯದ ಹೆಲಿ ಪ್ಯಾಡಿ ನಲ್ಲಿ ಸುದ್ದಿ ಗಾರ ರೊಂದಿಗೆ ಮಾತ ನಾಡಿ ದರು. ರಾಜ್ಯ ದಲ್ಲಿ ಏಕಲವ್ಯ ಪ್ರಶಸ್ತಿ ಯನ್ನು ಈಗಾಗಲೇ 15 ಕ್ಕೆ ಸೀಮಿತಗೊಳಿಸಲಾಗಿದೆ, ಅದೇ ಮಾದರಿಯಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು 50 ಕ್ಕೆ ಸೀಮಿತಗೊಳಿಸಲಾಗುವುದು. ಪ್ರಶಸ್ತಿಗೆ 4 ಸಾವಿರ ಅರ್ಜಿಗಳು ಬಂದಿದ್ದು, ಈ ಸಂಬಂಧ 26 ಮತ್ತು 28 ರಂದು ತಾನೇ ಖುದ್ದಾಗಿ ಅರ್ಜಿಗಳನ್ನು ಪರಿಶೀಲನೆ ನಡೆಸುವುದಾಗಿ ಹೇಳಿದ ಮುಖ್ಯಮಂತ್ರಿಗಳು ಮೆರಿಟ್ ಆಧಾರದಲ್ಲಿ ಜಿಲ್ಲೆಗೆ ಒಂದರಂತೆ ಮೂವತ್ತು ಜನ ಅರ್ಹರಿಗೆ ವಿವಿಧ ಕ್ಷೇತ್ರಗಳಲ್ಲಿನ ಅವರ ಸಾಧನೆಗಳನ್ನು ಪರಿಗಣಿಸಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗುವುದು ಎಂದರು.ಪಡಿತರ ಚೀಟಿ ಗಳ ಸಮಸ್ಯೆ ಗಳಿಗೆ ಸಂಬಂ ಧಿಸಿದ ಪ್ರಶ್ನೆ ಗಳಿಗೆ ಉತ್ತ ರಿಸಿದ ಮುಖ್ಯ ಮಂತ್ರಿ ಗಳು ರಾಜ್ಯ ದಲ್ಲಿ ಸುಮಾರು 30 ಲಕ್ಷ ಬೋ ಗಸ್ ರೇಷನ್ ಕಾರ್ಡು ಗಳಿವೆ ಎಂಬ ವರದಿ ಅಧಿ ಕಾರಿ ಗಳಿಂದ ಬಂದಿದ್ದು ಮುಂದಿನ ಒಂದು ತಿಂಗ ಳೊಳಗೆ ಈ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಲಾಗುವುದು ಎಂದರು.ಎಲ್ ಪಿಜಿ ಗ್ಯಾಸ್ ಸಂಪರ್ಕ ಕೇಂದ್ರ ಸರ್ಕಾ ರದ ವ್ಯಾಪ್ತಿಗೆ ಬರು ತ್ತಿದೆ, ಆದರೂ ಬಡ ವರಿಗೆ ಯಾವುದೇ ತೊಂದರೆ ಗಳಾದ ರೀತಿ ಯಲ್ಲಿ ಮತ್ತು ವಾಣಿಜ್ಯ ಉದ್ದೇಶ ಕ್ಕಾಗಿ ದುರ್ಬ ಳಕೆ ಆಗದ ರೀತಿ ಯಲ್ಲಿ ಕ್ರಮ ಕೈ ಗೊಳ್ಳ ಲಾಗು ವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ರಾಷ್ಟ್ರೀಯ ಅಭಿವೃದ್ದಿ ಸಮಿತಿಯ ಮುಂದೆ ರಾಜ್ಯಕ್ಕೆ ಸಂಬಂಧಿಸಿದಂತೆ ಪ್ರಮುಖ 12 ಬೇಡಿಕೆಗಳನ್ನು ಇಡಲಾಗಿದ್ದು ಇದು ಪರಿಶೀಲನೆಯ ಹಂತದಲ್ಲಿದೆ ಮತ್ತು ರಾಜ್ಯಕ್ಕೆ 2 ಐಐಟಿಗಳನ್ನು ನೀಡಲು ಕೇಂದ್ರ ಮುಂದೆ ಬಂದಿದೆ ಎಂದರು.
ರಾಜ್ಯದಲ್ಲಿ ಸರ್ವೇಯರ್ ಗಳ ಕೊರತೆಯನ್ನು ನೀಗಿಸಲು 2 ಸಾವಿರ ಸರ್ವೇಯರ್ ಗಳನ್ನು ಒಂದು ವರ್ಷದೊಳಗೆ ನೇಮಕ ಮಾಡಲಾಗುವುದು. ವಿಶೇಷ ತಹಸಿಲ್ದಾರರನ್ನು ನೇಮಕ ಮಾಡಲು ಕ್ರಮ ಕೈಗೊಳ್ಳಲಾಗುವುದು.ಭ್ರಷ್ಟಾಚಾರದ ಬಗ್ಗೆ ಈಗಾಗಲೇ ಸ್ಪಷ್ಟ ಸಂದೇಶ ಹೋಗಿದ್ದು, ಭ್ರಷ್ಟಾಚಾರದ ಬಗ್ಗೆ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ಮಾಹಿತಿ ನೀಡಿದರು.ಅತಿ ವೃಷ್ಟಿ ಮತ್ತು ಅನ ವೃಷ್ಟಿಯ ಎರಡೂ ಸಮಸ್ಯೆ ಗಳು ರಾಜ್ಯ ದಲ್ಲಿವೆ ಮತ್ತು ಈ ಸಮಸ್ಯೆ ಗಳನ್ನು ಬಗೆ ಹರಿ ಸಲು ಸಾಕಷ್ಟು ಅನು ದಾನ ಕೂಡ ಸರ್ಕಾ ರದ ಬಳಿ ಇದೆ.ಯಾವುದೇ ತೊಂದರೆ ಇಲ್ಲದೇ ಸಮಸ್ಯೆ ಗಳನ್ನು ಯಶಸ್ವಿ ಯಾಗಿ ಬಗೆ ಹರಿ ಸಲಾ ಗುವುದು ಎಂದರು.ಸುಳ್ಯ ಶಾಸಕ ರಾದ ಅಂಗಾರ,ಕರಾ ವಳಿ ಅಭಿ ವೃದ್ದಿ ಪ್ರಾಧಿ ಕಾರದ ಅಧ್ಯಕ್ಷ ಬಿ.ನಾಗ ರಾಜ ಶೆಟ್ಟಿ, ಬಿಜೆಪಿ ಜಿಲ್ಲಾ ಧ್ಯಕ್ಷ ಪದ್ಮ ನಾಭ ಕೊಟ್ಟಾರಿ,ಜಿಲ್ಲಾಧಿ ಕಾರಿ ಡಾ.ಚನ್ನಪ್ಪ ಗೌಡ,ಜಿಲ್ಲಾ ಪೋಲಿಸ್ ವರಿಷ್ಟಾ ಧಿಕಾರಿ ಲಾಬೂ ರಾಂ,ಸ್ಥಳಿಯ ಮುಖಂಡರುಗಳಾದ ಮನ್ಮಥ ಕುಮಾರ್,ವೆಂಕಟ್ ದಂಬೆಕೋಡಿ,ಪುಲಸ್ಯಾ ರೈ,ಮತ್ತಿರರು ಮುಖ್ಯಮಂತ್ರಿಗಳನ್ನು ಸ್ವಾಗತಿಸಿದರು.