Friday, October 7, 2011

ಸರ್ಕಾರಿ ಸೌಲಭ್ಯ ಪಡೆಯಲು ಆಧಾರ್ ಅಗತ್ಯ: ಜಿಲ್ಲಾಧಿಕಾರಿ

ಮಂಗಳೂರು,ಅಕ್ಟೋಬರ್.07:ಆಧಾರ್ ಕಾರ್ಡ್ ಪಡೆಯಲು ಜಿಲ್ಲಾಡಳಿತ ನಗರದ ಹಲವೆಡೆ ಆಧಾರ್ ನೋಂದಣಿ ಕೇಂದ್ರಗಳನ್ನು ತೆರೆದಿದ್ದು ಸಾರ್ವಜನಿಕರು ಆಧಾರ್ ಕಾರ್ಡ್ ಹೊಂದಬೇಕೆಂದು ದಕ್ಷಿಣ ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪ ಗೌಡ ಹೇಳಿದ್ದಾರೆ.ಸಾರ್ವಜನಿಕರು ಸರ್ಕಾರದ ಸೌಲಭ್ಯ ಪಡೆಯಲು, ಬ್ಯಾಂಕ್ ಅಕೌಂಟ್ ಹಾಗೂ ಮೊಬೈಲ್ ಪಡೆಯಲು ಈ ಕಾರ್ಡ್ ನೆರವಾಗಲಿದ್ದು ಎಲ್ಲರೂ ಆಧಾರ್ ಪಡೆಯಬೇಕೆಂದು ಜಿಲ್ಲಾಧಿಕಾರಿಗಳು ವಿನಂತಿಸಿದ್ದಾರೆ.ಅಕ್ಟೋಬರ್ 2ರಂದು ಉರ್ವ ಕಮ್ಯುನಿಟಿ ಹಾಲ್, ನಗರಪಾಲಿಕೆ ವಾರ್ಡ್ ಆಫೀಸ್ ಕಾಟಿಪಳ್ಳ, ನಗರಪಾಲಿಕೆ ವಾಣಿಜ್ಯ ಕಟ್ಟಡ, ಕಾರ್ನಾಡು ಸದಾಶಿವ ರಾವ್ ಮೆಮೋರಿಯಲ್ ಟ್ರಸ್ಟ್ ಬಾವುಟ ಗುಡ್ಡೆ, ಜಿಲ್ಲಾಧಿಕಾರಿಗಳ ಕಚೇರಿ ವ್ಯಾಪ್ತಿಯಲ್ಲಿರುವ ರೆಡ್ ಕ್ರಾಸ್ ಕಟ್ಟಡದಲ್ಲಿ ಕೇಂದ್ರಗಳಿದ್ದು ಸಾರ್ವಜನಿಕರು ತಮ್ಮ ನಿವಾಸವನ್ನು ದೃಢೀಕರಿಸುವ ಫೋಟೋ ಐಡಿಗಳೊಂದಿಗೆ ಆಧಾರ್ ನೋಂದಣಿ ಮಾಡಿಸಬಹುದಾಗಿದೆ.
ಭವಿಷ್ಯದಲ್ಲಿ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಆಧಾರ್ ಕಾಡ್ರ್ ನ್ನು ಕಡ್ಡಾಯಗೊಳಿಸಲಾಗುವುದು. ಹಾಗಾಗಿ ಈಗಿರುವ ಸೌಲಭ್ಯಗಳ ಸದುಪಯೋಗ ಪಡೆಯಬೇಕೆಂದೂ ಜಿಲ್ಲಾಧಿಕಾರಿಗಳು ಹೇಳಿದ್ದಾರೆ.ಸರ್ಕಾರಿ ನೌಕರರು ತಕ್ಷಣವೇ ಆಧಾರ್ ಕಾರ್ಡ್ ಮಾಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.