Thursday, August 11, 2011

ಸ್ವಾತಂತ್ರ್ಯೋತ್ಸವ ಪೂರ್ವ ಭಾವೀ ಸಿದ್ಧತಾ ಸಭೆ

ಮಂಗಳೂರು,ಆಗಸ್ಟ್.11: ಜಿಲ್ಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲು ಸರ್ವ ಸಿದ್ಧತೆಗಳಾಗಿದ್ದು,ಈ ಸಂಭ್ರಮಾ ಚರಣೆಯಲ್ಲಿ ಪ್ಲಾಸ್ಟಿಕ್ ಧ್ವಜವನ್ನು ಖರೀದಿಸ ಬಾರದು ಅಥವಾ ಮಾರಾಟ ಮಾಡ ಬಾರದು.ಮಾರಾಟ ಮಾಡುವುದನ್ನು ಹಾಗೂ ಖರೀದಿ ಸುವದನ್ನು ನಿಷೇಧಿಸಲಾಗಿದ್ದು,ಜಿಲ್ಲಾಧಿಕಾರಿಗಳು ಸಾರ್ವಜನಿಕರ ಸಹಕಾರ ಕೋರಿದರು.ಈ ಬಗ್ಗೆ ಶಿಕ್ಷಣ ಇಲಾಖೆ ,ಮಹಾನಗರ ಪಾಲಿಕೆ ಕ್ರಮಕೈಗೊಳ್ಳಬೇಕೆಂದು ದಕ್ಷಿಣಕನ್ನಡ ಜಿಲ್ಲಾಧಿಕಾರಿ ಡಾ.ಎನ್.ಎಸ್. ಚನ್ನಪ್ಪ ಗೌಡ ಸೂಚನೆ ನೀಡಿದರು.ಅವರು ಇಂದು ಜಿಲ್ಲಾಧಿ ಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಪೂರ್ವಭಾವೀ ಸಿದ್ಧತಾ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.ಸ್ವಾತಂತ್ರ್ಯ ದಿನಾಚರಣೆಯಂದು ಪೂರ್ವಾಹ್ನ 8.55 ಕ್ಕೆ ಅತಿಥಿಗಳು ಆಗಮಿಸಿ,ರಾಷ್ಟ್ರ ಧ್ವಜಾರೋಹಣ ಗೌರವ ಸ್ವೀಕಾರ, ನಾಡಗೀತೆ,ರೈತಗೀತೆ ಹಾಗೂ ಪಥಸಂಚಲನ ಬಳಿಕ ಮುಖ್ಯ ಅತಿಥಿಗಳಿಂದ ಸ್ವಾತಂತ್ರ್ಯೋತ್ಸವ ಸಂದೇಶ.ಮಾದರಿ ವೈಮಾನಿಕ ಪ್ರದರ್ಶನ ಏರ್ಪಡಿಸಲಾಗಿದೆ.ಅಪರಾಹ್ನ 3.30 ರಿಂದ 6.00 ರ ವರೆಗೆ ಪುರಭವನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆಯೆಂದು ತಿಳಿಸಿದರು. ಸಭೆಯಲ್ಲಿ ಮಂಗಳೂರು ಸಹಾಯಕ ಕಮೀಷನರ್ ಪ್ರಭುಲಿಂಗ ಕವಳಿಕಟ್ಟಿ,ಅಪರ ಜಿಲ್ಲಾಧಿಕಾರಿ ಕೆ.ಟಿ.ಕಾವೇರಿಯಪ್ಪ ಹಾಗೂ ಎಲ್ಲಾ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.