Thursday, August 11, 2011

'ಸಾಮಾಜಿಕ ಅಭಿವೃದ್ಧಿಗೆ ಒತ್ತು ನೀಡಿ'

ಮಂಗಳೂರು,ಆಗಸ್ಟ್.11:ಮುಂದಿನ ಹತ್ತು ವರ್ಷಗಳಲ್ಲಿ ಗ್ರಾಮೀಣಾಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟು ಕೊಂಡು ಅಭಿವೃದ್ಧಿಗೆ ವಿಶೇಷ ಒತ್ತು ನೀಡಿ ಗ್ರಾಮೀಣ ಆರೋಗ್ಯ, ರಸ್ತೆ, ಶಿಕ್ಷಣ ಮತ್ತು ಸಾಮಾಜಿಕವಾಗಿ ಹಿಂದುಳಿದವರ ಅಭಿವೃದ್ಧಿಗೆ ಪೂರಕವಾಗಿ ಜಿಲ್ಲಾ ಪಂಚಾಯತ್ನ ಇಲಾಖೆಗಳು ಕ್ರಿಯಾ ಯೋಜನೆ ರೂಪಿಸಬೇಕೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶೈಲಜಾ ಭಟ್ ಹೇಳಿದರು.ಇಂದು ಜಿಲ್ಲಾ ಪಂಚಾ ಯತ್ ನ ನೇತ್ರಾ ವತಿ ಸಭಾಂ ಗಣ ದಲ್ಲಿ ನಡೆದ ಮಾಸಿಕ ಕೆಡಿಪಿ ಸಭೆಯ ಅಧ್ಯ ಕ್ಷತೆ ವಹಿಸಿ ಮಾತ ನಾಡು ತ್ತಿದ್ದರು. ಅಧಿ ಕಾರಿ ಗಳು ಪ್ರಗತಿ ಪರಿ ಶೀಲನೆ ಸಭೆ ಯಲ್ಲಿ ಭೌತಿಕ ಮತ್ತು ಆರ್ಥಿಕ ಪ್ರಗತಿ ಗಳ ಅಂಕಿ ಅಂಶ ಗಳನ್ನು ಮಾತ್ರ ನೀಡದೆ ಸಾಮಾ ಜಿಕ ಅಭಿ ವೃದ್ದಿಗೆ ಪೂರಕ ವಾಗಿ ಕರ್ತವ್ಯ ನಿರ್ವ ಹಿಸ ಬೇಕೆಂದು ಅವರು ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಆರೋಗ್ಯ ಇಲಾಖೆ ಜಂಟಿಯಾಗಿ ಕೈಗೊಳ್ಳಬೇಕಾದ ಕ್ರಿಯಾ ಯೋಜನೆಗಳ ಬಗ್ಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ.ಎನ್.ವಿಜಯ್ ಪ್ರಕಾಶ್ ಅವರು ಸಲಹೆ ನೀಡಿದರು.
ಎಲ್ಲ ಇಲಾಖೆಗಳು ಅಂಗವಿಕಲರಿಗೆ ನೀಡಬೇಕಾದ ಮೀಸಲಾತಿಯನ್ನು ಅನುಷ್ಠಾನಕ್ಕೆ ತನ್ನಿ ಎಂದ ವಿಜಯಪ್ರಕಾಶ್ ಅವರು, ಇಂದಿರಾ ಆವಾಸ್ ಯೋಜನೆಯಡಿ ನಿಗದಿತ ಗುರಿ ಸಾಧಿಸಲು ಹಾಗೂ ಸಾಧನೆಯಲ್ಲಿ ವಿಫಲವಾಗಿರುವ ಡಾ ಅಂಬೇಡ್ಕರ್ ಅಭಿವೃದ್ಧಿ ನಿಗಮ ತಮ್ಮ ಸ್ವಯಂ ಉದ್ಯೋಗ ಯೋಜನೆ, ಗಂಗಾ ಕಲ್ಯಾಣ ಯೋಜನೆಗೆ ಗುರಿನಿಗದಿ ಪಡಿಸಿ ಸಾಧನೆ ಮಾಡದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ ಸೂಕ್ತ ಕ್ರಮಕ್ಕೆ ನಿದರ್ೇಶನ ನೀಡಿದರು.
ಅರಣ್ಯ ಇಲಾಖೆ ಅಧಿಕಾರಿಗಳು ಇಲಾಖೆಯ ಪ್ರಸಕ್ತ ಸಾಲಿನ ವಿವಿಧ ವಿನೂತನ ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರಲ್ಲದೆ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ 68 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ ಎಂದರು.
ಹಿಂದುಳಿದ ಅಭಿವೃದ್ದಿ ನಿಗಮ ಹಾಗೂ ಅಲ್ಪಸಂಖ್ಯಾತ ನಿಗಮದಿಂದ ಚೈತನ್ಯ ಹಾಗೂ ಸ್ವಾವಲಂಬನಾ ಯೋಜನೆಯಡಿ ಈ ತಿಂಗಳಿನಲ್ಲಿ ನಿಗದಿತ ಗುರಿ ಸಾಧಿಸಿದ್ದು, ಶೇಕಡ 55 ಪ್ರಗತಿಯಾಗಿದೆ. ಅಧಿಕ ಇಳುವರಿ ಕಾರ್ಯಕ್ರಮದಡಿ 30,681 ಹೆ. ಭತ್ತದ ಕೃಷಿ ಮಾಡಲಾಗಿದೆ ಎಂದರು. ತೋಟಗಾರಿಕಾ ಇಲಾಖೆ ಯು ಫಲಾನುಭವಿಗಳ ಆಯ್ಕೆ ಮತ್ತು ದೂರದೃಷಿ ಯೋಜನೆಗಳನ್ನು ರೂಪಿಸಿಕೊಳ್ಳಬೇಕೆಂದು ಸಿಇಒ ಸೂಚಿಸಿದರು.
ಪಶುಸಂಗೋಪನೆ ಮತ್ತು ಕೆಎಂಎಫ್ ನವರು ಜಂಟಿಯಾಗಿ ಗ್ರಾಮೀಣರಿಗೆ ನೆರವಾಗುವ ಯೋಜನೆಗಳನ್ನು ರೂಪಿಸಲು ಹೇಳಿದರು.
ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ಸಮಗ್ರ ಮಾಹಿತಿಯೊಂದಿಗೆ ಸಭೆಗೆ ಹಾಜರಾಗಬೇಕೆಂದು ಸೂಚಿಸಿದ ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಸಭೆಗೆ ಹಾಜರಾಗದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವುದಾಗಿ ಹೇಳಿದರು. ಕ್ರಿಯಾಶೀಲ ಆಡಳಿತಕ್ಕೆ ಜಿಲ್ಲೆ ಮಾದರಿಯಾಗಬೇಕೆಂದ ಸಿಇಒ ಅವರು, ಇಲಾಖೆಯ ಮುಖ್ಯಸ್ಥರಿಗೆ ತಳಮಟ್ಟದಲ್ಲಾಗುತ್ತಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ಹಾಗೂ ಸಮಯಮಿತಿಯಲ್ಲಿ ಕೆಲಸಗಳಾಗಬೇಕೆಂದರು. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಧನಲಕ್ಷ್ಮಿ ಉಪಸ್ಥಿತರಿದ್ದರು. ಸ್ಥಾಯಿಸಮಿತಿ ಸದಸ್ಯರಾದ ಜನಾರ್ಧನ ಗೌಡ, ಈಶ್ವರ ಕಟೀಲ್ ಉಪಸ್ಥಿತರಿದ್ದರು.