Saturday, January 30, 2010

ಪೋಲಿಸ್ ಕಮಿಷನರೇಟ್ 2 ವರ್ಷಗಳಲ್ಲಿ ಪೂರ್ಣ: ಐಜಿಪಿ ಹೊಸೂರು

ಮಂಗಳೂರು, ಜನವರಿ 30: ಮಂಗಳೂರಿನಲ್ಲಿ ಪೂರ್ಣ ಪ್ರಮಾಣದ ಪೋಲಿಸ್ ಕಮಿಷನರೇಟ್ ವ್ಯವಸ್ಥೆ ಮುಂದಿನ 2 ವರ್ಷಗಳಲ್ಲಿ ಜಾರಿಗೆ ಬರಲಿದೆ ಎಂದು ಪ್ರಭಾರ ಪೋಲಿಸ್ ಆಯುಕ್ತರಾದ ಗೋಪಾಲ್ ಹೊಸೂರು ಹೇಳಿದ್ದಾರೆ. ಮಂಗಳೂರಿನಲ್ಲಿಂದು ಮಾಧ್ಯಮಾಗೋಷ್ಟಿಯಲ್ಲಿ ವಿವರಗಳನ್ನು ನೀಡಿದರು.ಪೂರ್ಣ ಪ್ರಮಾಣದ ಕಮೀಷನರೇಟ್ ಜಾರಿಗೆ ಬರಲು ಮೂಲಭೂತ ಸೌಕರ್ಯಗಳಾದ ಸ್ಥಳ, ಕಟ್ಟಡ, ಸಿಬಂದಿಗಳ ನೇಮಕಾತಿ, ತರಬೇತಿಗಳ ಅಗತ್ಯವಿದ್ದು,ಇದಕ್ಕಾಗಿ ಸುಮಾರು 26.60 ಕೋಟಿ ರೂಪಾಯಿಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ,ಇದಲ್ಲದೇ ಅಗತ್ಯವಿರುವ ವಾಹನಗಳು ಮತ್ತು ಪೀಠೋಪಕರಣಗಳಿಗೆ ಹೆಚ್ಚುವರಿಯಾಗಿ 5.1 ಕೋಟಿ ರೂಪಾಯಿಗಳ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಹಂತ ಹಂತವಾಗಿ ಹಣ ಬಿಡುಗಡೆಯಾಗಲಿದೆ ಎಂದ ಅವರು 2 ವರ್ಷಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಪೋಲಿಸ್ ಕಮೀಷನರೇಟ್ ಜಾರಿಗೆ ಬರಲಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು ಜನಸಂಖ್ಯೆಯ ಶೇಕಡ 50 ರಷ್ಟು (9,37,255) ಮಂಗಳೂರು ಪೋಲಿಸ್ ಕಮಿಷನರೇಟ್ ಪೋಲಿಸ್ ಆಯುಕ್ತರ ವ್ಯಾಪ್ತಿಗೆ ಬರಲಿದ್ದು,ಆಯುಕ್ತರು ನ್ಯಾಯಿಕ ಅಧಿಕಾರವನ್ನು ಹೊಂದಿರುವರು. ಇವರಿಗೆ ಆಡಳಿತಾತ್ಮಕವಾಗಿ ಸಹಾಯ ಮಾಡಲು ಕಾನೂನು ಮತ್ತು ಸುವ್ಯವಸ್ಥೆ, ಅಪರಾಧ ಮತ್ತು ಸಂಚಾರ, ನಗರ ಶಸ್ತ್ರಸ್ರ ಮೀಸಲು ಪಡೆಗೆ ಮೂವರು ಉಪ ಆಯುಕ್ತರು ಕಾರ್ಯ ನಿರ್ವಹಿಸಲಿದ್ದಾರೆ.ಅನೇಕ ಹೆಚ್ಚುವರಿ ಪೋಲಿಸ್ ಠಾಣಾಗಳು ನಿರ್ಮಾಣ ಆಗಬೇಕಾಗಿದ್ದು,ಪ್ರತೀ ಠಾಣೆಗೆ ಇನ್ಸ್ ಪೆಕ್ಟರ್ ಶ್ರೇಣಿಯ ಅಧಿಕಾರಿಳ ನೇಮಕ ಆಗಬೇಕಿದೆ. ಪ್ರಸ್ತುತ ಪೋಲಿಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಅಧಿಕಾರಿಗಳು ಸೇರಿ 753 ಸಿಬಂದಿಗಳಿದ್ದು, ಇನ್ನೂ ಹೆಚ್ಚುವರಿಯಾಗಿ 805 ಸಿಬಂದಿಗಳ ಸೇರ್ಪಡೆಯಾಗಬೇಕಿದೆ.ಅದೇ ರೀತಿ ಪ್ರತ್ಯೇಕವಾಗಿ ಅಸ್ಥಿತ್ವಕ್ಕೆ ಬರುವ ನಗರ ಶಸಸ್ತ್ರ ಮೀಸಲು ಪಡೆಗೆ 748 ಸಿಬಂದಿಗಳ ನೇಮಕ ಪ್ರಕ್ರೀಯೇ ಆಗಬೇಕಾಗಿದೆ.ಪ್ರಸ್ತುತ ಕಮಿಷನರೇಟ್ ವರ್ಗೀಕರಣ ಸಂದರ್ಭ ಹಿರಿಯ ಅಧಿಕಾರಿ ಮತ್ತು ಸಿಬಂದಿಗಳಿಗೆ ಪ್ರಾಶಸ್ತ್ಯ ನೀಡಲಾಗುವುದು ಎಂದರು.ಜಿಲ್ಲಾ ಎಸ್ಪಿ ಡಾ, ಸುಬ್ರಹ್ಮಣ್ಯೇಶ್ವರ ರಾವ್,ಎಡಿಷನಲ್ ಎಸ್ಪಿ ಆರ್. ರಮೇಶ್ ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.