Monday, April 2, 2012

ರೂ.15ಕೋ.ವೆಚ್ಚದಲ್ಲಿ ಜಿಲ್ಲಾ ರಂಗಮಂದಿರ ನಿರ್ಮಾಣ

ಮಂಗಳೂರು,ಏಪ್ರಿಲ್.02: ನಗರದ ಬೋಂದೇಲ್ ನಲ್ಲಿ 3.35 ಎಕರೆ ಪ್ರದೇಶದಲ್ಲಿ ರೂ.15ಕೋಟಿ ವೆಚ್ಚದಲ್ಲಿ ಜಿಲ್ಲಾ ರಂಗಮಂದಿರ ನಿರ್ಮಾಣ ಮಾಡುವ ಬಗ್ಗೆ ಇಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ವಿಧಾನಸಭೆಯ ಉಪಸಭಾಪತಿ ಎನ್.ಯೋಗೀಶ್ ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ರಂಗಮಂದಿರ ನಿರ್ಮಾಣ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.
1500 ಪ್ರೇಕ್ಷಕರ ಸಾಮಥ್ರ್ಯದ ಹವಾನಿಯಂತ್ರಿತ ಸುಸಜ್ಜಿತ ರಂಗಮಂದಿರ ನಿರ್ಮಾಣಕ್ಕೆ ಅರ್ಕಿಟೆಕ್ಟ್ ಸನತ್ ಕುಮಾರ್ ಅವರು ವಿನ್ಯಾಸ ಮಾಡಿರುವ ನಿಲಿನಕ್ಷೆಯನ್ನು ಸಭೆಯಲ್ಲಿ ಪರಿಶೀಲನೆ ಮಾಡಿ ಒಪ್ಪಿಗೆ ಸೂಚಿಸಲಾಗಿದ್ದು ಅಂತಿಮ ವಿನ್ಯಾಸವನ್ನು 4-5 ದಿನಗಳೊಳಗಾಗಿ ಸಲ್ಲಿಸುವಂತೆ ವಿನ್ಯಾಸಕಾರರಿಗೆ ಸೂಚಿಸಲಾಯಿತು.
ಸಭೆಯಲ್ಲಿ ಏರ್ಯ ಲಕ್ಷ್ಮೀನಾರಾಯಣ ಆಳ್ವ, ಜಿಲ್ಲಾಧಿಕಾರಿ ಡಾ|ಎನ್.ಎಸ್.ಚನ್ನಪ್ಪಗೌಡ, ಕಾರ್ಯಪಾಲಕ ಅಭಿಯಂತರರಾದ ಗೋಪಾಲಕೃಷ್ಣ ನಾಯಕ್, ಕನ್ನಡ ಮತ್ತು ಸಂಸಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಶ್ರೀಮತಿ ಮಂಗಳ ವೆಂ ನಾಯಕ್ ಮುಂತಾದವರು ಭಾಗವಹಿಸಿದ್ದರು.