Thursday, April 5, 2012

'ದೇಶ ಕಂಡ ಅತ್ಯುತ್ತಮ ಸಂಸದೀಯಪಟು ಡಾ.ಜಗಜೀವನರಾಂ'

ಮಂಗಳೂರು,ಏಪ್ರಿಲ್.05:ನಮ್ಮ ದೇಶ ಕಂಡ ಅತ್ಯುತ್ತಮ ಸಂಸದೀಯ ಪಟು ಡಾ. ಬಾಬು ಜಗಜೀವನರಾಂ; ಹಸಿರು ಕ್ರಾಂತಿಯ ಹರಿಕಾರರೆಂದೇ ಪ್ರಸಿದ್ಧಿ ಪಡೆದ ಇವರು, ರಕ್ಷಣಾ ಮಂತ್ರಿಯಾಗಿಯೂ ಇವರ ಸಾಧನೆ ಗಮನೀಯ ಎಂದು ವಿಧಾನಸಭಾ ಉಪಸಭಾಧ್ಯಕ್ಷರಾದ ಎನ್ ಯೋಗೀಶ್ ಭಟ್ ಅವರು ಹೇಳಿದರು.ಇಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಆಯೋಜಿಸಲಾದ ಡಾ ಬಾಬು ಜಗಜೀನವ ರಾಂ ಅವರ 105ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ತಮ್ಮ ರಾಜ ಕೀಯ ಜೀವ ನದಲ್ಲಿ ಕಾರ್ಮಿಕ ಸಚಿವ ರಾಗಿ, ರಕ್ಷಣಾ ಮಂತ್ರಿ ಯಾಗಿ ದೇಶ ವನ್ನು ಸ್ವಾವ ಲಂಬಿ ಯಾಗಿ ಮಾಡು ವುದ ರಲ್ಲಿ ಅವರು ನೀಡಿದ ಕೊಡುಗೆ ಅನನ್ಯ ಎಂದ ಯೋಗೀಶ್ ಭಟ್ ಅವರು, ಬಳಿಕ ಉಪ ಪ್ರಧಾನಿ ಯಾಗಿ, ಶೋಷಿತ ವರ್ಗ ದವರ ಒಳಿತಿ ಗಾಗಿ ಕೈ ಗೊಂಡ ಕ್ರಮ ಗಳಿಂ ದಾಗಿ ಜನ ಮಾನಸ ದಲ್ಲಿ ತಮ್ಮ ಛಾಪನ್ನು ಒತ್ತಿ ದರು ಎಂದರು.
ಇಂದು ನಾವು ಹಿಂದುಳಿದ ವರ್ಗದವರ ಮಕ್ಕಳ ಅಭಿವೃದ್ಧಿಗೆ ಹೆಚ್ಚಿನ ಗಮನಹರಿಸುವುದು ನಾವು ಅವರಿಗೆ ಸಲ್ಲಿಸುವ ಗೌರವವಾಗಿರುತ್ತದೆ. ಇನ್ನೊಂದು ಸಂತಸದ ವಿಷಯವೆಂದರೆ ಮಂಗಳೂರಿನಲ್ಲಿ ಅಂಬೇಡ್ಕರ್ ಭವನಕ್ಕೆ ವಿಶೇಷ ಅನುದಾನ 4 ಕೋಟಿ ರೂ.ಗಳನ್ನು ಸರ್ಕಾರ ಮಂಜೂರು ಮಾಡಿರುವುದು ಎಂದು ಉಪಸಭಾಧ್ಯಕ್ಷರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀಮತಿ ಕೆ ಟಿ ಶೈಲಜಾ ಭಟ್ ಅವರು, ಶ್ರೇಷ್ಠ ವ್ಯಕ್ತಿಗಳ ಜನುಮದಿನಾಚರಣೆಗಳು ಅವರ ಮೇರು ವ್ಯಕ್ತಿತ್ವವನ್ನು ಅರಿಯಲು ಸಹಕಾರಿಯಾಗುತ್ತದೆ. ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಲು ನೆರವಾಗುತ್ತದೆ ಎಂದರು. ಸಮಾಜ ಪ್ರತಿಭಾವಂತರನ್ನು ಪೋಷಿಸಬೇಕು ಎಂದರು.
ಶಾಸಕ ಯು ಟಿ ಖಾದರ್ ಅವರು ಮಾತನಾಡಿ, ಇತಿಹಾಸ ಅರಿತರೆ ಮಾತ್ರ ಇತಿಹಾಸ ನಿರ್ಮಿಸಲು ಸಾಧ್ಯ ಎಂಬುದನ್ನು ಸ್ಮರಿಸಿದರು. ಸಾಮಾಜಿಕ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಜನಾರ್ಧನ ಗೌಡ ಅವರು, ಡಾ ಬಾಬು ಜಗಜೀವನ್ ರಾಂ ಅವರು ಅಸ್ಪೃಶ್ಯತೆ ಮೀರಿ ವಿದ್ವತ್ ಬೆಳೆಸಿ ಸಾಮಾಜಿಕವಾಗಿ ಗುರುತಿಸಲ್ಪಟ್ಟವರು ಎಂದರು. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಧನಲಕ್ಷ್ಮಿ, ಪಾಲಿಕೆ ಉಪಮೇಯರ್ ಶ್ರೀಮತಿ ಅಮಿತಕಲಾ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ವೈ ಶಿವರಾಮಯ್ಯ ಅವರು, ಏಪ್ರಿಲ್ ತಿಂಗಳಲ್ಲಿ ಹಲವು ಮಹಾಚೇತನಗಳು ಜನಿಸಿದ್ದಾರೆ. ನಮ್ಮ ದೇಶಕ್ಕಾಗಿ ಇಲ್ಲಿನ ಸಾಮಾಜಿಕ ಸಮಾನತೆಗೆ ದುಡಿದವರ ತ್ಯಾಗ, ಬಲಿದಾನಗಳನ್ನು ಸ್ಮರಿಸಲು ಹಾಗೂ ಒಳಿತನ್ನು ಪಾಲಿಸಲು ಜನ್ಮದಿನಾಚರಣೆಗಳನ್ನು ಆಚರಿಸಬೇಕು ಎಂದರು.
ಡಾ ಬಾಬು ಜಗಜೀವನರಾಂ ಅವರ ವಿದ್ಯಾರ್ಥಿ ಜೀವನ, ಭಾಷಾ ಪಾಂಡಿತ್ಯ, ರಾಜಕೀಯ ಜೀವನದಲ್ಲಿ ವಹಿಸಿದ ಜವಾಬ್ದಾರಿಗಳು, ನಿಭಾಯಿಸಿದ ರೀತಿ, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಪರಿಸ್ಥಿತಿಯೊಂದಿಗೆ ರಾಜಿ ಮಾಡಿಕೊಳ್ಳದ ಅವರ ವ್ಯಕ್ತಿತ್ವ, ರಕ್ಷಣಾ ವಲಯ ಹಾಗೂ ಕೃಷಿ ವಲಯ, ಕಾರ್ಮಿಕ ವಲಯಕ್ಕೆ ಅವರು ನೀಡಿದ ಕೊಡುಗೆಗಳ ಬಗ್ಗೆ ವಿವರಿಸಿದರು.
ಜಿಲ್ಲಾಧಿಕಾರಿ ಡಾ ಎನ್. ಎಸ್ ಚನ್ನಪ್ಪಗೌಡ, ಸಿಇಒ ಡಾ ಕೆ ಎನ್ ವಿಜಯಪ್ರಕಾಶ್,ಪಾಲಿಕೆ ಆಯುಕ್ತರಾದ ಡಾ ಹರೀಶ್ ಕುಮಾರ್ ಉಪಸ್ಥಿತರಿದ್ದರು. ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಅರುಣ್ ಫುರ್ಟಡೋ ಸ್ವಾಗತಿಸಿದರು. ಶ್ರೀಮತಿ ಗೀತಾ ಕಾರ್ಯಕ್ರಮ ನಿರೂಪಿಸಿದರು.