Wednesday, August 24, 2011

ಭೂರಹಿತರಿಗೆ ಜಲಾನಯನ ಪ್ರದೇಶದಲ್ಲಿ ಆದಾಯೋತ್ಪನ್ನ ಚಟುವಟಿಕೆಗಳು

ಮಂಗಳೂರು,ಆಗಸ್ಟ್.24:ಜಲಾನಯನ ಅಭಿವೃದ್ಧಿ ಇಲಾಖೆಯು ಜಲಾನಯನ ಪ್ರದೇಶದಲ್ಲಿ ಭೂರಹಿತರಿಗೆ ಸ್ವಸಹಾಯಸಂಘಗಳನ್ನು ರೂಪಿಸಿ ಅಭಿವೃದ್ದಿ ಚಟುವಟಿಕೆಗಳನ್ನು ಪ್ರೇರೇಪಿಸುತ್ತಿದೆ.ಜಲಾ ನಯನ ಉಪ ಸಮಿತಿಗೆ ಗ್ರಾಮ ಪಂಚಾ ಯಿತಿ ಅಧ್ಯಕ್ಷ ರೇ ಅಧ್ಯಕ್ಷ ರಾಗಿರು ತ್ತಾರೆ. ಇಸ್ರೋ ದ ಮೂಲಕ ಇಂತಹ ಪ್ರದೇಶ ಗಳನ್ನು ಗುರುತಿ ಸಲಾಗಿದೆ. ತೋಟ ಗಾರಿಕೆ, ಅರಣ್ಯ ಮತ್ತು ಕೃಷಿ ಇಲಾಖೆ ಯವರು ವಿವಿಧ ಯೋಜನೆ ಗಳನ್ನು ರೂಪಿಸು ತ್ತಾರೆ. ಭೂ ರಹಿತ ಬಡವರಿಗೆ ಜಲಾನಯನ ಅಭಿವೃದ್ದಿ ಇಲಾಖೆಯಿಂದ ಸ್ವಸಹಾಯ ಸಂಘದ ಮೂಲಕ ಹೊಲಿಗೆ ಯಂತ್ರ, ಕೋಳಿ ವಿತರಣೆ, ಹಾಳೆತಟ್ಟೆ ತಯಾರಿಸಲು, ಹಪ್ಪಳ ಮಾಡಲು ನೆರವು ನೀಡಲಾಗುತ್ತದೆ ಎಂದು ಜಲಾನಯನ ಅಭಿವೃದ್ಧಿ ಇಲಾಖಾಧಿಕಾರಿ ಜಿ ಟಿ ಪುತ್ರ ಅವರು ಹೇಳಿದ್ದಾರೆ.ಜಲಾನಯನ ಅಭಿವೃದ್ದಿ ಇಲಾಖೆಯಿಂದ ಅನುಪ್ಟಾನ ಗೊಳ್ಳುತ್ತಿರುವ ವಿವಿಧ ಯೋಜನೆಗಳಲ್ಲಿ ಪಶ್ಚಿಮ ಘಟ್ಟ ಅಭಿವೃದ್ದಿ ಯೋಜನೆ ಕೂಡ ಒಂದು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಪುತ್ತೂರು ಮತ್ತು ಸುಳ್ಯ ತಾಲೂಕುಗಳಲ್ಲಿ ಸದ್ರಿ ಯೋಜನೆಯನ್ನು ಅನುಪ್ಟಾನಗೊಳಿಸಲಾಗುತ್ತಿದೆ. ಈ ಯೋಜನೆ ಯಡಿ ಯಲ್ಲಿ ಅರಣ್ಯ, ತೋಟ ಗಾರಿಕೆ ಮತ್ತು ಕೃಷಿ ಕಾಮ ಗಾರಿ ಗಳನ್ನು ಕೈ ಗೊಂಡು ಮಣ್ಣು ಮತ್ತು ನೀರು ಸಂ ರಕ್ಷಣೆ ಮಾಡುವು ದರೊಂ ದಿಗೆ ಜೈವಿಕ ವೈ ವಿಧ್ಯತೆ ಅಭಿ ವೃದ್ದಿ ಪಡಿಸ ಲಾಗು ವುದು. ಜನರ ಸಹ ಭಾಗಿತ್ವ ದಲ್ಲಿ ಈ ಕಾರ್ಯ ಕ್ರಮ ಗಳನ್ನು ಅನು ಪ್ಟಾನ ಗೊಳಿ ಸಲಾ ಗುತ್ತದೆ. ಅಂತ ರ್ಜಲ ನೀರಿನ ಗುಣಮಟ್ಟವನ್ನು ಹೆಚ್ಚಿಸುವುದು, ಹಸಿರೀಕರಣ ಅಭಿವೃದ್ದಿ, ಜಲಮರುಪೂರಣ ಮಟ್ಟವನ್ನು ಹೆಚ್ಚಿಸುವುದು, ಬೆಳೆಗಳಿಗೆ ರಕ್ಷಣಾತ್ಮಕ ನೀರಾವರಿ ಒದಗಿಸುವುದು, ಭೂ ಉಪಚಾರ ಮಾಡುವುದರ ಒಟ್ಟಿಗೆ ಜಲಾನಯನ ಪ್ರದೇಶದ ಭೂ ರಹಿತರಿಗೆ ಆದಾಯೋತ್ಪನ್ನ ಚಟುವಟಿಕೆಗಳಾದ ಕೋಳಿ ಸಾಕಣೆಗಾಗಿ ಕೋಳಿಗಳ ವಿತರಣೆ, ಹೊಲಿಗೆ ಯಂತ್ರವನ್ನು ಒದಗಿಸುವುದು, ಕರ ಕುಶಲ ಕರ್ಮಿಗಳಿಗೆ ಬೇಕಾದ ಸಲಕರಣೆಗಳ ವಿತರಣೆ ಇತ್ಯಾದಿ, ಭೂ ಹಿಡುವಳಿದಾರರಿಗೆ ತೋಟಗಾರಿಕಾ ಗಿಡಗಳಾದ ಕಸಿ ಕಟ್ಟಿದ ಗೇರು ಗಿಡ,ತೆಂಗು, ಕೊಕ್ಕೊ ಮಾವು, ಹಲಸು ಮುಂತಾದ ಗಿಡಗಳನ್ನು ನೀಡಲಾಗುತ್ತದೆ.