ಆಗಸ್ಟ್ 1,2011 ರಿಂದ ಸೆಪ್ಟೆಂಬರ್ 2011 ರವರೆಗೆ ಪಶುಪಾಲನಾ ಇಲಾಖೆ ಮತ್ತು ದಕ್ಷಿಣಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಸಹಭಾಗಿತ್ವದಲ್ಲಿ ಗ್ರಾಮವಾರು ನಿರ್ವಹಿಸಲು ಆಯೋಜಿಸಲಾಗಿದೆ.ಈ ನಿಟ್ಟಿನಲ್ಲಿ ಜಿಲ್ಲೆಯ 5 ತಾಲೂಕುಗಳಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಅಧ್ಯಕ್ಷರು,ಕಾರ್ಯದರ್ಶಿಗಳು,ಪಶು ವೈದ್ಯರುಗಳಿಗೆ ತಾಂತ್ರಿಕ ಅರಿವು ಕಾರ್ಯಾಗಾರವನ್ನು ನಡೆಸಲಾಗಿದೆ. ವೈರಾಣುಗಳಿಂದ ಬರುವ ಕಾಲುಬಾಯಿ ಜ್ವರ ರೋಗವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಏಕಕಾಲಕ್ಕೆ ರಾಜ್ಯದಾದ್ಯಂತ ಲಸಿಕಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು,ದಕ್ಷಿಣಕನ್ನಡಜಿಲ್ಲೆಯಲ್ಲಿ ಎಲ್ಲಾ 5 ತಾಲೂಕುಗಳ ಪಶುಪಾಲನಾ ಇಲಾಖೆ ಮತ್ತು ಹಾಲು ಉತ್ಪಾದಕರ ಒಕ್ಕೂಟದ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ದಕ್ಷಿಣಕನ್ನಡ ಜಿಲ್ಲೆಯಲ್ಲಿ 1-8-11 ರಿಂದ 19-8-11 ರ ವರೆಗೆ ಒಟ್ಟು 1,22,572 ಹಸು/ಎಮ್ಮೆಗಳಿಗೆ ಲಸಿಕೆ ಹಾಕಿ ಶೇಕಡಾ 87.14 ಪ್ರಗತಿ ಸಾಧಿಸಲಾಗಿದೆ. ದಿನಾಂಕ 30-9-11 ರ ವರೆಗ ಈ ಲಸಿಕಾ ಕಾರ್ಯಕ್ರಮವು ನಡೆಯಲಿದ್ದು,ಜಾನುವಾರು ಮಾಲೀಕರು ಹತ್ತಿರದ ಪಶು ವೈದ್ಯಕೀಯ ಸಂಸ್ಥೆ /ಹಾಲು ಉತ್ಪಾದಕರ ಸಹಕಾರಿ ಸಂಘಗಳ ಅಧಿಕಾರಿ/ಸಿಬ್ಬಂದಿ ವರ್ಗದವರನ್ನು ಸಂಪರ್ಕಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗೆ ಈ ಕೆಳಕಂಡ ನೋಡಲ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.
ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕರು :- ಡಾ.ಎ.ಗುರುಮೂರ್ತಿ,ಜಿಲ್ಲಾ ನೋಡಲ್ ಅಧಿಕಾರಿ ದೂ.ಸಂ.0824-2492322/9845666743,ಡಾಕೆ.ಅಶೋಕ್ ಕುಮಾರ್ 0824-2492369/9448124601, ಡಾ ಸಿ.ನಾಗರಾಜ ಬಂಟ್ವಾಳ 08255-232512/9980322369,ಡಾ ಹೆಚ್.ಸುಧಾಕರ ಶೆಟ್ಟಿ ಬೆಳ್ತಂಗಡಿ 08256-232067/9448329065, ಡಾ ಕೆ.ರಾಮಚಂದ್ರ ಶೆಟ್ಟಿ ಪುತ್ತೂರು 08251-230664/9448869129,ಡಾ ಎಂ.ಎನ್. ರಾಜಣ್ಣ ಸುಳ್ಯ 08257-230412/9448725696.
ದಕ್ಷಿಣಕನ್ನಡ ಹಾಲು ಒಕ್ಕೂಟ ಕ್ಯಾಂಪ್ ಆಫೀಸರ್: ಡಾ ಚಂದ್ರಶೇಖರ ಭಟ್ ಮೂಡಬಿದ್ರೆ 08258-261002/9448869034, ಡಾ ಮಾಧವ ಐತಾಳ್ ಬಂಟ್ವಾಳ 08255-234802/9480157384, ಡಾ ಡಿ.ಪಿ.ಶ್ರೀನಿವಾಸ ಬೆಳ್ತಂಗಡಿ 08256-234298/9448203159,ಡಾ ಸತೀಶ್ ರಾವ್ ಪುತ್ತೂರು 08251-230891/9448260467, ಡಾ ದಿನೇಶ್ ಸರಳಾಯ ಉಪ್ಪಿನಂಗಡಿ 08251-252249/9448724672 ಡಾ ರಾಜಾ ಸುಳ್ಯ 08257-232191/9902332855.ಜಾನುವಾರು ಮಾಲೀಕರು ಇವರುಗಳ ದೂರವಾಣಿ ಯನು ಸಂಪರ್ಕಿಸಿ ತಮ್ಮ ರಾಸುಗಳಿಗೆ ಕಾಲುಬಾಯಿ ಜ್ವರ ಲಸಿಕೆಗಳನ್ನು ಹಾಕಿಸಿಕೊಳ್ಳಬಹುದಾಗಿದೆ.