Wednesday, April 11, 2012

ಭೂ ಕಂಪನ,ಭಯಭೀತರಾಗದಿರಿ: ಜಿಲ್ಲಾಧಿಕಾರಿ

ಮಂಗಳೂರು,ಏಪ್ರಿಲ್.11:ಇಂಡೋನೇಷ್ಯಾದಲ್ಲಿ ಸಂಭವಿಸಿರುವ ಭೂಕಂಪದ ಪರಿಣಾಮ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲೂ ಗೋಚರಿಸುತ್ತಿದ್ದು, ವಿಕೋಪ ನಿರ್ವಹಣೆಗೆ ಜಿಲ್ಲಾಡಳಿತ ಎಲ್ಲಾ ಮುನ್ನೆಚ್ಚರಿಕೆ ವಹಿಸಿದ್ದು ಜನರು ಭಯಭೀತರಾಗುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರು ತಿಳಿಸಿದ್ದಾರೆ.
ಇತ್ತೀ ಚಿಗೆ ಬಂದ ವರದಿ ಗಳ ಪ್ರಕಾರ ಭೂ ಕಂಪ ತೀವ್ರತೆ ಕಡಿಮೆ ಇದ್ದು, ಪೊಲೀಸ್, ಅಗ್ನಿ ಶಾಮಕ ಪಡೆ, ಕಂದಾ ಯ ಇಲಾಖೆ, ಹೋಮ್ ಗಾರ್ಡ್, ರವರಿಗೆ ಸೂಕ್ತ ಕ್ರಮ ಕೈ ಗೊಳ್ಳಲು ಸೂಚನೆ ನೀಡ ಲಾಗಿದ್ದು, ಸಮುದ್ರ ತೀರ ಪ್ರದೇಶ ಗಳಾದ ಬೆಂಗ್ರೆ, ಉಳ್ಳಾಲ, ಸಸಿ ಹಿತ್ಲು, ಸುಲ್ತಾನ ಬತ್ತೇರಿಯ ಉಸ್ತು ವಾರಿಗೆ ಮೂರು ತಂಡ ಗಳನ್ನು ರಚಿ ಸಲಾ ಗಿದೆ. ವಾಹನ ಹಾಗೂ ಸಿಬ್ಬಂ ದಿಯೊಂ ದಿಗೆ ಗುರುತಿ ಸಲಾದ ಪ್ರದೇಶ ಗಳಲ್ಲಿ ಸೂಕ್ತ ಮೂಲಸೌಕರ್ಯ ಹತ್ತಿರದ ಶಾಲೆಗಳಲ್ಲಿ ಕಲ್ಪಿಸಿ ಸಭೆ ನಡೆದ ಒಂದು ಗಂಟೆಯೊಳಗೆ ಮಾಹಿತಿ ನೀಡಲು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.ಕುತೂ ಹಲಿ ಗಳು ಸಮುದ್ರ ತೀರಕ್ಕೆ ಹೋಗಿ ಜಮಾ ಯಿಸು ವುದನ್ನು ತಡೆ ಯುವಂ ತೆಯೂ ಜಿಲ್ಲಾ ಧಿಕಾ ರಿಗಳು ಸೂಚಿ ಸಿದ್ದು, ಸ್ಥಳಾಂ ತರಕ್ಕೆ ಪೂರಕ ವಾಗಿ ಕೆ ಎಸ್ ಆರ್ ಟಿಸಿ ಯಿಂದ ಬಸ್ಸು ಗಳು, ವಾಹನ ಗಳನ್ನು, ಅಡುಗೆ ಮಾಡು ವವ ರನ್ನು ಗುರು ತಿಸಿ ಸಜ್ಜಾ ಗಿರು ವಂತೆ ಸೂಚಿ ಸಲಾಗಿದೆ. ಎನ್ ಎಂ ಪಿಟಿಯಲ್ಲಿ 3 ಬೋಟ್ ಗಳು, ಮೀನುಗಾರಿಕಾ ಇಲಾಖೆಯ ಬಳಿ ಇರುವ ಬೋಟ್ ಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲು ಜಿಲ್ಲಾಧಿಕಾರಿಗಳು ಹೇಳಿದರು.
ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್, ಅಪರ ಜಿಲ್ಲಾಧಿಕಾರಿ ದಯಾನಂದ, ಪಾಲಿಕೆ ಆಯುಕ್ತರಾದ ಡಾ ಹರೀಶ್ ಕುಮಾರ್, ಉಪ ವಿಭಾಗಧಿಕಾರಿ ಡಾ ವೆಂಕಟೇಶ್, ಅಗ್ನಿಶಾಮಕದ ಮುಖ್ಯ ಅಧಿಕಾರಿ ಎಚ್ ಎಸ್ ವರದರಾಜ್, ಡಿಸಿಪಿ ಮುತ್ತುರಾಯರು, ಡಿಸಿಪಿ ಅಪರಾಧ ಧರ್ಮಯ್ಯ, ತಹಸೀಲ್ದಾರ್ ರವಿಚಂದ್ರ ನಾಯಕ್, ಸಹಾಯಕ ನಿರ್ದೇಶಕರಾದ ಪಾಶ್ರ್ವನಾಥ್ ಸಭೆಯಲ್ಲಿ ಉಪಸ್ಥಿತರಿದ್ದರು.
ಮೀನುಗಾರರಿಗೆ ಮುನ್ನೆಚ್ಚರಿಕೆ:
ಇಂದು ಬೆಳಗ್ಗೆ ಇಂಡೋನೇಷ್ಯದ ಉತ್ತರ ಸುಮಾರ್ತದಲ್ಲಿ ಭೂಕಂಪನವಾಗಿದ್ದು 8.9 ರಿಕ್ಟರ್ ಮಾಪಕದಲ್ಲಿ ಭೂಕಂಪ ದಾಖಲಾಗಿರುವುದರಿಂದ ಇದರ ಪರಿಣಾಮ ಕರಾವಳಿ ಜಿಲ್ಲೆಯಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಬಾರದೆಂದು, ತೆರಳಿದವರು ತಕ್ಷಣವೇ ಹಿಂದಿರುಗಬೇಕೆಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ತಿಳಿಸಿದ್ದಾರೆ.