Monday, August 15, 2011

ಜಿಲ್ಲೆಯಲ್ಲಿ 65 ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ

ಮಂಗಳೂರು,ಆಗಸ್ಟ್.15: 65 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿಂದು ಸಂಭ್ರಮ ಸಡಗರಗಳಿಂದ ಆಚರಿಸಲಾಯಿತು.ನಗರದ ನೆಹರು ಮೈದಾನಿ ನಲ್ಲಿ ಆಯೋ ಜಿಸಿದ್ದ ಜಿಲ್ಲಾ ಮಟ್ಟದ ಕಾರ್ಯ ಕ್ರಮ ದಲ್ಲಿ ರಾಜ್ಯ ಜೀವಿ ಶಾಸ್ತ್ರ, ಪರಿ ಸರ, ಬಂದರು ಮತ್ತು ಒಳ ನಾಡು ಜಲ ಸಾರಿಗೆ ಸಚಿ ವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತು ವಾರಿ ಸಚಿವ ರಾದ ಕೃಷ್ಣ ಜೆ.ಪಾಲೆಮಾರ್ ಅಚರು ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದರು. ಜಿಲ್ಲೆಯಲ್ಲಿ ಕಳೆದ 38 ತಿಂಗಳ ಅವಧಿಯಲ್ಲಿ ವಿವಿಧ ಯೋಜನೆಗಳ ಮುಖಾಂತರ ರೂ.1712 ಕೋಟಿಗೂ ಮಿಕ್ಕಿದ ಪ್ರಗತಿ ಸಾಧಿಸಲಾಗಿದೆ ಎಂದರು.ಗ್ರಾ ಮೀಣ ಮಟ್ಟ ದಲ್ಲಿ ಕುಡಿ ಯುವ ನೀರಿನ ಸಮಸ್ಯೆ ಯನ್ನು ಬಗೆ ಹರಿ ಸಲು ರೂ.47.51 ಕೋಟಿ ಹಾಗೂ 2011- 12ನೇ ಸಾಲಿಗೆ ರೂ. 56.38 ಕೋಟಿ, ಮಳ ವೂರಿ ನಲ್ಲಿ ವೆಂಟೆಡ್ ಡ್ಯಾಂ ನಿರ್ಮಾ ಣಕ್ಕೆ ರೂ.32 ಕೋಟಿ, ಗ್ರಾ ಮೀಣ ರಸ್ತೆಗಳ ಅಭಿ ವೃದ್ಧಿ ಗಾಗಿ ರೂ.26.6 ಕೋಟಿ, ಹೊಸ ನಗರ ಗಳ ನಿರ್ಮಾಣ ಕ್ಕಾಗಿ ರೂ.137.59 ಕೋಟಿ,ಪಿ.ಡಬ್ಲ್ಯು.ಡಿ ರಸ್ತೆ ಗಳ ನಿರ್ಮಾಣ ಮತ್ತು ನಿರ್ವ ಹಣೆ ಗಾಗಿ ರೂ.298.27 ಕೋಟಿ, ರಾಷ್ಟ್ರೀಯ ಹೆದ್ದಾರಿ ಅಭಿ ವೃದ್ಧಿ ಗಾಗಿ ರೂ.64.68 ಕೋಟಿ ವೆಚ್ಚ ಮಾಡಲಾಗಿದೆ ಎಂದು ಸಚಿವರು ನುಡಿದರು.ಜಿಲ್ಲೆ ಯಲ್ಲಿನ ವಸತಿ ಸಮಸ್ಯೆ ಯನ್ನು ಬಗೆ ಹರಿ ಸುವ ನಿಟ್ಟಿ ನಲ್ಲಿ ವಿವಿಧ ವಸತಿ ಯೋಜನೆ ಗಳ ಡಿಯಲ್ಲಿ ಗ್ರಾ ಮೀಣ ಮಟ್ಟ ದಲ್ಲಿ 15116 ಕುಟುಂ ಬಗ ಳನ್ನು ಆಯ್ಕೆ ಮಾಡಿದ್ದು, 4089 ಕುಟುಂ ಬಳಿಗೆ ರೂ.1655.45 ಲಕ್ಷ ವೆಚ್ಚ ಮಾಡ ಲಾಗಿದೆ.ನಗರ ಪ್ರದೇಶ ದಲ್ಲಿ ಇಲ್ಲಿ ಯವ ರೆಗೆ 7241 ಮತ್ತು ಗ್ರಾ ಮೀಣ ಪ್ರದೇಶ ದಲ್ಲಿ 50559 ಮನೆಗಳಿಗೆ ಹಕ್ಕು ಪತ್ರ ನೀಡಲಾಗಿದೆ. ಬಸವ ವಸತಿ ಯೋಜನೆಯ ಅಡಿಯಲ್ಲಿ ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ ತಲಾ 200 ಮನೆ ನಿರ್ಮಿಸುವ ಗುರಿ ಹೊಂದಿದ್ದು, 9648 ಫಲಾನುಭವಿಗಳನ್ನು ಗುರುತಿಸಲಾಗಿದೆ ಎಂದರು.ವಾಜಪೇಯಿ ನಗರಾಶ್ರಮ ಯೋಜನೆಯಡಿ ಪಾಲಿಕೆ ಹಾಗೂ ಪುರಸಭೆಗಳ ವ್ಯಾಪ್ತಿಯಲ್ಲಿ ಈ ವರ್ಷ 2600 ನಿವೇಶನಗಳು ಹಾಗೂ 1325 ವಸತಿಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.`ನಮ್ಮ ಮನೆ' ಯೋಜನೆಯಡಿಯಲ್ಲಿ ನಿವೇಶನ ಹೊಂದಿರುವ ಬಡ ಕುಟುಂಬಗಲಿಗೆ ರೂ.50,000 ಸಹಾಯಧನದೊಂದಿಗೆ ರೂ.1ಲಕ್ಷದವರೆಗೆ ಮನೆ ನಿರ್ಮಿಸಲು ವಿಶೇಷ ಸಾಲ ನೀಡಲಾಗುವುದು. ಈ ಯೋಜನೆಯಡಿ ಜಿಲ್ಲೆಗೆ 7300 ಮನೆ ನಿರ್ಮಾಣದ ಗುರಿ ಹೊಂದಿದ್ದು, ಈ ಮುಖಾಂತರ ಕರ್ನಾಟಕವನ್ನು ಗುಡಿಸಲು ಮುಕ್ತ ರಾಜ್ಯವನ್ನಾಗಿ ಪರಿವರ್ತಿಸುವತ್ತ ಕ್ರಾಂತಿಕಾರಿ ಹೆಜ್ಜೆ ಇಡಲಾಗಿದೆ ಎಂದು ವಿವರಿಸಿದ ಸಚಿವರು ಸರ್ಕಾರ ಜನಪರ ಇದ್ದು ಜನರ ಆಶೋತ್ತರಗಳಿಗೆ ಸ್ಪಂದಿಸುತ್ತದೆ ಎಂದರು.
ಜಿಲ್ಲೆಯ 185 ದೇವಸ್ಥಾನಗಳಿಗೆ ರೂ.16.77 ಕೋಟಿ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮೂಲ ಸೌಕರ್ಯಗಳಿಗಾಗಿ ರೂ.50 ಕೋಟಿ, ಹಾಗೂ ಅಭಿವೃದ್ಧಿಗಾಗಿ ರೂ.180 ಕೋಟಿ ಮೊತ್ತದ ಮಾಸ್ಟರ್ ಪ್ಲಾನ್ ಪ್ರಸ್ತಾವನೆ, ಕಟೀಲು ಶ್ರೀ ದುರ್ಗಾಪರಮೇಶ್ವರಿ ಮತ್ತು ಕದ್ರಿ ಶ್ರೀ ಮಂಜುನಾಥ ದೇವಸ್ಥಾನಗಳ ಯಾತ್ರಿ ನಿವಾಸಗಳ ನಿರ್ಮಾಣಕ್ಕೆ ರೂ.4.50 ಕೋಟಿ ಒದಗಿಸಲಾಗಿದೆ ಎಂದು ಸಚಿವರು ನುಡಿದರು.ಸಚಿ ವರ ಸಂದೇ ಶದ ನಂತರ ಜಿಲ್ಲಾ ಸಶಸ್ತ್ರ ಮೀ ಸಲು ಪಡೆ, ಸಿವಿಲ್ ಪೊ ಲೀಸ್, ಪೊಲೀಸ್ ಬ್ಯಾಂಡ್ ತಂಡ, ಸೇವಾದಳ, ಸ್ಕೌಟ್ಸ್ ಮತ್ತು ಗೈಡ್ಸ್, ಎನ್ ಸಿ ಸಿ, ರೋಡ್ ಸೇಫ್ಟಿ ಟೀಮ್ ಸೇರಿದಂತೆ ಒಟ್ಟು 17 ತಂಡ ಗಳಿಂದ ಆಕ ರ್ಷಕ ಪಥ ಸಂಚ ಲನ ನಡೆ ಯಿತು. ಇದರಲ್ಲಿ ಸೈಂಟ್ ಥೆರೆಸಾ ಹೈಸ್ಕೂಲ್ ಬೆಂದೂರು ಇಲ್ಲಿನ ವಿದ್ಯಾರ್ಥಿಗಳ ತಂಡ ಪ್ರಥಮ ಪ್ರಶಸ್ತಿ ಪಡೆಯಿತು.ಸಂತ ಅಲೋಶಿಯಸ್ ಸ್ಕೂಲ್ ಲೈಟ್ ಹೌಸ್ ಹಿಲ್ ರೋಡ್ ಇಲ್ಲಿನ ಎನ್ ಸಿ ಸಿ ವಿದ್ಯಾರ್ಥಿಗಳ ತಂಡ ದ್ವಿತೀಯ ಸ್ಥಾನಿಯಾಯಿತು.ಇದೇ ಸಂದರ್ಭ ಇತ್ತೀಚೆಗೆ ಗ್ರೀಸ್ ನ ಅಥೆನ್ಸ್ ನಲ್ಲಿ ನಡೆದ ವಿಶೇಷ ಮಕ್ಕಳ ಒಲಿಂ ಪಿಕ್ಸ್ ನಲ್ಲಿ ಚಿನ್ನದ ಪದಕ ವಿಜೇ ತರಾದ ಧನ್ಯಾ ಎಸ್.ರಾವ್, ರಾಯಿ ಸ್ಟನ್ ಪಿಂಟೋ, ಅನಿಲ್ ಮೆಂ ಡೋನ್ಸಾ ಇವರನ್ನು ಸನ್ಮಾನಿ ಗೌರ ವಿಸ ಲಾಯಿತು.ಸಮಾ ರಂಭ ದಲ್ಲಿ ವಿಧಾನ ಸಭಾ ಉಪ ಸಭಾ ದ್ಯಕ್ಷ ಎನ್.ಯೋ ಗೀಶ್ ಭಟ್, ಸಂಸದ ನಳಿನ್ ಕುಮಾರ್ ಕಟೀಲ್,ವಿಧಾನ ಪರಿ ಷತ್ ಸದಸ್ಯ ಕ್ಯಾ.ಗಣೇಶ್ ಕಾ ರ್ಣಿಕ್,ಜಿ.ಪಂ.ಅಧ್ಯಕ್ಷೆ ಶೈಲಜಾ ಕೆ.ಟಿ.ಭಟ್, ಜಿಲ್ಲಾ ಧಿಕಾರಿ ಡಾ.ಎನ್.ಎಸ್.ಚನ್ನಪ್ಪ ಗೌಡ, ಪಾಲಿಕೆ ಮೇ ಯರ್ ಪ್ರವೀಣ್ ಅಂಚನ್,ಪಶ್ಚಿಮ ವಲಯ ಐಜಿಪಿ ಅಲೋಕ್ ಮೋಹನ್, ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್,ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಎನ್.ವಿಜಯ ಪ್ರಕಾಶ್, ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಎನ್.ಬಿ.ಅಬೂಬಕ್ಕರ್,ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕುಂದಾಪುರ ನಾರಾಯಣ ಖಾರ್ವಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು