Wednesday, August 1, 2012

ಪುತ್ತೂರು ಪುರಸಭೆ ವ್ಯಾಪ್ತಿಯ ನಾಮಫಲಕ ಅಳವಡಿಕೆ ವ್ಯವಸ್ಥೆ:ಜಿಲ್ಲಾಧಿಕಾರಿ ಆದೇಶ

ಮಂಗಳೂರು, ಆಗಸ್ಟ್.01 :ಪುತ್ತೂರು ಪುರಸಭೆ ವ್ಯಾಪ್ತಿಯ ಒಳಗಡೆ ನಾಮಫಲಕ,ರೋಡ್ ಹಂಪ್ಸ್ ಮತ್ತು ಜೀಬ್ರಾ ಬಣ್ಣ ಬಳಿಸುವಿಕೆ ಇತ್ಯಾದಿ ವ್ಯವಸ್ಥೆ ಬಗ್ಗೆ ಸಾರ್ವಜನಿಕ ಹಿತದೃಷ್ಟಿಯಿಂದ ದಕ್ಷಿಣಕನ್ನಡ ಜಿಲ್ಲಾ ಮ್ಯಾಜಿಸ್ಟ್ರೇಟ್ ಹಾಗೂ ಜಿಲ್ಲಾಧಿಕಾರಿಗಳಾದ ಡಾ.ಎನ್.ಎಸ್.ಚನ್ನಪ್ಪ ಗೌಡ ಇವರು ದಿನಾಂಕ 30-7-12 ರಂದು ಈ ಕೆಳಕಂಡಂತೆ ಆದೇಶ ಹೊರಡಿಸಿರುತ್ತಾರೆ.
ಪುತ್ತೂರು ಪುರಸಭೆಯೊಳಗೆ ಬಸ್ ನಿಲುಗಡೆ ನಾಮಫಲಕಗಳನ್ನು ಅಳವಡಿಸಲು,ನೆಹರು ನಗರ ದಕ್ಷಿಣ ಬದಿ ಜಂಕ್ಷನ್ನಿಂದ 30 ಮೀ.ಹಿಂದೆ, ಪುತ್ತೂರಿನಿಂದ ಬರುವ ಬಸ್ ವಾಹನಗಳಿಗೆ ಬಸ್ ನಿಲ್ದಾಣ,ನೆಹರು ನಗರದ ಐಬಿಪಿ ಪೆಟ್ರೋಲ್ ಬಂಕ್ ಎದುರು ಉತ್ತರ ಬದಿಯಲ್ಲಿ ಮಂಗಳೂರು ಕಡೆ ಬರುವ ಬಸ್ಗಳಿಗೆ ನಿಲ್ದಾಣ, ಸುಧಾನ ಶಾಲಾ ಎದುರು ರಸ್ತೆಯ ದಕ್ಷಿಣ ಬದಿಯಲ್ಲಿ ಪುತ್ತೂರು ಕಡೆಯಿಂದ ಬರುವ ಬಸ್ ಗಳಿಗೆ ನಿಲ್ದಾಣ,ಸುಳ್ಯ ಮತ್ತು ಕಾಣಿಯೂರು ಕಡೆಯಿಂದ ಬರುವ ಬಸ್ ಗಳಿಗೆ ಮರಿಕೆ ಕ್ಲಿನಿಕ್ ಎದುರು ನಿಲ್ದಾಣ,ಮಂಗಳೂರಿನಿಂದ ಪುತ್ತೂರು ಕಡೆ ಬರುವ ಬಸ್ಗಳನ್ನು ಬನ್ನೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಎದುರು ನಿಲ್ಲಿಸುವುದು,ಪುತ್ತೂರಿನಿಂದ ಮಂಗಳೂರು ಕಡೆ ಹೋಗುವ ಬಸ್ಗಳನ್ನು ಈಗಿರುವ ಬೊಳುವಾರು ವೃತ್ತವನ್ನು ಕೈಬಿಟ್ಟು ನ್ಯೂ ಹರಿಪ್ರಸಾದ್ ಬಳಿ ನಿಲ್ಲಿಸುವುದು,ಶಾಲಾ ವಠಾರ ಎಂಬ ನಾಮಫಲಕ ಅಳವಡಿಸಲು ಮಾಯಿದೇ ದೇವುಸ್ ಚರ್ಚ್ ಗೇಟ್ ಎದುರು ಜೀಬ್ರಾ ಕ್ರಾಸ್ ಬಣ್ಣ ಬಳಿಕೆ,ವಾಹನ ನಿಲುಗಡೆ ನಿಷೇಧ ನಾಮಫಲಕ ಅಳವಡಿಸಲು ದಿನೇಶ ಭವನ ಮತ್ತು ಹೂವಿನ ಮಾರ್ಕೆಟ್ ನಿಂದ ಅರುಣಾ ಚಿತ್ರಮಂದಿರದ ವರೆಗೆ,ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಬೊಳುವಾರು ವರೆಗೆ ,ಅರುಣಾ ಚಿತ್ರ ಮಂದಿರದಿಂದ ದರ್ಭೆ ವೃತ್ತದವರೆಗೆ ನಾಮಫಲಕ ಅಳವಡಿಕೆಗೆ ಆದೇಶಿಸಲಾಗಿದೆ.
ನಾಮಫಲಕಗಳನ್ನು ಕೋರ್ಟ್ ರಸ್ತೆಯಲ್ಲಿ ತಿಂಗಳ 1,3,5,7,9 ವಿಷಮ ಸಂಖ್ಯೆ ದಿನಗಳಲ್ಲಿ ಬಲಬದಿ ಅಂತೆಯೇ 2,4,6,8 ಸಮಸಂಖ್ಯೆ ದಿನಗಳಲ್ಲಿ ಎಡಬದಿ ದ್ವಿಚಕ್ರ ವಾಹನಗಳ ನಿಲುಗಡೆ,ಮಂಗಳೂರು ಕಡೆಯಿಂದ ಬರುವ ಖಾಸಗಿ ಬಸ್ ಗಳು,ಕೆಎಸ್ಆರ್ಟಿಸಿ ಬಸ್-ಹಳೆ ಪೋಸ್ಟ್ ಆಫೀಸಿನ ಬಳಿಯಿಂದ ಅರಣ್ಯ ಇಲಾಖೆ ಎದುರಾಗಿ ಖಾಸಗಿ ಬಸ್ ನಿಲ್ದಾಣ ಹಾಗೂ ಕೆಎಸ್ಆರ್ಟಿಸಿ ನಿಲ್ದಾಣಕ್ಕೆ ಪ್ರವೇಶಿಸುವುದು.ಘನ ವಾಹನಗಳು ಸೇರಿದಂತೆ ಖಾಸಗಿ ಸ್ಟೇಜ್ ಕ್ಯಾರೇಜ್ ಬಸ್ ಗಳು ಮತ್ತು ಮಡಿಕೇರಿ ಕಡೆ ಕೆಎಸ್ಆರ್ಟಿಸಿ ಬಸ್ ಗಳು ನೆಲ್ಲಿಕಟ್ಟೆಯಿಂದ ಎಪಿಎಂಸಿ ರಸ್ತೆ ತನಕ ಸಂಚರಿಸಿ ಮುಂದುವರಿಯುವುದು,ಸಂಜೀವ ಶೆಟ್ಟಿ ಜಂಕ್ಷನ್ ನಿಂದ ನೆಲ್ಲಿಕಟ್ಟೆ ಹೋಗುವರೇ ಎಪಿಎಂಸಿ ರಸ್ತೆ ತನಕ ಲಾರಿ ಗೂಡ್ಸ್ ವಾಹನಗಳು ಸದ್ರಿ ರಸ್ತೆಯಲ್ಲಿ ಚಲಿಸಬೇಕು(ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆ ವರೆಗೆ),ಬೊಳುವಾರಿನಿಂದ ಎಪಿಎಂಸಿ ರಸ್ತೆ ಕ್ರಾಸ್ ವರೆಗೆ ಗೂಡ್ಸ್ ವಾಹನಗಳು ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೆ ಸಾಮಾಗ್ರಿಗಳನ್ನು ಇಳಿಸುವುದು ಮತ್ತು ಹೇರುವುದನ್ನು ನಿಷೇಧಿಸಿದೆ.ಖಾಸಗಿ ಬಸ್ ನಿಲ್ದಾಣದಲ್ಲೇ ಖಾಸಗಿ ಬಸ್ ಗಳನ್ನು ನಿಲ್ಲಿಸತಕ್ಕದ್ದು,ಸಿಟಿಯಲ್ಲಿ ವಾಹನಗಳ ಸ್ಪೀಟ್ ಲಿಮಿಟ್ ಮಾಡುವ ಸೂಚನೆ ವೇಗದ ಮಿತಿ 30 ಕಿಮೀ ಎಂದು ನಾಮಫಲಕಗಳನ್ನು ಅಳವಡಿಸಬಹುದಾಗಿದೆ.
ಪುತ್ತೂರು ಪುರಸಭೆ ವ್ಯಾಪ್ತಿಯಲ್ಲಿ ಜೀಬ್ರಾ ಕ್ರಾಸ್ಬಣ್ಣ ಬಳಿಸುವಿಕೆಗೆ ಸಂಚಾರ ನಿಯಂತ್ರಣ ಪಾಯಿಂಟುಗಳಲ್ಲಿ ಸಾರ್ವಜನಿಕ ರಸ್ತೆ ದಾಟುವ ಜೀಬ್ರಾ ಕ್ರಾಸ್ ಚಿಹ್ನೆ ಮತ್ತು ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಹೊರಡುವ ಸುಳ್ಯ ಮಂಗಳೂರು ಕಡೆ ಹೋಗುವ ಮುಖ್ಯ ರಸ್ತೆ ಸೇರುವಲ್ಲಿ ಹಳದಿ ಬಣ್ಣದ ಚಿಹ್ನೆ ಮತ್ತು ಜೀಬ್ರಾ ಕ್ರಾಸ್ ಚಿಹ್ನೆಯನ್ನು ಬಳಿಸಬಹುದಾಗಿದೆಯೆಂದು ಆದೇಶಿಸಿರುತ್ತಾರೆ. ವೈಜ್ಞಾನಿಕ ಪದ್ಧತಿಯಲ್ಲಿ ಹಂಪ್ಸ್ ನಿರ್ಮಿಸಲು ಮಂಜಲ್ಪಡ್ಪು ಎಂಬಲ್ಲಿ ಮತ್ತು ಲೆನೆಟ್ ಹೋಟೇಲ್ ಎದುರು ರೋಡ್ ಹಂಪ್ಸ್ ನಿರ್ಮಿಸಬಹುದಾಗಿದೆಯೆಂದು ಜಿಲ್ಲಾಧಿಕಾರಿಯವರು ತಮ್ಮ ಆದೇಶದಲ್ಲಿ ತಿಳಿಸಿರುತ್ತಾರೆ.