Saturday, January 16, 2010

ಸಮುದ್ರೋತ್ಪನ್ನ ರಫ್ತಿಗೆ ಕ್ಯಾಚ್ ಸರ್ಟಿಫಿಕೆಟ್

ಮಂಗಳೂರು ಜನವರಿ 12: ಕಾನೂನು ಬಾಹಿರ, ಬೇನಾಮಿ ಮತ್ತು ಅನಿರ್ಬಂಧಿತ ಮೀನುಗಾರಿಕೆ ತಡೆಗೆ ಮತ್ತು ಹಿಡಿದ ಮೀನಿಗೆ ನ್ಯಾಯಯುತ ಬೆಲೆ ದೊರಕಿಸಲು ಯರೋಪಿಯನ್ ಯೂನಿಯನ್ ಕ್ಯಾಚ್ ಸರ್ಟಿಫಿಕೆಟ್ ಸ್ಥಿರೀಕರಣ ವ್ಯವಸ್ಥೆಯ ಜಾರಿಗೆ ನಿರ್ಧರಿಸಿದೆ.
ಈ ವ್ಯವಸ್ಥೆಯನ್ನು ಜಾರಿಗೆ ತರಲು ಎಲ್ಲಾ ಮೀನುಗಾರಿಕೆ ಬೋಟ್ ಗಳ ಮಾಲೀಕರ ಮತ್ತು ಸಾಗರೋತ್ಪನ್ನ ರಫ್ತುದಾರರ ಸಹಕಾರವನ್ನು ಕೋರಿರುವ ಎಫ್ ಎ ಒ ಮತ್ತು ಇಂಡಿಯನ್ ಒಸಿಯನ್ ಟ್ಯೂನಾ ಕಮಿಷನ್ ನಂತಹ ಪ್ರಾಂತೀಯ ಮೀನುಗಾರಿಕಾ ನಿರ್ವಹಣಾ ಸಂಘಟನೆಗಳು ಈ ವ್ಯವಸ್ಥೆಗೆ ಮುಂದಾಗಿದೆ.

ಐರೋಪ್ಯ ಒಕ್ಕೂಟ ರಾಷ್ಟ್ರಗಳಿಗೆ ರಫ್ತಾಗುವ ಮೀನು,ಸಿಗಡಿ,ಕಟಲ್ ಫಿಶ್ ಮುಂತಾದವುಗಳು ನ್ಯಾಯ ಸಮ್ಮತ (ಸ್ಥಿರೀಕರಿಸಿದ)ಕ್ಯಾಚ್ ಸರ್ಟಿಫಿಕೆಟ್ ಗಳನ್ನು ಹೊಂದಿರುವ ಅವಶ್ಯಕತೆ ಬಗ್ಗೆ ಯುರೋಪಿಯನ್ ಕಮಿಷನ್ ಹೊಸ ನಿಯಮ ಹೊರತಂದಿದೆ. ಮೀನುಗಾರಿಕೆ ನಡೆಸಿದ ಪ್ರದೇಶ ಮತ್ತು ಬಂದರಿಗೆ ತಲುಪಿದ ಬಗ್ಗೆ ತಿಳಿದುಕೊಳ್ಳಲು ಈ ವ್ಯವಸ್ಥೆ ಸಹಕಾರಿಯಾಗಿದೆ.

2010ನೇ ಇಸವಿಯ ಜನವರಿ 1 ಮತ್ತು ನಂತರ ಸಮುದ್ರದಿಂದ ಹಿಡಿದು ರಫ್ತು ಮಾಡುವ ಸರಕುಗಳಿಗೆ ಅನ್ವಯವಾಗುತ್ತದೆ. ನೇರವಾಗಿ ಅಥವಾ ಅನ್ಯದೇಶದ ಮೂಲಕ ರಫ್ತು ಮಾಡುವ ಸರಕುಗಳೀಗೆ ಈ ನಿಯಮ ಲಾಗು ಆಗುತ್ತದೆ. ಸಮುದ್ರೋತ್ಪನ್ನವನ್ನು ರಫ್ತು ಮಾಡುವ ಎಲ್ಲ ದೇಶಗಳು ಈ ಅಗತ್ಯತೆಯನ್ನು ಅಳವಡಿಸಿಕೊಳ್ಳಲು ಒಪ್ಪಿಕೊಂಡಿರುತ್ತವೆ ಮತ್ತು ಈ ಬಗ್ಗೆ ಐರೋಪ್ಯ ಒಕ್ಕೂಟ ರಾಷ್ಟ್ರಗಳಿಗೆ ತಿಳಿಸಿರುತ್ತವೆ.
ಉದ್ದಿಮೆಯಿಂದ (ಬೋಟ್ ಮಾಲಿಕರು ಅಥವಾ ರಫ್ತುದಾರರು) ನೀಡಲ್ಪಡುವ ಕ್ಯಾಚ್ ಸಟರ್ಿಫಿಕೇಟ್ ಗಳು ಸರಕಾರಿ ಪ್ರಾಧಿಕಾರದಿಂದ ಸ್ಥಿರೀಕರಿಸಿ ಮೇಲು ರುಜು ಹೊಂದಿರಬೇಕು. ರಫ್ತು ಮಾಡುವ ರಾಷ್ಟ್ರಗಳು,ಕೆಲವು ವಿಷಯಗಳ ಬಗ್ಗೆ ಆಳವಾಗಿ ಎಚ್ಚರಿಕೆ ವಹಿಸುವ ಬಗ್ಗೆ ಅಗತ್ಯ ಇರುತ್ತದೆ.
ಪ್ರತಿ ವರ್ಷ 2800 ಕೋಟಿ ರೂ. ಬೆಲೆಯ ಸಾಗರೋತ್ಪನ್ನಗಳು ಭಾರತದಿಂದ ಐರೋಪ್ಯ ಒಕ್ಕೂಟ ರಾಷ್ಟ್ರಗಳಿಗೆ ರಫ್ತಾಗುತ್ತದೆ. ಯುರೋಪ್ ಒಕ್ಕೂಟ ರಾಷ್ಟ್ರಗಳ ಮಾರುಕಟ್ಟೆ ಪ್ರಾಮ್ಯುಖತೆಯನ್ನು ಪರಿಗಣಿಸಿ ಕ್ಯಾಚ್ ಸರ್ಟಿಫಿಕೆಟ್ ವ್ಯವಸ್ಥೆಯನ್ನು ಜಾರಿಗೊಳಿಸಲು ಭಾರತ ಸಕರ್ಾರ, ಸಾಗರೋತ್ಪನ್ನ ರಫ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ ಅಧಿಕಾರ ನೀಡಿದೆ.
ಎಂಪಿಡಾ (ಮೆರೈನ್ ಪ್ರೊಡಕ್ಟ್ ಎಕ್ಸಪೋಟರ್್ ಡೆವಲಪಮೆಂಟ್ ಅಥಾರಿಟಿ) ಈಗಾಗಲೇ ಬೋಟ್ ಗಳ ಮೂಲಕ ನೇರವಾಗಿ ಅಥವಾ ಮಧ್ಯವರ್ತಿ ಗಳ ಮೂಲಕ ರಫ್ತುದಾರರಿಗೆ ತಲುಪುವ ಹಿಡುವಳಿಯ ನಿಗಾ ಹಾಗೂ ಕ್ಯಾಚ್ ಸರ್ಟಿಫಿಕೆಟ್ ಗಳ ಸ್ಥಿರೀಕರಣ ಕಾರ್ಯ ಆರಂಭಿಸಿದೆ. ಮೊದಲ ಹಂತವಾಗಿ ಬೋಟ್ ಗಳಿಗೆ ಲಾಗ್ ಬುಕ್ ಹಾಗೂ ಕ್ಯಾಚ್ ಸರ್ಟಿಫಿಕೆಟ್ ಗಳ ನಮೂನೆಯನ್ನು ಪುಕ್ಕಟೆಯಾಗಿ ಒದಗಿಸಲು ನಿಶ್ಚಯಿಸಿದೆ. ಹಿಡುವಳಿಯನ್ನು ನಮೂದಿಸುವ ಕ್ಯಾಚ್ ಸರ್ಟಿಫಿಕೆಟ್ ಗಳನ್ನು ವೇಗವಾಗಿ ಸ್ಥಿರೀಕರಿಸುವ ನಿಟ್ಟಿನಲ್ಲಿ ಗಣಕೀಕರಣದ ವ್ಯವಸ್ಥೆಯನ್ನು ಮಾಡಿವೆ.