Tuesday, August 9, 2011

ನಿರ್ಮಿತಿ ಕೇಂದ್ರದಿಂದ ಹಾಸ್ಟೆಲ್ ಬೇಡ: ರಾಮ್ ಪ್ರಸಾದ್

ಮಂಗಳೂರು,ಆಗಸ್ಟ್.09:ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಕದ್ರಿಯಲ್ಲಿ ಶಿಲಾನ್ಯಾಸ ಮಾಡಿ ಒಂದು ವರ್ಷ ಕಳೆದಿದೆ. ಕಾಮಗಾರಿಯಲ್ಲಿ ಯಾವುದೇ ಪ್ರಗತಿ ಕಂಡಿಲ್ಲ. ಕಾಮಗಾರಿಗೆ ನೀಡಿರುವ ರೂ.44 ಲಕ್ಷವನ್ನು, ನಿರ್ಮಾಣ ಕಾರ್ಯವನ್ನು ನಿರ್ಮಿತಿ ಕೇಂದ್ರದಿಂದ ತಕ್ಷಣ ವಾಪಸ್ ಪಡೆದುಕೊಳ್ಳಲು ಕ್ರಮ ಕೈಗೊಳ್ಳುವುದಾಗಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ.ಎಸ್. ರಾಮ್ ಪ್ರಸಾದ್ ತಿಳಿಸಿದ್ದಾರೆ.ಜಿಲ್ಲಾ ಧಿಕಾರಿ ಕಚೇರಿ ಯಲ್ಲಿ ಇಂದು ನಡೆದ ಪ್ರಗತಿ ಪರಿ ಶೀಲನಾ ಸಭೆಯ ಅಧ್ಯ ಕ್ಷತೆ ವಹಿಸಿದ ಉಸ್ತು ವಾರಿ ಕಾರ್ಯ ದರ್ಶಿ ಗಳು, ಸಭೆ ಯಲ್ಲಿ ಕೈ ಗೊಳ್ಳುವ ನಿರ್ಧಾರ ಗಳನ್ನು ಪಾಲಿಸಿ ಅಭಿ ವೃದ್ಧಿ ಯಲ್ಲಿ ಸಹ ಕರಿ ಸುವಂತೆ ಅಧಿ ಕಾರಿ ಗಳಿಗೆ ಸೂಚನೆ ನೀಡಿದರು.
ಸಮಾಜ ಕಲ್ಯಾಣ ಇಲಾಖೆಯಲ್ಲಿ 19 ಪ್ರೌಢಪೂರ್ವ, ಐದು ಪ್ರೌಢೋತ್ತರ ವಿದ್ಯಾರ್ಥಿ ನಿಲಯಗಳು ಹಾಗೂ ನಾಲ್ಕು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿವೆ. 18 ವಾರ್ಡನ್ ಗಳಿದ್ದು, 10 ಹುದ್ದೆಗಳು ಖಾಲಿ ಇವೆ ಎಂದು ಇಲಾಖಾಧಿಕಾರಿ ಮಾಹಿತಿ ನೀಡಿದರು.
ಸುಳ್ಯದ ಅಜ್ಜಾವರದಲ್ಲಿ ರೂ. 88 ಲಕ್ಷ ವೆಚ್ಚದಲ್ಲಿ ವಿದ್ಯಾರ್ಥಿ ನಿಲಯ ಕಟ್ಟಡ ಅಂತಿಮ ಹಂತದಲ್ಲಿದೆ. ಮಂಗಳೂರಿನ ಕದ್ರಿಯಲ್ಲಿ ರೂ.191 ಲಕ್ಷ ವೆಚ್ಚದಲ್ಲಿ ಕಟ್ಟಡ ನಿರ್ಮಾಣಕ್ಕೆ ಒಂದು ವರ್ಷದ ಹಿಂದೆ ಶಿಲಾನ್ಯಾಸ ವಾಗಿದ್ದು, 44 ಲಕ್ಷ ರೂ.ಗಳನ್ನು ನಿರ್ಮಿತಿ ಕೇಂದ್ರಕ್ಕೆ ಬಿಡುಗಡೆ ಮಾಡಲಾಗಿದೆ. ಆದರೆ ಕಾಮಗಾರಿಯಲ್ಲಿ ಪ್ರಗತಿಯಾಗಿರದ ಬಗ್ಗೆ ನಿರ್ಮಿತಿ ಕೇಂದ್ರದ ಅಧಿಕಾರಿಗಳನ್ನು ಉಸ್ತುವಾರಿ ಕಾರ್ಯದರ್ಶಿಗಳು ಪ್ರಶ್ನಿಸಿದರು. ನಿರ್ಮಿತಿ ಕೇಂದ್ರದ ಕಾರ್ಯ ವೈಖರಿಯಿಂದ ಅಸಮಾಧಾನಕ್ಕೊಳಗಾದ ಅವರು, ಬಿಡುಗಡೆಗೊಂಡ ಮೊತ್ತವನ್ನು ಬಡ್ಡಿ ಸಹಿತ ವಾಪಸ್ ಪಡೆಯಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು.ಹಿಂದು ಳಿದ ಮತ್ತು ಅಲ್ಪ ಸಂ ಖ್ಯಾತ ಕಲ್ಯಾಣ ಇಲಾಖೆ ಯಡಿ ಕಾರ್ಯ ನಿರ್ವ ಹಿಸು ತ್ತಿರುವ ವಿದ್ಯಾರ್ಥಿ ನಿಲ ಯಗಳು, ಅಲ್ಲಿನ ಊಟದ ವ್ಯ ವಸ್ಥೆ, ಸಮ ವಸ್ತ್ರ ವ್ಯ ವಸ್ಥೆಯ ಬಗ್ಗೆ ರಾಮ್ ಪ್ರಸಾದ್ ಮಾಹಿತಿ ಪಡೆದರು. ಸಿಬ್ಬಂದಿ ಕೊರತೆಯ ಅಹವಾಲು ಆಲಿಸಿದ ಅವರು ಕೆಎಚ್ ಡಿಸಿಯಿಂದ ಸಮವಸ್ತ್ರ ಪೂರೈಕೆ ಹಾಗೂ ಎಂಪಿಎಂನಿಂದ ಪುಸ್ತಕ ಪೂರೈಕೆಯ ಬಗ್ಗೆಯೂ ಮಾಹಿತಿ ಪಡೆದರು.
ಸರಿಯಾದ ಮಾಹಿತಿ ಇಲ್ಲದೆ ಸಭೆಗೆ ಹಾಜರಾದ ಸಣ್ಣ ನೀರಾವರಿ ಇಲಾಖೆಗಳ ಅಧಿಕಾರಿಗಳಿಗೆ ಸೂಕ್ತ ಮಾಹಿತಿಯೊಡನೆ ಸಭೆಗೆ ಹಾಜರಾಗಿ ಎಂದು ತಾಕೀತು ಮಾಡಿದರು. ಮಾಹಿತಿ ಇಲ್ಲದೆ ಸಭೆಗೆ ಹಾಜರಾಗುವುದನ್ನು ಸಹಿಸಲು ಅಸಾಧ್ಯ ಎಂಬ ಎಚ್ಚರಿಕೆಯನ್ನೂ ಅಧಿಕಾರಿಗಳಿಗೆ ನೀಡಿದರು.
ಜಿಲ್ಲೆಯಾದ್ಯಂತ ರಾಷ್ಟ್ರೀಯ ಹೆದ್ದಾರಿಯೂ ಸೇರಿದಂತೆ ರಸ್ತೆಗಳು ತೀರಾ ಕೆಟ್ಟಿರುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಾಬೂರಾಮ್ ಆತಂಕ ವ್ಯಕ್ತಪಡಿಸಿದರು. ರಸ್ತೆ ಅಪಘಾತಗಳು ಹೆಚ್ಚುತ್ತಿವೆ. ವಾಹನ ಸಂಚಾರ ನಿಯಂತ್ರಿಸುವುದು ಸವಾಲಿನ ಕಾಯಕವಾಗುತ್ತಿದೆ. ರಸ್ತೆಗಳನ್ನು ಸುಸ್ಥಿತಿಗೆ ತರದೇ ಹೋದರೇ ಇನ್ನಷ್ಟು ಅವಾಂತರಗಳನ್ನು ಎದುರಿಸಬೇಕಾದೀತು ಎಂದರು.
ನಿಗದಿತ ಸಮಯದೊಳಗೆ ರಸ್ತೆ ಕಾಮಗಾರಿಗಳು ಮುಗಿಯದೆ ಜನ ಆಕ್ರೋಶ ವ್ಯಕ್ತಪಡಿಸುತ್ತಿರುವ ವಿಷಯವನ್ನು ಜಿಲ್ಲಾಧಿಕಾರಿ ಡಾ.ಎನ್.ಎಸ್.ಚನ್ನಪ್ಪ ಗೌಡ ಉಸ್ತುವಾರಿ ಕಾರ್ಯದರ್ಶಿಗಳ ಗಮನಕ್ಕೆ ತಂದರು.
ಆದಿವಾಸಿಗಳ ಅಭಿವೃದ್ಧಿಗೆ ಕೈಜೋಡಿಸಿ:ನಕ್ಸಲ್ ಪೀಡಿತ ಪ್ರದೇಶಗಳು ಸೇರಿದಂತೆ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿರುವ ಬೆಳ್ತಂಗಡಿ ತಾಲೂಕಿನ ಎಳನೀರು ಸಹಿತ 12 ಹಳ್ಳಿಗಳ ಜನರ ಸೌಕರ್ಯಕ್ಕೆ ಎಲ್ಲ ಇಲಾಖೆಗಳು ಒಟ್ಟಾಗಿ ಶ್ರಮಿಸಬೇಕೆಂಬ ಸಲಹೆಯನ್ನು ಎಸ್ಪಿ ನೀಡಿದರು.ಈ ಸಂದರ್ಭದಲ್ಲಿ ನಕ್ಸಲ್ ಬಾಧಿತ ಕುತ್ಲೂರಿನಲ್ಲಿ ನಡೆಯುತ್ತಿರುವ ಕೈ ಮಗ್ಗ ಮತ್ತು ಜವಳಿ ಇಲಾಖೆಯ ಕೈಮಗ್ಗ ತರಬೇತಿ ಕೇಂದ್ರವನ್ನು ಪ್ರಸ್ತಾಪಿಸಿದ ಎಸ್ಪಿಯವರು ಈ ಮಾದರಿಯ ಪ್ರಯತ್ನಗಳು ಹೆಚ್ಚೆಚ್ಚು ನಡೆಯಬೇಕಾಗಿದೆ ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಟಿ.ಕಾವೇರಿಯಪ್ಪ, ಡಿಸಿಪಿ ಎಂ. ಮುತ್ತುರಾಯ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್. ವಿಜಯಪ್ರಕಾಶ್ ಉಪಸ್ಥಿತರಿದ್ದರು.