Wednesday, April 25, 2012

ದ.ಕ.ಜಿ.ಪಂ ಗೆ ಪಿಯಾಸ್ ಪ್ರಶಸ್ತಿಯ ಗರಿ

ಮಂಗಳೂರು,ಏಪ್ರಿಲ್.25: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಗೆ ಮತ್ತೊಂದು ಪ್ರಶಸ್ತಿಯಗರಿ. ಪಂಚಾಯತ್ ರಾಜ್ ಸಂಸ್ಥೆಗಳ ಸಬಲೀ ಕರಣ ಮತ್ತುಉತ್ತರ ದಾಯಿತ್ವ ವನ್ನು ಪ್ರೋತ್ಸಾ ಹಿಸುವ ಯೋಜನೆ ಯಡಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಗೆ ಪ್ರಶಸ್ತಿ ಲಭಿಸಿದ್ದು,ನವ ದೆಹಲಿಯಲ್ಲಿ ನಿನ್ನೆ ನಡೆದ ಸಮಾ ರಂಭದಲ್ಲಿ ಕೇಂದ್ರದ ಗ್ರಾಮೀಣಭಿವೃದ್ಧಿ ಸಚಿವರಾದ ಶ್ರೀ ಜೈರಾಂ ರಮೇಶ್ಅವರು ಜಿಲ್ಲಾಪಂಚಾಯತ್ ಅಧ್ಯಕ್ಷೆಶ್ರೀಮತಿ ಕೆ.ಟಿ. ಶೈಲಜಾಭಟ್ ಅವರಿಗೆಪ್ರಶಸ್ತಿ ನೀಡಿದರು.ಕರ್ನಾಟಕ ಸರ್ಕಾರದಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದಶ್ರೀ ಜಗದೀಶ್ಶೆಟ್ಟರ್, ಬುಡಕಟ್ಟು ವ್ಯವಹಾರಗಳು ಮತ್ತು ಪಂಚಾಯತ್ ರಾಜ್ ಸಚಿವ ಶ್ರೀ ವಿ.ಕಿಶೋರ್ ಚಂದ್ರದೇವ್ ಉಪಸ್ಥಿತರಿದ್ದರು. ಜಿಲ್ಲೆಯ ಲೈಲಾ ಗ್ರಾಮಪಂಚಾಯತಿಯೂ ಗೌರವ ಗ್ರಾಮಸಭೆ ಪ್ರಶಸ್ತಿಯನ್ನು ಪಡೆಯಿತು.