Saturday, March 6, 2010

ನಗರ ಸ್ವಚ್ಛತೆಗೆ ಕ್ರಮ ಕೈಗೊಳ್ಳಿ: ಶಾಸಕ ಯೋಗೀಶ್ ಭಟ್

ಮಂಗಳೂರು,ಮಾರ್ಚ್6:ನಗರದ ಸ್ವಚ್ಛತೆ ಬಗ್ಗೆ ಮಹಾನಗರಪಾಲಿಕೆ ಹೆಚ್ಚಿನ ಗಮನಹರಿಸಬೇಕು;ಅಲ್ಲಲ್ಲಿ ಸಂಗ್ರಹವಾಗುತ್ತಿರುವ ಕಸ, ರಸ್ತೆ ಕಾಮಗಾರಿ ಮುಗಿದ ಬಳಿಕವೂ ಅಲ್ಲೇ ಉಳಿಯುವ ಕಲ್ಲು,ಜಲ್ಲಿ, ಮರಳು ಸಾಮಗ್ರಿಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು ಇದನ್ನೆಲ್ಲ ಶೀಘ್ರ ಪರಿಹರಿಸಲು ಶಾಸಕ ಎನ್.ಯೋಗೀಶ್ ಭಟ್ ಅವರು ಮಹಾನಗರಪಾಲಿಕೆಗೆಯ ಆರೋಗ್ಯ ಇಲಾಖೆಗೆ ಸೂಚನೆ ನೀಡಿದರು.
ಇಂದು ನಗರದ ಪುರಭವನದಲ್ಲಿ ಏರ್ಪಡಿಸಲಾಗಿದ್ದ ಮಂಗಳೂರು ತಾಲೂಕು ಎ ಹೋಬಳಿ ಮಟ್ಟದ ಜನಸ್ಪಂದನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ ಸೂಕ್ತ ಕ್ರಮಕ್ಕೆ ನಿರ್ದೇಶಿಸಿದ ಅವರು ಫಲಾನುಭವಿಗಳಿಗೆ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿತರಿಸಿದರು. ಮಹಾ ನಗರ ಪಾಲಿಕೆಯ ಆರೋಗ್ಯ ಇಲಾಖೆ ಜನರ ನಿರೀಕ್ಷೆಗೆ ಸ್ಪಂದಿಸು ತ್ತಿಲ್ಲವೆಂಬ ದೂರುಗಳು ವ್ಯಾಪಕ ವಾಗಿದ್ದು, ಈ ಬಗ್ಗೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಅಧಿಕಾರಿಗಳು ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದರೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳ ಲಾಗುವುದು ಎಂದು ಮನಾಪ ಆಯುಕ್ತ ಡಾ.ವಿಜಯ ಪ್ರಕಾಶ್ ಸಭೆಯಲ್ಲಿ ಹೇಳಿದರು.ಅಳಕೆ ಯಲ್ಲಿರುವ ನೂತನ ಗ್ಯಾಸ್ ಏಜೆನ್ಸಿ ಸಾರ್ವಜ ನಿಕರೊಂದಿಗೆ ಅಸಂಬ ದ್ದವಾಗಿ ವರ್ತಿಸುವ ಬಗ್ಗೆ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಗೆ ಸೂಕ್ತ ಕ್ರಮ ಕೈಗೊಳ್ಳಲು ಶಾಸಕರು ಸೂಚಿಸಿದರು. ಮರಳು ಸಾಗಾಣಿಕೆ, ರಸ್ತೆ ಕಾಂಕ್ರೀಟಿ ಕರಣದಿಂದಾಗುವ ಸಮಸ್ಯೆ, ವಿಧವಾ ವೇತನ, ಬಿಪಿಎಲ್ ಕಾರ್ಡುಗಳ ಬಗ್ಗೆ, ಮನೆಕಟ್ಟಲು ನಿರಪೇಕ್ಷಣಾ ಪತ್ರ ನೀಡುವ ಬಗ್ಗೆ ಸಾರ್ವಜನಿಕರಿಂದ ಅಹವಾಲುಗಳಿದ್ದವು. ಜನಸ್ಪಂದನಾ ಸಭೆಯಲ್ಲಿ ಮೇಯರ್ ರಜನಿ ದುಗ್ಗಣ್ಣ, ಉಪಮೇಯರ್ ರಾಜೇಂದ್ರ ಕುಮಾರ್, ಮೂಡಾ ಆಯುಕ್ತರಾದ ರಮೇಶ್, ತಹಸೀಲ್ದಾರ್ ರವಿಚಂದ್ರ ನಾಯಕ್, ಇಒ ಕಾಂತರಾಜ್ ಉಪಸ್ಥಿತರಿದ್ದರು.