Saturday, April 21, 2012

ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮಅನುಷ್ಠಾನ ರಾಜ್ಯ ಪ್ರಥಮ: ಯೋಗೀಶ್ ಭಟ್

ಮಂಗಳೂರು,ಏಪ್ರಿಲ್.21:ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮಗಳಿಗಾಗಿ ರಾಜ್ಯ ಸರಕಾರ ಹಿಂದೆಂದಿಗಿಂತಲೂ ಅಧಿಕ ಅನುದಾನ ಒದಗಿಸುತ್ತಿದೆ ಎಂದು ವಿಧಾನ ಸಭೆಯ ಉಪಸಭಾಪತಿ ಎನ್.ಯೋಗೀಶ್ ಭಟ್ ಹೇಳಿದ್ದಾರೆ.ಅವರು ಇಂದು ದ.ಕ.ಜಿಲ್ಲಾ ಪಂಚಾ ಯತ್ ಸಭಾಂ ಗಣ ದಲ್ಲಿ ನಡೆದ ರಾಜ್ಯ ಅಲ್ಪ ಸಂಖ್ಯಾ ತರ ಅಭಿ ವೃದ್ಧಿ ನಿಗ ಮದ ಸೌಲಭ್ಯ ಗಳ ಚೆಕ್ ವಿತ ರಣಾ ಕಾರ್ಯ ಕ್ರಮದ ಅಧ್ಯ ಕ್ಷತೆ ವಹಿಸಿ ಮಾತ ನಾಡು ತ್ತಿದ್ದರು.
ರಾಜ್ಯದ ಬಜೆಟ್ ರೂ.35 ಸಾವಿರ ಕೋಟಿ ಇದ್ದಾಗ ಕೇವಲ ರೂ. 35 ಕೋಟಿ ಮಾತ್ರ ಅಲ್ಪ ಸಂಖ್ಯಾ ತರ ಕಲ್ಯಾಣ ಕಾರ್ಯ ಕ್ರಮ ಗಳಿಗೆ ನಿಗದಿ ಯಾಗಿತ್ತು. ಬಜೆಟ್ ರೂ. 86 ಸಾವಿರ ಕೋಟಿ ಹೆಚ್ಚಾ ದಾಗ ನಿಗ ಮದ ಅನು ದಾನ ರೂ.376 ಕೋಟಿ ಗಳಿಗೆ ಹೆಚ್ಚಿದೆ. ರಾಜ್ಯದ ಈ ಸಾಲಿನ ಬಜೆಟ್ ರೂ.ಒಂದು ಲಕ್ಷ ಕೋಟಿಗೆ ತಲು ಪಿದ್ದು, ನಿಗ ಮದ ಅನು ದಾನ ವನ್ನು ರೂ.406 ಕೋಟಿ ಗಳಿಗೆ ಹೆಚ್ಚಿ ಸಲಾ ಗಿದೆ ಎಂದು ಯೋ ಗೀಶ್ ಭಟ್ ಅವರು ತಿಳಿ ಸಿದರು.
ರಾಜ್ಯದ ಅಲ್ಪ ಸಂಖ್ಯಾ ತರಿಗೆ ಆರ್ಥಿಕ ಚೈತನ್ಯ ನೀಡಲು, ಆರ್ಥಿಕ ಸ್ವಾವ ಲಂಬನೆ ಸಾಧಿಸಲು ಸರಕಾರ ಸಾಕಷ್ಟು ಅನುದಾನ ನೀಡಲು ಸಿದ್ಧವಿದೆ. ಜತೆಗೆ ಅಲ್ಪಸಂಖ್ಯಾತರು ಶಿಕ್ಷಣ ಕ್ಷೇತ್ರದಲ್ಲಿ ಸಬಲೀಕರಣ ಹೊಂದಲು ಸರಕಾರ ಬೆಂಬಲ ನೀಡಲಿದೆ. ಸಾಲ ಪಡೆದವರು ಅದನ್ನು ಸದ್ಬಳಕೆ ಮಾಡಲು ಸೂಕ್ತ ತರಬೇತಿ ನೀಡಬೇಕೆಂದರು.
ಮುಖ್ಯ ಅತಿಥಿ ಸ್ಥಾನ ದಿಂದ ಮಾತ ನಾಡಿದ ಶಾಸಕ ಯು.ಟಿ.ಖಾದರ್ ನಿಗ ಮದಿಂದ ದೊರ ಕುವ ಸೌಲಭ್ಯ ಗಳನ್ನು ಸದು ಪಯೋಗ ಪಡಿಸಿ ಕೊಂಡು ಚಾಕ ಚಕ್ಯತೆ ಯಿಂದ ಸ್ವಾವ ಲಂಬಿ ಬದುಕು ಸಾಗಿಸ ಬೇಕು ಎಂದರು. ಉದ್ದಿಮೆ ಯಾಗಿ ಅಭಿ ವೃದ್ಧಿ ಹೊಂದಲು ಇನ್ಫೊ ಸಿಸ್ ನಮಗೆ ಮಾದರಿ ಯಾಗಿದೆ ಎಂದೂ ಹೇಳಿದರು.ಕರ್ನಾಟಕ ರಾಜ್ಯ ಕ್ರಿಶ್ಚಿಯನ್ ಅಭಿವೃದ್ಧಿ ಸಮಿತಿಯ ಸದಸ್ಯ ಫ್ರಾಂಕ್ಲಿನ್ ಮೊಂತೆರೊ ಮಾತನಾಡಿದರು. ಕಾರ್ಯ ಕ್ರಮ ಉದ್ಘಾ ಟಿಸಿದ ಕರ್ನಾ ಟಕ ಮೀನು ಗಾರಿಕಾ ಅಭಿ ವೃದ್ಧಿ ನಿಗ ಮದ ಅಧ್ಯಕ್ಷ ನಿತಿನ್ ಕುಮಾರ್ ಮಾತ ನಾಡಿ ರಾಜ್ಯ ಸರ ಕಾರ ಅಲ್ಪ ಸಂಖ್ಯಾ ತರಿ ಗಾಗಿ ಜಾರಿ ಗೊಳಿ ಸಿರುವ ಕಾರ್ಯ ಕ್ರಮ ಗಳು ಮಾದರಿ ಯಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಧನಲಕ್ಷ್ಮೀ ಜನಾರ್ಧನ್, ದ.ಕ ಜಿಲ್ಲಾ ವಕ್ಫ್ ಸಮಿತಿ ಅಧ್ಯಕ್ಷ ಉಸ್ಮಾನ್ ಹಾಜಿ, ಜಿ.ಪಂ. ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್, ರಾಜ್ಯ ಕ್ರಿಶ್ಚಿಯನ್ ಅಭಿವೃದ್ಧಿ ಪರಿಷತ್ ಸದಸ್ಯ ಜೆರಾಲ್ಡ್ ಡಿಸೋಜ, ಪ್ರಧಾನ ಮಂತ್ರಿಗಳ 18 ಅಂಶಗಳ ಕಾರ್ಯಕ್ರಮಗಳ ಅನುಷ್ಠಾನ ಸಮಿತಿ ಸದಸ್ಯ ಅಶೋಕ್ ಗೋವಿಯಸ್ ಮುಖ್ಯ ಅತಿಥಿಗಳಾಗಿದ್ದರು.ರಾಜ್ಯದ ಅಲ್ಪ ಸಂಖ್ಯಾ ತರ ಅಭಿ ವೃದ್ಧಿ ನಿಗ ಮದ ಅಧ್ಯಕ್ಷ ಎನ್.ಬಿ.ಅಬೂ ಬಕ್ಕರ್ ಪ್ರಾಸ್ತಾ ವಿಕ ಭಾಷಣ ಮಾಡಿ ದರು. ನಿಗ ಮದ ಜಿಲ್ಲಾ ವ್ಯವ ಸ್ಥಾಪಕ ಎಸ್.ಡಿ.ಸೋ ಮಪ್ಪ ಸ್ವಾಗ ತಿಸಿ ದರು. ಉಡುಪಿ ಜಿಲ್ಲಾ ವ್ಯ ವಸ್ಥಾ ಪಕ ಶ್ರೀ ಧರ ಭಂಡಾರಿ ವಂದಿ ಸಿದರು.ಕಾರ್ಯ ಕ್ರಮದಲ್ಲಿ 825 ಫಲಾನುಭವಿಗಳಿಗೆ ರೂ.138.32 ಲಕ್ಷ ಸಾಲ ಮಂಜೂರಾತಿಯ ಚೆಕ್ ಗಳನ್ನು ನೀಡಲಾಯಿತು.