Friday, August 5, 2011

ವಿವೇಕಾನಂದರ ಜೀವನ ಇಂದಿನ ಪೀಳಿಗೆಗೆ ಆದರ್ಶವಾಗಲಿ :ಪ್ರೊ.ಟಿ.ಸಿ.ಶಿವಶಂಕರಮೂರ್ತಿ

ಮಂಗಳೂರು,ಆಗಸ್ಟ್.05:ಭಾರತದ ದಿವ್ಯ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸಿದ ಧೀರ ಸಂನ್ಯಾಸಿ ಸ್ವಾಮಿ ವಿವೇಕಾನಂದರ ದೇಶಪ್ರೇಮ,ಪ್ರಾಮಾಣಿಕತೆ ಇಂದಿನ ಮಕ್ಕಳಿಗೆ ಆದರ್ಶವಾಗಲಿ ಎಂದು ಮಂಗಳೂರು ವಿಶ್ವ ವಿದ್ಯಾಲಯದ ಉಪಕುಲಪತಿಗಳಾದ ಪ್ರೊ.ಟಿ.ಸಿ.ಶಿವಶಂಕರ ಮೂರ್ತಿ ಹೇಳಿದ್ದಾರೆ.ಅವರು ಇಂದು ಮಂಗ ಳೂರು ಕೇಂದ್ರ ರೈಲು ನಿಲ್ದಾಣ ದಲ್ಲಿ ಭಾರ ತೀಯ ರೈಲ್ವೆ ವತಿ ಯಿಂದ ಸ್ವಾಮಿ ವಿವೇ ಕಾನಂ ದರ 150 ನೇ ಜನ್ಮ ದಿನಾ ಚರಣೆ ಅಂಗ ವಾಗಿ ಏರ್ಪ ಡಿಸಿ ರುವ ವಿವೇಕಾ ನಂದರ ಅಪೂರ್ವ ಛಾಯಾ ಚಿತ್ರ ಗಳ ಸಂಚಾರಿ ವಸ್ತು ಪ್ರದ ರ್ಶನ ಉದ್ಘಾ ಟನಾ ಕಾರ್ಯ ಕ್ರಮದಲ್ಲಿ ಭಾಗವ ಹಿಸಿ ಮಾತ ನಾಡಿ ದರು.ಸ್ವಾಮಿ ವಿವೇಕಾನಂದರು ಹೇಳಿದಂತೆ ಉಕ್ಕು ಸ್ನಾಯುಗಳ ಯುವಜನಾಂಗ ದೇಶದ ಜನಸಂಖ್ಯೆಯಲ್ಲಿ ಶೇಕಡಾ 60 ರಷ್ಟು ಇದ್ದಾರೆ. ಇವರು ಸ್ವಾಮಿ ವಿವೇಕಾನಂದರ ಜೀವನವನ್ನು ತಮ್ಮಜೀವನದಲ್ಲಿ ಅಳವಡಿಸಿಕೊಂಡಲ್ಲಿ ದೇಶದ ಅಭಿವೃದ್ಧಿಗೆ ನೆರವಾಗಲಿದೆ ಎಂದರು.
ರೈಲ್ವೆ ಇಲಾಖೆಯ ವಿಭಾಗೀಯ ವ್ಯವಸ್ಥಾಪಕರಾದ ಎಸ್.ಕೆ.ರೈನಾ ಮಾತನಾಡಿ ಸ್ವಾಮಿ ವಿವೇಕಾನಂದರ ಜೀವನಕ್ಕೆ ಸಂಬಂಧಿಸಿದ ಅಪೂರ್ವ ಛಾಯಾಚಿತ್ರಗಳನ್ನು ಹೊತ್ತ ಸಂಚಾರಿ ವಸ್ತು ಪ್ರದರ್ಶನ ರೈಲು ಈಗಾಗಲೇ 8 ರಾಜ್ಯಗಳಲ್ಲಿ ಸಂಚರಿಸಿ,80ಕ್ಕೂ ಹೆಚ್ಚು ರೈಲು ನಿಲ್ದಾಣಗಳಲ್ಲಿ ಪ್ರದರ್ಶನವನ್ನು ಏರ್ಪಡಿಸಿ ,ಸುಮಾರು 6 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಒಟ್ಟು 240 ರೈಲು ನಿಲ್ದಾಣಗಳಲ್ಲಿ ಸಂಚಾರಿ ವಸ್ತು ಪ್ರದರ್ಶನ ರೈಲು ತೆರಳಲಿದ್ದು ಜನರಿಗೆ ವಿಕವೇಕಾನಂದರ ಮಾಹಿತಿ ಒದಗಿಸಲಿದೆಯೆಂದರು.
ಮಂಗಳೂರು ರಾಮಕೃಷ್ಣ ಆಶ್ರಮದ ಸ್ವಾಮಿ ಜಿತಕಾಮಾನಂದ,ಸಾಮಾಜಿಕ ಕಾರ್ಯಕರ್ತ ಡಾ.ಕಲ್ಲಡ್ಕ ಪ್ರಭಾಕರ ಭಟ್, ಪಶ್ಚಿಮ ವಲಯ ಐಜಿಪಿ ಅಲೋಕ್ ಮೋಹನ್ ಮುಂತಾದವರು ಈ ಸಂದರ್ಭದಲ್ಲಿ ಮಾತನಾಡಿದರು.
ಇಂದಿನಿಂದ 3 ದಿನಗಳ ಕಾಲ (ಆಗಸ್ಟ್ 5,6,7 ರಂದು)ಇಲ್ಲಿನ ಕೇಂದ್ರ ರೈಲು ನಿಲ್ದಾಣದಲ್ಲಿ ವಿವೇಕ ವಸ್ತುಪ್ರದರ್ಶನ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿರುತ್ತದೆ.