Friday, August 12, 2011

ಖಾಸಗಿ ವೈದ್ಯಕೀಯ ಸಂಸ್ಥೆಗಳ ಗಮನಕ್ಕೆ

ಮಂಗಳೂರು,ಆಗಸ್ಟ್.12:ಖಾಸಗಿ ವೈದ್ಯಕೀಯ ಅಧಿನಿಯಮ 2007 ಮತ್ತು ಕಾನೂನು 2009 ರ ಪ್ರಕಾರ ಎಲ್ಲ ಖಾಸಗೀ ವೈದ್ಯಕೀಯ ಸಂಸ್ಥೆಯವರು ತಮ್ಮ ಕ್ಲಿನಿಕ್ ಗಳಲ್ಲಿ ಚಿಕಿತ್ಸೆಗೆ ಸಂಬಂಧಿಸಿದ ಶುಲ್ಕವನ್ನು ಎಲ್ಲರಿಗೂ ಕಾಣಿಸುವಂತೆ ಪ್ರಕಟಿಸಲು ಸೂಚಿಸಿದೆ.
ಯಾವ್ಯಾವ ಚಿಕಿತ್ಸೆಗೆ ಎಷ್ಟು ದರ ಎಂಬುದನ್ನು ಎಲ್ಲರೂ ಕಾಣುವ ಜಾಗದಲ್ಲಿ ಪ್ರದರ್ಸಿಸಿರಬೇಕು; ನಿಗದಿತ ದರಕ್ಕಿಂತ ಹೆಚ್ಚಿನ ಶುಲ್ಕ ವಸೂಲಿ ಮಾಡಿದರೆ ಹಾಗೂ ಕೆಪಿಎಂಇ ನಿಯಮವನ್ನು ಉಲ್ಲಂಘಿಸಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಈ ಸಂಬಂಧ ಸ್ಥಳೀಯ ತಪಾಸಣಾ ತಂಡವನ್ನು ಸ್ಥಳ ತಪಾಸಣೆಗೆ ಕಳುಹಿಸಿದಾಗ ನ್ಯೂನ್ಯತೆ ಕಂಡುಬಂದ ಪಕ್ಷದಲ್ಲಿ ಸರಿಪಡಿಸಿಕೊಳ್ಳಲು ಗರಿಷ್ಠ ಕಾಲಾವಕಾಶ ನೀಡಿದರೂ ನ್ಯೂನ್ಯತೆ ಸರಿಪಡಿಸಿದ ಬಗ್ಗೆ ಮಾಹಿತಿ ಸಲ್ಲಿಸದ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ನೋಂದಣಿ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಕಟಣೆ ತಿಳಿಸಿದೆ.