Wednesday, May 5, 2010

ಎಸ್ಎಸ್ಎಲ್ ಸಿ ಪರೀಕ್ಷೆ ಫಲಿತಾಂಶ, ದ.ಕ ಕ್ಕೆ 8ನೇ ಸ್ಥಾನ

ಮಂಗಳೂರು, ಮೇ 5: ಎಸ್ಎಸ್ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟ ಗೊಂಡಿದೆ.ಒಟ್ಟು ಶೇಕಡ 72.75 ರಷ್ಟು ಮಂದಿ ಪಾಸಾಗುವುದರೊಂದಿಗೆ, ದಕ್ಷಿಣ ಕನ್ನಡ ಜಿಲ್ಲೆ 8 ನೇ ಸ್ಥಾನ ಪಡೆದುಕೊಂಡಿದೆ. ಜಿಲ್ಲೆಯಲ್ಲಿ ಹುಡುಗರು 15,955, ಹುಡುಗಿಯರು 15,588 ಸೇರಿ ಒಟ್ಟು 31,543 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ 10,500 ಹುಡುಗರು,12,449 ಹುಡುಗಿಯರು ಸೇರಿ ಒಟ್ಟು 22,949 ಮಂದಿ ಉತ್ತೀರ್ಣರಾಗಿದ್ದಾರೆ. ಈ ಬಾರಿಯೂ ಹುಡುಗಿಯರದ್ದೇ ಮೇಲುಗೈ, ರಾಜ್ಯದಲ್ಲಿ ಚಿಕ್ಕೋಡಿ ಪ್ರಥಮ ಸ್ಥಾನ, ಉಡುಪಿ 4 ನೇ ಸ್ಥಾನ ಪಡೆದಿದೆ.ಬೀದರ್ ಕೊನೆಯ ಸ್ಥಾನದಲ್ಲಿದೆ.