Monday, October 3, 2011

ಆಟೋರಿಕ್ಷಾ ದರ ಮರು ನಿಗದಿ

ಮಂಗಳೂರು,ಅಕ್ಟೋಬರ್.03 :ದಕ್ಷಿಣಕನ್ನಡ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಆಟೋರಿಕ್ಷಾಗಳ ದರವನ್ನು ಪರಿಷ್ಕರಣೆ ಮಾಡಿ ದಿನಾಂಕ 2-10-11 ರಿಂದ ಜಾರಿಗೆ ಬರುವಂತೆ ಆದೇಶಿಸಿದೆ.
ಕನಿಷ್ಠದರ 1.5 ಕಿಲೋಮೀಟರ್ ಗೆ. 17.00
ಕಾಯುವ ದರಗಳು - ಮೊದಲು 15 ನಿಮಿಷ ಉಚಿತ, ನಂತರದ 45 ನಿಮಿಷ ವರೆಗೆ ಪ್ರಯಾಣ ದರದ ಶೇಕಡಾ 25,
ಪ್ರತಿ ಕಿಲೋ ಮೀಟರ್ ದರ (ಮೂರು ಪ್ರಯಾಣಿಕರಿಗೆ )ರೂ.12.00
ಲಗ್ಗೇಜು ದರ ಮೊದಲ 20 ಕಿಲೋಗ್ರಾಂ ಉಚಿತ ಅಥವಾ ನಂತರ ಪ್ರತಿ 20 ಗ್ರಾಂ ಅಥವಾ ಭಾಗಕ್ಕೆ 2.00
ರಾತ್ರಿ ವೇಳೆ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆಯ ವರೆಗೆ ಸಾಮಾನ್ಯ ದರದ ಒಂದೂವರೆ ಪಟ್ಟು ಆಗಿರುತ್ತದೆ.
ಆಟೋ ರಿಕ್ಷಾದ ಚಾಲಕರು/ಮಾಲಕರು ಆಟೋ ರಿಕ್ಷಾದಲ್ಲಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟಿರುವ ನಿಗಧಿತ ಪರಿಷ್ಕೃತ ದರದ ಮೂಲ ಪಟ್ಟಿಯ ಪ್ರತಿಯೊಂದನ್ನು ಆಟೋರಿಕ್ಷಾದ ಪ್ರಮುಖ ಸ್ಥಾನದಲ್ಲಿರಿಸಬೇಕು. ಪರಿಷ್ಕೃತ ದರಗಳ ಮೀಟರಿನಲ್ಲಿ ಪ್ರದರ್ಶನವಾಗುವಂತೆ ಮೀಟರ್ಗಳನ್ನು 31-10-11 ರೊಳಗೆ ಪುನ: ಸತ್ಯಾಪನೆ ಮಾಡಿ ಮುದ್ರೆ ಹಾಕಿಸಿಕೊಳ್ಳುವುದು.ಮಂಗಳೂರು ಮಹಾನಗರಪಾಲಿಕೆವ್ಯಾಪ್ತಿಯೊಳಗೆ ಸಂಚರಿಸಲು ಪರವಾನಿಗೆಯನ್ನು ಹೊಂದಿರುವ ಆಟೋ ರಿಕ್ಷಾ ವಾಹನಗಳು ಮಂಗಳೂರು ಮಹಾನಗರಪಾಲಿಕೆಯ ಗಡಿ ಪ್ರದೇಶದಿಂದ ಹೊರಗಡೆ ಪ್ರಯಾಣಿಕರು ಒಪ್ಪಿದಲ್ಲಿ ಪ್ರಯಾಣಿಸುವ ಸ್ಥಳದ ವರೆಗೆ ಮೇಲಿನ ದರದ ಒಂದೂವರೆ ಪಟ್ಟಿನಷ್ಟು ಪಡೆಯಬಹುದಾಗಿದೆ.
ಎಲ್ಲಾ ಆಟೋ ರಿಕ್ಷಾ ಚಾಲಕ/ಮಾಲಿಕರು ತಮ್ಮ ಆಟೋರಿಕ್ಷಾಗಳ ಪ್ಲಾಗ್ ಮೀಟರುಗಳಲ್ಲಿ ವಿಮರ್ಶಿತ ದರವನ್ನು ಅಳವಡಿಸಿ ತೂಕ ಮತ್ತು ಮಾಪನ ಶಾಸ್ತ್ರ ಇಲಾಖೆಯಿಂದ ದೃಢೀಕರಿಸಿಕೊಳ್ಳಬೇಕೆಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿಗಳು ತಿಳಿಸಿರುತ್ತಾರೆ.