Saturday, August 6, 2011

60ವರ್ಷ ದಾಟಿದ ಟೈಲರ್ ಗಳನ್ನು ಸ್ವಾಸ್ಥ್ಯ ಭೀಮಾ ಯೋಜನೆಗೆ ಸೇರಿಸಿ :ಯೋಗೀಶ್ ಭಟ್

ಮಂಗಳೂರು,ಆಗಸ್ಟ್.06:ಸಮಾಜದ ಕಟ್ಟಕಡೆಯ ಜನರಾದ ಅಸಂಘಟಿತ ಕಾರ್ಮಿಕರಿಗೆ ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆ ನೆರವು ಸಿಗುತ್ತಿರುವಂತೆ, ಅಶಕ್ತರಾದ 60 ವರ್ಷ ದಾಟಿದ ಟೈಲರ್ ವೃತ್ತಿ ನಡೆಸಲು ಸಾಧ್ಯವಾಗದ, ಟೈಲರ್ ವೃತ್ತಿದಾರರನ್ನು ಸಹ ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆ ವ್ಯಾಪ್ತಿಗೆ ಸೇರ್ಪಡೆಗೊಳಿಸುವಂತೆ ಕರ್ನಾಟಕ ವಿಧಾನಸಭೆಯ ಉಪಸಭಾಪತಿಗಳಾದ ಎನ್. ಯೋಗೀಶ್ ಭಟ್ ಅವರು ಸಂಬಂಧಿಸಿದ ಇಲಾಖೆಯವರಿಗೆ ತಿಳಿಸಿದ್ದಾರೆ.
ಅವರು ಇಂದು ನಗ ರದ ರೋಶನಿ ನಿಲಯ ದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಡಳಿತ ಹಾಗೂ ಕಾರ್ಮಿಕ ಇಲಾಖೆ,ಜಂಟಿ ಯಾಗಿ ಆಯೋ ಜಿಸಿದ್ದ ರಾ ಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋ ಜನೆ ಫೀಲ್ಡ್ ಆಫೀ ಸರು ಗಳಿಗೆ ಯೋಜನೆ ಅನು ಷ್ಠಾನದ ಕುರಿತು ಏರ್ಪ ಡಿಸಿದ್ದ ಒಂದು ದಿನದ ಜಿಲ್ಲಾ ಮಟ್ಟದ ಕಾರ್ಯಾ ಗಾರ ಉದ್ಘಾ ಟಿಸಿ ಮಾತ ನಾಡಿ ದರು. 2002ರ ಬಡ ತನ ರೇಖೆ ಗಿಂತ ಕೆಳ ಗಿರು ವವ ರಿಗ ಲ್ಲದೆ ಬೀಡಿ ಕಾರ್ಮಿ ಕರು,ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಭರವಸೆ ಯೋಜನೆ ಕೂಲಿ ಕಾರ್ಮಿಕರಿಗೂ, ಈ ಯೋಜನೆ ವಿಸ್ತರಿಸಿರುವುದರ ಬಗ್ಗೆ ತಮ್ಮ ಮೆಚ್ಚುಗೆ ಸೂಚಿಸಿ,ಯೋಜನೆ ಹಣ ಕೆಲವರಿಗೆ, ಕೆಲವೇ ಕಾಯಿಲೆಗಳಿಗೆ ವೆಚ್ಚವಾಗುವುದನ್ನು ತಡೆಯಲು ಕಾವಲು ಸಮಿತಿ(ಮಾನಿಟರಿಂಗ್ ಕಮಿಟಿ) ರಚಿಸುವಂತೆ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಹಾಗೂ ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಡಾ.ಎನ್.ಎಸ್.ಚನ್ನಪ್ಪ ಗೌಡ ಅವರು ಮಾತನಾಡಿ ಕಳೆದ ಬಾರಿ ಜಿಲ್ಲೆಯಲ್ಲಿ ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆ ಸ್ಮಾರ್ಟ್ ಕಾರ್ಡ್ ಪೂರ್ಣವಾಗಿ ವಿತರಣೆ ಆಗಲಿಲ್ಲ. ಈ ಬಾರಿ ಪಟ್ಟಿಯಲ್ಲಿರುವ ಎಲ್ಲಾ ಕುಟುಂಬಗಳಿಗೂ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡುವ ಮೂಲಕ ಶೇಕಡಾ ನೂರರಷ್ಟು ಗುರಿ ಸಾಧಿಸಬೇಕೆಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಕೆ.ಎನ್.ವಿಜಯಪ್ರಕಾಶ್, ಈ ಸಂದರ್ಭದಲ್ಲಿ ಮಾತನಾಡಿದರು.ಸಮಾರಂಭಕ್ಕೆ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದ ಸಹಾಯಕ ಕಾರ್ಮಿಕ ಆಯುಕ್ತರಾದ ವೆಂಕಟೇಶ ಅಪ್ಪಯ್ಯ ಶಿಂದಿಹಟ್ಟಿ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ 45,000 ಕುಟುಂಬಗಳನ್ನು ಗುರುತಿಸಿದ್ದು, ಅವರಲ್ಲಿ 25144 ಕುಟುಂಬಗಳಿಗೆ ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆ ಸ್ಮಾರ್ಟ್ ಕಾರ್ಡ್ ವಿತರಿಸಲಾಗಿತ್ತು. ಆದರೆ ಈ ಬಾರಿ 2002 ಬಿಪಿಎಲ್ ಪಟ್ಟಿಯಲ್ಲಿರುವ ಕುಟುಂಬಗಳು,ಬೀಡಿ ಕಾಮಿಕರು ಹಾಗೂ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಭರವಸೆ ಯೋಜನೆ ಫಲಾನುಭವಿಗಳು ಸೇರಿದಂತೆ ಒಂದು ಲಕ್ಷ ಕುಟುಂಬಗಳಿಗೆ ಯೋಜನೆಯ ಕಾರ್ಡ್ ವಿತರಿಸುವ ಗುರಿ ಹೊಂದಲಾಗಿದೆ ಎಂದರು.
ಕಾರ್ಮಿಕ ಅಧಿಕಾರಿ ಡಿ.ಜಿ.ನಾಗೇಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಜಂಟಿ ಕಾರ್ಮಿಕ ಆಯುಕ್ತ ಜಿಂಕಲಪ್ಪ ಹಾಗೂ ಸಹಾಯಕ ಕಾರ್ಮಿಕ ಆಯುಕ್ತ ವೆಂಕಟೇಶ ಅವರುಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.200ಕ್ಕೂ ಮಿಕ್ಕಿ ಗ್ರಾಮ ಲೆಕ್ಕಾಧಿಕಾರಿಗಳು,ಗ್ರಾಮ ಪಂಚಾಯತ್ ಗಳ ಕಾರ್ಯದರ್ಶಿಗಳು ಹಾಗೂ ಕಿರಿಯ ಆರೋಗ್ಯ ಶ್ರುಶ್ರೂಷಕಿಯರಿಗೆ ತರಬೇತಿ ನೀಡಲಾಯಿತು.