ವರು ನಗರದ ಪುರ ಭವನ ದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಸಾಮಾಜಿಕ ಕ್ರಾಂತಿಯ ಹರಿಕಾರ ಜಗಜ್ಯೋತಿ ಬಸವೇಶ್ವರರ ಶತಮಾನೋತ್ಸವ ಜಯಂತಿ ಆಚರಣೆಯನ್ನು ಉದ್ಘಾಟಿಸಿ ಮಾತನಾ ಡುತ್ತಿದ್ದರು. ಬಿಜ್ಜಳನ ಆಡಳಿತ ದಲ್ಲಿ ಪ್ರಧಾನಿ ಗಳಾಗಿ ನೀಡಿದ ಆಡಳಿತ ವ್ಯವಸ್ಥೆ ಇಂದಿಗೂ ಮಾದರಿಯಾಗಿದ್ದು, ಅವರ ಒಂದೊಂದು ವಚನದಲ್ಲೂ ಜೀವನ ಚಿಲುಮೆಯಡಗಿದೆ. ಸಾಮಾಜಿಕ ಸಾಮರಸ್ಯ, ಸಮಾನತೆಗೆ ನೀಡಿದ ಆದ್ಯತೆ, ಅವರ ಜ್ಞಾನ, ಮಾನವತಾ ವಾದದಿಂದ ಇಂದಿಗೂ ಅವರು ಸ್ಮರಣೀಯರು ಎಂದರು.ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿದ ಅಪರ ಜಿಲ್ಲಾಧಿಕಾರಿ ಕೆ ಎ ದಯಾನಂದ ಅವರು, ಬಸವಣ್ಣನವರು ತಮ್ಮ ವಚನಗಳಿಂದ,ಮಹಾಮಾನವತಾವಾದದಿಂದ ಇಂದಿಗೂ ಹಲವು ರೂಪಗಳಲ್ಲಿ ನಮ್ಮ ನಡುವೆ ಬದುಕಿದ್ದಾರೆ. ಮಾದರಿಯಾಗಿದ್ದಾರೆ;ಅವರ ವಚನ ಸಾಹಿತ್ಯ ವಿಶ್ವ ಮನ್ನಣೆ ಗಳಿಸಿದೆ ಎಂದರು.ಸಮಾರಂಭದಲ್ಲಿ ಮುಖ್ಯ ಉಪನ್ಯಾಸ ನೀಡಿದ ಗೋಕರ್ಣನಾಥೇಶ್ವರ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ ನರಸಿಂಹ ಮೂರ್ತಿ ಅವರು, ಶ್ರೇಷ್ಠರ ಮಾನವರ ಜಯಂತಿಗಳಂದು ಸಾರ್ವಜನಿಕ ರಜೆ ಘೋಷಿಸದೆ ಅವರ ಬಗ್ಗೆ ತಿಳಿಯುವ ಮಾಹಿತಿ ನೀಡುವ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು; ಕಾಯಕವೇ ಕೈಲಾಸವೆಂದ ಬಸವಣ್ಣನ ಜಯಂತಿಯಂದು ಕಾಯಕದ ಬಗ್ಗೆ ಯುವ ಜನಾಂಗಕ್ಕೆ ಮಾಹಿತಿ ನೀಡಿ, ಪ್ರೇರಪರಣೆ ನೀಡಿದರೆ ಅದೇ ನಾವು ಅವರಿಗೆ ಸಲ್ಲಿಸುವ ವಿಶೇಷ ನಮನ ಎಂದರು.
ಸಭಾ ಕಾರ್ಯಕ್ರಮದ ನಡುವೆ ವಚನಗಳನ್ನು ನೃತ್ಯದ ಮೂಲಕ ಪ್ರಸ್ತುತ ಪಡಿಸಲಾಯಿತು. ಶ್ರೀ ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಆಶಿರ್ವಚನ ನೀಡಿದರು. ಕರಾವಳಿ ವೀರಶೈವ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಡಾ ಎಸ್ ಬಿ ಯಲಬುರ್ಗಿ, ಶಾರದ ಮಲ್ಲಪ್ಪ, ಶೋಭಾ ಮಲ್ಲಿಕಾರ್ಜುನ ಅಂಗಡಿ ಅವರು ವೇದಿಕೆಯಲ್ಲಿದ್ದರು. ಮಹಾನಗರಪಾಲಿಕೆ ಆಯುಕ್ತ ಹರೀಶ್ ಕುಮಾರ್, ಜಿ.ಪಂ. ಕಾರ್ಯದರ್ಶಿ ಶಿವರಾಮೇಗೌಡ ಉಪಸ್ಥಿತರಿದ್ದರು. ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಮಂಗಳಾ ವೆಂ ನಾಯಕ್ ಅತಿಥಿಗಳನ್ನು ಸ್ವಾಗತಿಸಿದರು.