Saturday, August 20, 2011

ಪಾರದರ್ಶಕ ಆಡಳಿತಕ್ಕೆ ಬದ್ಧ: ಸಿ.ಎಂ. ಸದಾನಂದ ಗೌಡ

ಮಂಗಳೂರು,ಆಗಸ್ಟ್.20:ರಾಜ್ಯದ ಆರೂವರೆ ಜನಕೋಟಿ ಶ್ಲಾಘಿಸುವಂತೆ ಪಾರದರ್ಶಕ ಆಡಳಿತವನ್ನು ತಮ್ಮ ಸರ್ಕಾರ ನೀಡಲಿದೆ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಹೇಳಿದರು.ಅವ ರಿಂದು ತಮ್ಮ ಉಡುಪಿ ಜಿಲ್ಲಾ ಪ್ರವಾ ಸದ ವೇಳೆ ಮಂಗ ಳೂರು ವಿಮಾನ ನಿಲ್ದಾಣ ದಲ್ಲಿ ಪತ್ರ ಕರ್ತ ರೊಂದಿಗೆ ಮಾತ ನಾಡಿ, ಆಡ ಳಿತ ಯಂತ್ರ ಕ್ಕೆ ವೇಗ ನೀಡಲು ಈಗಾ ಗಲೇ 20 ಇಲಾಖೆ ಗಳ ಪ್ರಗತಿ ಪರಿ ಶೀಲನೆ ನಡೆ ಸಿದ್ದು, ಪ್ರಧಾನ ಕಾರ್ಯ ದರ್ಶಿ, ಮುಖ್ಯ ಕಾರ್ಯ ದರ್ಶಿ ಗಳೊಂ ದಿಗೆ,ಮತ್ತು ಸಂಪುಟದ ಮಂತ್ರಿಗಳೊಂದಿಗೆ ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಸಂಬಂಧ ಸಭೆ ನಡೆಸಿರುವುದಾಗಿ ಹೇಳಿದರು.ಕಾರ್ಯ ಕ್ರಮ ಅನು ಷ್ಠಾನ ಗೊಳಿ ಸುವ ತಳ ಮಟ್ಟದ ಅಧಿ ಕಾರಿ ಗಳೊಂ ದಿಗೆ ವಿಡಿಯೋ ಕಾನ್ಫ ರೆನ್ಸ್ ನಡೆಸಿ ಜನ ಪರ ಆಡಳಿತ ನೀಡಲು ದ್ದೇಶಿ ಸಿದ್ದೇನೆ. ಕರಾ ವಳಿ ಜಿಲ್ಲೆ ಗಳ ಅಭಿ ವೃದ್ಧಿಯ ಬಗ್ಗೆ ಯೂ ಪ್ರ ತ್ಯೇಕ ಸಮಾ ಲೋಚನೆ ನಡೆಸಿ ಅಭಿ ವೃದ್ಧಿಗೆ ಒತ್ತು ಕೊಡ ಲಿದ್ದೇನೆ. ಎಲ್ಲ ರನ್ನೂ ವಿಶ್ವಾ ಸಕ್ಕೆ ತೆಗೆದು ಕೊಂಡು ಮುನ್ನ ಡೆಯುವ ಭರ ವಸೆ ಯನ್ನು ಅವರು ವ್ಯಕ್ತ ಪಡಿ ಸಿದರು.
ಮುಖ್ಯ ಮಂತ್ರಿಗಳನ್ನು ಸ್ವಾಗತಿಸಲು ಉನ್ನತ ಶಿಕ್ಷಣ ಸಚಿವರಾದ ಡಾ.ವಿ.ಎಸ್.ಆಚಾರ್ಯ,ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ. ಕೃಷ್ಣ ಪಾಲೆಮಾರ್, ಮೀನುಗಾರಿಕಾ ಸಚಿವ ಆನಂದ ಅಸ್ನೋಟಿಕರ್, ಸಂಸದ ನಳಿನ್ ಕುಮಾರ್ ಕಟೀಲ್, ಮೇಯರ್ ಪ್ರವೀಣ್,ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಜಿಲ್ಲಾ ವರಿಷ್ಠಾಧಿಕಾರಿಗಳು ಉಪಸ್ಥಿತರಿದ್ದರು.