




ಇದೇ ಸಂದರ್ಭದಲ್ಲಿ ವಾರ್ತಾ ಇಲಾಖೆ ವತಿಯಿಂದ ಆಯೋಜಿ ಸಲಾಗಿದ್ದ ಡಾ.ಕೆ. ನಾಗಪ್ಪ ಆಳ್ವ ಅವರ ಅಪ ರೂಪದ ಛಾಯಾಚಿತ್ರ ಪ್ರದರ್ಶನವನ್ನು ಜಿಲ್ಲಾ ಉಸ್ತುವರಿ ಸಚಿವರಾದ ಕೃಷ್ಣ ಜೆ. ಪಾಲೇಮಾರ್ ಅವರು ಉದ್ಘಾಟಿಸಿದರು. ನಂತರ ನಡೆದ ಸಮಾ ರಂಭದಲ್ಲಿ ಕರ್ನಾಟಕ ವಿಧಾನ ಮಂಡಲ ಗ್ರಂಥಾಲಯ ಸಮಿತಿ ವತಿಯಿಂದ ಪ್ರತಿಭಾವಂತ ಸಂಸದೀಯ ಪಟುಗಳು ಪುಸ್ತಕ ಮಾಲಿಕೆಯಲ್ಲಿ ದಿ. ಡಾ. ಕೆ. ನಾಗಪ್ಪ ಆಳ್ವ ಅವರ ಕುರಿತು ರಚಿಸಲಾಗಿರುವ ಪುಸ್ತಕವನ್ನು ಮಾನ್ಯ ಗೃಹ ಸಚಿವರಾದ ಡಾ. ವಿ. ಎಸ್. ಆಚಾರ್ಯ ಅವರು ಬಿಡುಗಡೆ ಮಾಡಿದರು. ಕರ್ನಾಟಕ ವಿಧಾನಪರಿಷತ್ತಿನ ಸಭಾಪತಿಗಳಾದ ಶ್ರೀ ವೀರಣ್ಣ ಮತ್ತಿಕಟ್ಟಿ,ಶಾಸಕರಾದ ಬಿ. ರಮನಾಥ ರೈ,ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್,ಮೇಯರ್ ರಜನಿ ದುಗ್ಗಣ್ಣ, ಮಾಜಿ ಸಚಿವ ಅಮರನಾಥ ಶೆಟ್ಟಿ,ಮೋಹನ್ ದೇವ್ ಆಳ್ವ, ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.