Friday, August 5, 2011

59 ಪ್ರಕರಣ ಇತ್ಯರ್ಥ 24 ಪ್ರಕರಣ ಮುಂದೂಡಿಕೆ

ಮಂಗಳೂರು,ಆಗಸ್ಟ್.05:ಅರ್ಜಿಗಳ ಶೀಘ್ರ ವಿಲೆಗೆ ಹಾಗೂ ನೇರವಾಗಿ ಅಧಿಕಾರಿಗಳಿಂದ ಉತ್ತರ ತರಿಸುವ ಪ್ರಕ್ರಿಯೆಗೆ ವೇಗ ನೀಡುವ ಉದ್ದೇಶದಿಂದ ಮಾಹಿತಿ ಆಯುಕ್ತರಗಳೇ ಜಿಲ್ಲೆಗಳಿಗೆ ಭೇಟಿ ನೀಡಿ ಅಹವಾಲು ಆಲಿಸುವ ಹಾಗೂ ಮಾಹಿತಿ ಹಕ್ಕಿನ ಬಗ್ಗೆ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದು ಡಾ.ಎಚ್.ಎನ್. ಕೃಷ್ಣ ಹೇಳಿದ್ದಾರೆ.ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿ ಕಾರಿಗಳ ಕಚೇರಿಯಲ್ಲಿ ಆಯುಕ್ತರುಗಳಾದ ಡಾ.ಎಚ್.ಎನ್. ಕೃಷ್ಣ ಮತ್ತು ವಿರೂಪಾಕ್ಷಯ್ಯ ಇಬ್ಬರೂ ಮೇಲ್ಮನವಿಗಳನ್ನು ಪರಿಶೀಲನೆ ನಡೆಸಿ ಮಾಹಿತಿ ಕೋರಿದವರಿಗೆ ಮಾಹಿತಿ ಕೊಡಿಸಲು ಕ್ರಮಕೈಗೊಂಡರು. ಇಂದು ಡಾ ಎಚ್ ಎನ್ ಕೃಷ್ಣ ಅವರು 24 ಅರ್ಜಿಗಳಲ್ಲಿ 3ನ್ನು ಮುಂದೂಡಿ 20 ಅರ್ಜಿಗಳನ್ನು ಇತ್ಯರ್ಥ ಪಡಿಸಿದರು. ವಿರೂಪಾಕ್ಷಯ್ಯ ಅವರು 19 ಅರ್ಜಿಗಳಲ್ಲಿ 11 ಇತ್ಯರ್ಥಪಡಿಸಿ 8 ಅರ್ಜಿಗಳನ್ನು ಮುಂದೂಡಿದರು.
ಅಪರಾಹ್ನ ಜಿಲ್ಲಾ ಪಂಚಾಯತ್ ನ ನೇತ್ರಾವತಿ ಸಭಾಂಗಣದಲ್ಲಿ ಅಧಿಕಾರಿಗಳಿಗೆ ಆಯೋಜಿಸಿದ್ದ ಕಾಯರ್ಾಗಾರದಲ್ಲಿ ಮಾಹಿತಿ ಹಕ್ಕಿನಿಂದಾದ ಕ್ರಾಂತಿ, ಮಾಹಿತಿ ನೀಡಬೇಕಾದ ರೀತಿಗಳನ್ನು ವಿವರಿಸಿದರು. ರಾಜ್ಯದಲ್ಲಿ ರಾಜ್ಯ ಗುಪ್ತಚರ ಮತ್ತು ಜಿಲ್ಲೆಯಲ್ಲಿ ಜಿಲ್ಲಾ ಗುಪ್ತಚರ ಇಲಾಖೆಗಳನ್ನು ಹೊರತುಪಡಿಸಿ ಕೇಂದ್ರದಲ್ಲಿ 16 ಸಂಸ್ಥೆಗಳನ್ನು ಹೊರತುಪಡಿಸಿ ಉಳಿದೆಲ್ಲ ಸಂಸ್ಥೆಗಳಿಂದ ಮಾಹಿತಿ ಕೇಳಬಹುದು ಎಂದು ಡಾ ಕೃಷ್ಣ ವಿವರಿಸಿದರು.
ಕಚೇರಿಗಳಲ್ಲಿ ಕಡತಗಳನ್ನು ಸುವ್ಯವಸ್ಥೆ ರೀತಿಯಲ್ಲಿ ಜೋಡಿಸಿಟ್ಟರೆ ಯಾವುದೇ ಅರ್ಜಿದಾರರಿಗೆ ಮಾಹಿತಿಗಳನ್ನು ನೀಡುವುದು ಕಷ್ಟವಾಗಲಾರದು. ಕಚೇರಿ ಮಾಹಿತಿಗಳು ಸಾರ್ವಜನಿಕ ಸೊತ್ತುಗಳಾಗಿದ್ದು, ಅವುಗಳನ್ನು ಕಾಪಾಡುವುದಾಕ್ಕಾಗಿಯೇ ಸಿಬ್ಬಂದಿಗಳನ್ನು ಅಥವಾ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.
ಅಧಿಕಾರಿಗಳು ತಮ್ಮ ಮನೋಭಾವವನ್ನು ಬದಲಾಯಿಸಿಕೊಂಡು ಅರ್ಜಿದಾರರ ಸ್ಥಾನದಲ್ಲಿ ನಿಂತು ಯೋಚಿಸಿದರೆ ಮಾಹಿತಿ ಹಕ್ಕು ಕಾಯಿದೆಯ ಜಾರಿಗೆ ತೊಡಕಾಗದು. ಕಾಯ್ದೆಯನ್ನು ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಧನಾತ್ಮಕವಾಗಿ ನೋಡಬೇಕೆಂದು ಡಾ.ಕೃಷ್ಣ ಸಲಹೆಯಿತ್ತರು.ಹೊಸ ಆದೇಶದಂತೆ ಬಿಪಿಎಲ್ ಗೆ ರೇಷನ್ ಕಾರ್ಡ್ ಲಗತ್ತಿಸಿದರೆ ತಿರಸ್ಕರಿಸಿ; ಬಿಪಿಎಲ್ ಎಂದು ನಿರ್ಧರಿಸಲು ತಹಸೀಲ್ದಾರರಿಂದ ಪಡೆದ ಇನ್ಕಂ ಸರ್ಟಿಫಿಕೇಟ್ ಅಗತ್ಯ ಎಂದರು. ದಾಖಲೆಗಳನ್ನು ಸಂರಕ್ಷಿಸಬೇಕಾದ ಅಗತ್ಯವನ್ನು ಒತ್ತಿ ಹೇಳಿದ ಅವರು, ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎನ್. ವಿಜಯಪ್ರಕಾಶ್ ಉಪಸ್ಥಿತರಿದ್ದರು.