Saturday, October 1, 2011

ಜೀವವೈವಿಧ್ಯ ರಕ್ಷಣೆಗೆ ಆದ್ಯತೆ: ಅಶೀಸರ

ಮಂಗಳೂರು,ಅಕ್ಟೋಬರ್.01: ರಾಜ್ಯದಲ್ಲಿ ಅಳಿವಿನಂಚಿನಲ್ಲಿರುವ ಜೀವವೈವಿಧ್ಯ ರಕ್ಷಣೆ ಸೇರಿದಂತೆ ಅರಣ್ಯ ಇಲಾಖೆಯ ಸಹಕಾರದಿಂದ ವಿನಾಶದತ್ತ ಸರಿಯುತ್ತಿರುವ ಔಷಧಿ ಸಸ್ಯಗಳನ್ನು ರಕ್ಷಿಸಿ ಔಷಧೀ ವನಗಳನ್ನು ನಿರ್ಮಿಸಲು 10 ಹೊಸ ಪ್ರದೇಶಗಳನ್ನು ಗುರುತಿಸಲಾಗಿದೆ ಎಂದು ಪಶ್ಚಿಮ ಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಹೇಳಿದರು.ಮಂಗ ಳೂರಿನ ಉಪ ಅರಣ್ಯ ಸಂರ ಕ್ಷಣಾ ಧಿಕಾ ರಿಗಳ ಕಚೇರಿ ಯಲ್ಲಿ ಆಯೋ ಜಿಸಿದ್ದ ಪತ್ರಿಕಾ ಗೋಷ್ಠಿ ಯನ್ನು ದ್ದೇಶಿಸಿ ಮಾತ ನಾಡಿದ ಅವರು, ಸುಬ್ರ ಹ್ಮಣ್ಯ, ಶಿರಾಡಿ, ಚಾ ರ್ಮಾಡಿ ಮತ್ತಿ ತರ ಕಡೆ ಹೊಸ ಔಷಧಿ ಸಂ ರಕ್ಷಿತ ಪ್ರದೇ ಶಗ ಳನ್ನು ಗುರುತಿಸಲಾಗಿದ್ದು ಈ ಸಂಖ್ಯೆ ಈಗ 23ಕ್ಕೆ ಏರಿದೆ. ಇಂತಹ ಔಷಧಿ ಸಸ್ಯಗಳುಳ್ಳ 50 ಅಥವಾ 100 ಎಕರೆ ಪ್ರದೇಶಗಳನ್ನು ಗುರುತಿಸಿ ಇದರ ರಕ್ಷಣೆಯ ಕಾರ್ಯಕ್ಕೆ ಒತ್ತು ನೀಡಲಾಗಿದೆ. ಇದರೊಂದಿಗೆ ಸಂಶೋಧನಾ ಸಂಸ್ಥೆಗಳನ್ನು ಕೂಡ ಸೇರಿಸಿಕೊಳ್ಳುವ ಪ್ರಯತ್ನ ಆಗಿದೆ ಎಂದರು.
ಅರಣ್ಯ ಇಲಾಖೆ ಮಂಗಳೂರು ವಿಭಾಗ ಮತ್ತು ಪಶ್ಚಿಮಘಟ್ಟ ಕಾರ್ಯಪಡೆಯ ಸಹಭಾಗಿತ್ವದಲ್ಲಿ ಈಗಾಗಲೇ `ಕರಾವಳಿ ಹಸಿರು ಕವಚ ಯೋಜನೆ' ರೂಪಿಸಲಾಗಿದೆ. ಕಡಲ್ಕೊರೆತ ನಿವಾರಣೆಗೆ ಕಡಲ ತೀರ ಪ್ರದೇಶದಲ್ಲಿ ಗಿಡ ನೆಡುವ ಕಾರ್ಯವಾಗುತ್ತಿದೆ. ಕಡಲ್ಕೊರೆತ ಹೆಚ್ಚು ಇರುವ ಪ್ರದೇಶದಲ್ಲಿ ಲಾವಂಚ ಮತ್ತು ಹೊನ್ನೆಗಿಡಗಳನ್ನು ಹೆಚ್ಚಾಗಿ ಬೆಳೆಸುವ ನಿಟ್ಟಿನಲ್ಲಿ ಅಧ್ಯಯನ ನಡೆಸಲಾಗಿದೆ ಎಂದು ಅಶೀಸರ ತಿಳಿಸಿದರು.
ಕುಂದಾಪುರ ಭಾಗದಲ್ಲಿ 37 ಎಕರೆ ಪ್ರದೇಶದಲ್ಲಿ ಹೊನ್ನೆಗಿಡ ಮತ್ತು ಲಾವಂಚ ಗಿಡಗಳನ್ನು ನೆಡಲಾಗಿದೆ. ಕೂಳೂರ್ ನಿಂದ ಬೆಂಗರೆವರೆಗೆ ಸುಮಾರು 6 ಕಿ.ಮೀ.ವ್ಯಾಪ್ತಿಯಲ್ಲಿ 1200 ಸಸಿಗಳನ್ನು ನೆಡಲಾಗಿದೆ. ಉಳ್ಳಾಲದಿಂದ ಕೋಟೆಪುರವರೆಗೆ 700, ತಲಪಾಡಿಯಿಂದ ಉಚ್ಚಿಲದವರೆಗೆ 2000,ಬೆಂಗರೆ ಬಿಟ್-1ನಲ್ಲಿ 4000, ಬೆಂಗರೆ ಬಿಟ್-2ರಲ್ಲಿ 2000, ಸಸಿಹಿತ್ಲುವಿನಲ್ಲಿ 6250, ಮತ್ತು ಮಂಗಳೂರಿನ 8 ವಲಯದಲ್ಲಿ 75,000 ಗಿಡಗಳನ್ನು 2011-12ರ ಅವಧಿಯಲ್ಲಿ ನೆಡಲಾಗಿದೆ ಎಂದವರು ವಿವರಿಸಿದರು.
ಪಿಲಿಕುಳದಲ್ಲಿ ಮತ್ತು ಬಡಗಬೆಟ್ಟುವಿನಲ್ಲಿ ಟ್ರೀ ಪಾರ್ಕ್ ಯೋಜನೆ ಅನುಷ್ಠಾನಕ್ಕೆ ತರಲಾಗುವುದು. ಅಲ್ಲದೆ ಸಮುದ್ರ ತೀರದಲ್ಲಿ ನಶಿಸಿ ಹೋಗಿರುವ ಗಿಡಗಳನ್ನು ಮತ್ತೆ ಬೆಳೆಸಲಾಗುವುದು. ಎಲ್ಲ ಯೋಜನೆಗಳಲ್ಲೂ ಜನರ ಸಹಭಾಗಿತ್ವವನ್ನು ಖಚಿತಪಡಿಸಿಕೊಳ್ಳಲಾಗುವುದು. ಗ್ರಾಮ ಮಟ್ಟದಲ್ಲಿ ಅರಣ್ಯ ಅಭಿವೃದ್ಧಿಗೆ ಗ್ರಾಮ ಸಮಿತಿ ರಚಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಶ್ಚಿಮ ಕಾರ್ಯಪಡೆ ಸದಸ್ಯ ಗಜೇಂದ್ರ, ಕುಂದಾಪುರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಶೆಟ್ಟಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣೇಶ್, ಮಂಗಳೂರು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಶಾಂತಪ್ಪ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಂಗಳೂರು ವಿಭಾಗದ ಶ್ರೀ ಪದ್ಮನಾಭಗೌಡ ಉಪಸ್ಥಿತರಿದ್ದರು.