Friday, August 3, 2012

ಕಂದುರೋಗದ ಬಗ್ಗೆ ವ್ಯಾಪಕ ಜಾಗೃತಿ :ಕೆ.ಟಿ.ಶೈಲಜಾ ಭಟ್

ಮಂಗಳೂರು,ಆಗಸ್ಟ್.03: ಹೈನುಗಾರಿಕೆಯಲ್ಲಿ ಪ್ರಗತಿ ಸಾಧಿಸುತ್ತಿರುವ ದಕ್ಷಿಣಕನ್ನಡಜಿಲ್ಲೆಯಲ್ಲಿ ಹಸುಗಳಿಗೆ ಮಾರಕವಾಗಬಹುದಾದ ಕಂದುರೋಗದ ಬಗ್ಗೆ ವ್ಯಾಪಕವಾದ ಜಾಗೃತಿ ಆಗಬೇಕಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಕೆ.ಟಿ.ಶೈಲಜಾ ಭಟ್ ತಿಳಿಸಿದ್ದಾರೆ.
ಅವರು ಇಂದು ದ.ಕಜಿಲ್ಲಾ ಪಂಚಾಯತ್,ಕರ್ನಾಟಕ ಪಶು ವೈದ್ಯಕೀಯ ಸಂಘ ದಕ್ಷಿಣಕನ್ನಡ ಜಿಲ್ಲಾಘಟಕ ಹಾಗು ದಕ್ಷಿಣಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವತಿಯಿಂದ ಕುಲಶೇಖರದಲ್ಲಿರುವ ಒಕ್ಕೂಟದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ರಾಷ್ಟ್ರೀಯ ಕಂದುರೋಗ ನಿಯಂತ್ರಣ ಯೋಜನೆಯ ಬಗೆಗಿನ ತಾಂತ್ರಿಕ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ದಕ್ಷಿಣಕನ್ನಡದ ಹಾಲಿನ ಬೇಡಿಕೆಗೆ ಸಂಬಂಧಿಸಿದಂತೆ ಹೊರ ಜಿಲ್ಲೆಗಳಿಂದ ಹಾಲಿನ ಪೂರೈಕೆಯಾಗುತ್ತಿತ್ತು, ಆದರೆ ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಮೂಲಕ ಜಿಲ್ಲೆಯ ಹಾಲಿನ ಇಳುವರಿಯಲ್ಲಿ ಏರಿಕೆಯಾಗಿದೆ. ಹೊಸ ತಳಿಯ ಹಸುಗಳನ್ನು ಹೈನುಗಾರರು ಸಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹಸುಗಳಿಗೆ ಮಾರಕವಾಗಬಹುದಾದ ಕಂದುರೋಗ ಸೋಂಕಿನ ಬಗ್ಗೆ ರೈತರಲ್ಲಿಜಾಗೃತಿ ಮೂಡಿಸಿ ರೋಗತಡೆಗಟ್ಟುವಲ್ಲಿ ಯೋಜನೆ ಕಾರ್ಯಗತವಾಗಲಿ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರು ತಿಳಿಸಿದರು.
ದ.ಕ. ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಿಂದ 400ಕೋಟಿ ರೂ ವಾರ್ಷಿಕ ಆರ್ಥಿಕ ವಹಿವಾಟು ನಡೆಸಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಹೈನುಗಾರಿಕೆ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿದೆ ಎಂದು ದಕ್ಷಿಣಕನ್ನಡಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ಒಕ್ಕೂಟದ ನಿರ್ವಾಹಕ ನಿರ್ದೇಶಕ ರವಿ ಕುಮಾರ್ಕಾಕಡೆ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಶೇ45 ಭಾಗ ಸ್ಥಳೀಯ ಜಾತಿಯ ಹಸುಗಳು, ಶೇ53 ಮಿಶ್ರ ತಳಿಯ ಹಾಗು ಶೇ1ವಿದೇಶಿ ತಳಿ ಹಾಗ ಶೇ1 ಎಮ್ಮೆಯನ್ನು ಹೈನಗಾರಿಕೆಗಾಗಿ ರೈತರು ಅವಲಂಬಿಸಿದ್ದಾರೆ ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ತಿಳಿಸಿದ್ದಾರೆ. ನಾಟಿ ತಳಿಯ ಹಸುಗಳು ನೀಡುವ ಹಾಲಿನ ಪ್ರಮಾಣಕಡಿಮೆಇದ್ದರೂ ಅವುಗಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚು. ಕಂದುರೋಗ ತಗುಲಿದ ಹಸುಗಳು ಜ್ವರಕ್ಕೆ ತುತ್ತಾಗಿ ಹಾಲಿನ ಇಳುವರಿ ಕುಂಠಿತವಾಗುತ್ತದೆ ಅಲ್ಲದೆ ಈ ರೋಗ ಜಾನುವಾರುಗಳಿಂದ ಮನುಷ್ಶನಿಗೂ ಹರಡುತ್ತದೆ ಎಂದು ತಜ್ಞರು ತಿಳಿಸುತ್ತಾರೆ. ಈ ಬಗ್ಗೆ ಜನಜಾಗೃತಿ ಮೂಡಿಸುವಲ್ಲಿ ಈ ತಾಂತ್ರಿಕ ವಿಚಾರ ಸಂಕಿರಣ ಪ್ರಾಥಮಿಕ ಹೆಜ್ಜೆಯಾಗಿದೆ ಎಂದು ರವಿರಾಜ್ ಹೇಳಿದರು.
ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ನ ಕೃಷಿ ಹಾಗೂ ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ನವೀನ್ ಕುಮಾರ್ ಮೇನಾಲ, ಕರ್ನಾಟಕ ಪಶು ವೈದ್ಯಕೀಯ ದ.ಕ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಜಿ.ಶಿವಾನಂದ ಮೊದಲಾದವರು ಉಪಸ್ಥಿತರಿದ್ದರು.
ಕಂದುರೋಗ ಪತ್ತೆಗೆ ಎಂ.ಆರ್.ಟಿ ಪರೀಕ್ಷೆ :-ಹಸುಗಳಲ್ಲಿ ಕಂದುರೋಗ ಪತ್ತೆಗೆ ಹಾಲಿನ ಮಾದರಿಯನ್ನು ಸಂಗ್ರಹಿಸಿ ಮಿಲ್ಕ್ರಿಂಗ್ಟೆಸ್ಟ್(ಎಂಆರ್ಟಿ) ಪರೀಕ್ಷೆಗೊಳಪಡಿಸವ ವಿಧಾನವನ್ನುಜಿಲ್ಲೆಯಲ್ಲಿ ಅಳವಡಿಸಲಾಗುವುದು.ಇದುವರೆಗೆ ಜಿಲ್ಲೆಯಲ್ಲಿ ಈ ರೀತಿಯ ಪ್ರಕರಣ ಪತ್ತೆಯಾಗಿಲ್ಲ.ಜಿಲ್ಲೆಯ ಐದು ತಾಲೂಕುಗಳಲ್ಲಿ 1500 ಮಾದರಿಗಳನ್ನು ಸಂಗ್ರಹಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ಒಕ್ಕೂಟದ ನಿರ್ವಾಹಕ ನಿರ್ದೇಶಕ ರವಿ ಕುಮಾರ್ಕಾಕಡೆ ತಿಳಿಸಿದ್ದಾರೆ.