Saturday, April 14, 2012

ಗ್ರಾಮೀಣ ಪ್ರದೇಶಗಳ ಕುಡಿಯುವ ನೀರು ಸಮಸ್ಯೆ ಪರಿಹಾರಕ್ಕೆ ತುರ್ತಾಗಿ ರೂ.197 ಲಕ್ಷ ರೂ.

ಮಂಗಳೂರು,ಏಪ್ರಿಲ್.14: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವವನ್ನು ನಿರ್ವಹಿಸಲು ತುರ್ತಾಗಿ ರೂ. 197 ಲಕ್ಷ ರೂ.ಗಳ ಅಗತ್ಯ ಇದೆ ಎಂದು ದ.ಕ.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ|ಕೆ.ಎನ್.ವಿಜಯಪ್ರಕಾಶ್ ತಿಳಿಸಿದರು.
ಅವರು ಇಂದು ದ.ಕ.ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸನ್ಮಾನ್ಯ ವಿಧಾನಸಭಾ ಉಪಾಧ್ಯಕ್ಷರಾದ ಎನ್..ಯೋಗೀಶ್ ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕುಡಿಯುವ ನೀರಿನ ಸಭೆಯಲ್ಲಿ ಈ ವಿಷಯ ತಿಳಿಸಿದರು.ಜಿಲ್ಲಾ ಧಿಕಾರಿ ಡಾ ಎನ್ ಎಸ್ ಚನ್ನಪ್ಪ ಗೌಡ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಅವರ ಉಪ ಸ್ಥಿತಿ ಯಲ್ಲಿ ಜಿಲ್ಲಾ ಮಟ್ಟದ ಅಧಿಕಾ ರಿಗಳ ಸಭೆಯಲ್ಲಿ ನಗರ ಮತ್ತು ಗ್ರಾ ಮೀಣ ಪ್ರದೇಶ ಗಳಲ್ಲಿ ಕುಡಿ ಯುವ ನೀರಿನ ಕುರಿತ ಸಭೆ ಯಲ್ಲಿ ಸಮಸ್ಯೆ ನಿರ್ವ ಹಣೆ ಕುರಿತು ಸವಿ ವರ ಸಭೆ ನಡೆ ಸಲಾ ಯಿತು. ಈಗಾ ಗಲೇ ಸಮಸ್ಯೆ ಗಳಿಗೆ ಸ್ಪಂ ದಿಸಲು ತುರ್ತು ಕ್ರಮ ಗಳನ್ನು ಕೈ ಗೊಂಡ ಬಗ್ಗೆ ಜಿಲ್ಲಾ ಧಿಕಾ ರಿಗಳು ಉಪ ಸಭಾ ಧ್ಯಕ್ಷರ ಗಮನ ಸೆಳೆದರು.
ಜಿಲ್ಲೆಯ 275 ಜನವಸತಿ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡಿದ್ದು, ಮಂಗಳೂರು ತಾಲ್ಲೂಕಿನಲ್ಲಿ 90 ಗ್ರಾಮಗಳಲ್ಲಿ ಸಮಸ್ಯೆ ಇದೆ ಇವುಗಳಲ್ಲಿ 31 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಪ್ರತಿ ನಿತ್ಯ 1.12ಲಕ್ಷ ಲೀಟರ್ ನೀರು ಸರಬರಾಜು ಮಾಡಲಾಗುತ್ತಿದೆ, ಅಂತೆಯೇ ಬಂಟ್ವಾಳ ತಾಲ್ಲೂಕಿನಲ್ಲಿ 74 ಗ್ರಾಮಗಳಲ್ಲಿ ನೀರಿನ ಸಮಸ್ಯೆ ತಲೆದೋರಿದ್ದು, 13 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಪ್ರತಿದಿನ 30ಸಾವಿರ ಲೀಟರ್ ನೀರನ್ನು ಒದಗಿಸಲಾಗುತ್ತಿದೆ.ಜಿಲ್ಲೆಯ 275 ಕುಡಿ ಯುವ ನೀರಿನ ಸಮಸ್ಯೆ ಇರುವ ಗ್ರಾಮ ಗಳಿಗೆ ನೀರು ಒದಗಿ ಸಲು ಟಾಸ್ಕ ಫೋರ್ಸ್ ನಿಂದ ರೂ.60 ಲಕ್ಷ, ಹಾಗೂ ಜಿಲ್ಲಾ ಪಂಚಾ ಯತ್ ನಿಂದ ರೂ.20 ಲಕ್ಷ ಹಣ ಬಿಡು ಗಡೆ ಯಾಗಿದೆ. ಕುಡಿ ಯುವ ನೀರಿನ ಸಂಕಷ್ಟ ಎದು ರಿಸುವ ಗ್ರಾಮ ಗಳಿಗೆ ಟ್ಯಾಂ ಕರ್ ಮೂಲಕ ನೀರು ಒದ ಗಿಸಲು ಪ್ರತಿ ಗ್ರಾಮ ಪಂಚಾ ಯತ್ ಗೆ ತಲಾ ರೂ2ಲಕ್ಷ ದಂತೆ ವಿನಿಯೋಗಿಸಲು ಅವಕಾಶ ನೀಡಲಾಗಿದೆ ಎಂದು ಸಿಇಓ ಅವರು ತಿಳಿಸಿದರು..
ಜಿಲ್ಲೆಯ ಮಳವೂರು ಮತ್ತು ಕಿನ್ನಿಗೋಳಿ ಗಳಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆಯನ್ನು ಜಾರಿಗೆ ತಂದು 26 ಗ್ರಾಮಗಳಿಗೆ ಕುಡಿಯುವ ನೀರನ್ನು ಒದಗಿಸಲಾಗುತ್ತಿದ್ದು, ಅದರಂತೆ ಜಿಲ್ಲೆಯ ಇತರೆ ಗ್ರಾಮಗಳಿಗೂ ಬಹುಗ್ರಾಮ ಕುಡಿಯುವನೀರು ಯೋಜನೆ ತರುವ ಉದ್ದೇಶದಿಂದ ಈಗಾಗಲೇ ಇಂತಹ 32 ಬಹುಗ್ರಾಮ ಕುಡಿಯುವ ನೀರು ಯೋಜನೆಗಳನ್ನು ರೂ. 541ಕೋಟಿ ವೆಚ್ಚದಲ್ಲಿ ಅನುಷ್ಟಾನಕ್ಕೆ ತರುವ ಮೂಲಕ 176 ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರು ಒದಗಿಸಬಹುದಾಗಿದೆ ಎಂದೂ ಸಿಇಒ ಅವರು ಹೇಳಿದರು. ಇದರಿಂದ ಜಿಲ್ಲೆಯಲ್ಲಿ ಶಾಶ್ವತ ಕುಡಿಯುವ ನೀರು ಸಮಸ್ಯೆಗೆ ಪರಿಹಾರ ಸಾಧ್ಯ ಎಂದು ಅವರು ವಿನಂತಿಸಿದರು.
ಜಿಲ್ಲೆಯಲ್ಲಿ ತುರ್ತಾಗಿ ಕುಡಿಯುವ ನೀರು ಕಾಮಗಾರಿಗಳನ್ನು ಕೈಗೊಳ್ಳಲು ರೂ.6 ಕೋಟಿಗಳ ಅನುದಾನವನ್ನು ನೀಡುವಂತೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಕೆ.ಟಿ.ಶೈಲಜಾ ಭಟ್ ಅವರು ಮಾನ್ಯ ಮುಖ್ಯಮಂತ್ರಿಗಳನ್ನು ವಿನಂತಿಸಿದ್ದಾರೆ ಎಂದು ಸಿಇಓ ಅವರು ಸಭೆಗೆ ತಿಳಿಸಿದರು.ಹೀಗೆ ಮಳೆ ಬಾರ ದಿದ್ದಲ್ಲಿ ಮುಂದಿನ ದಿನ ಗಳಲ್ಲಿ ಜಿಲ್ಲೆ ಯಲ್ಲಿ ಕುಡಿ ಯುವ ನೀರಿಗೆ ಇನ್ನೂ ಹೆಚ್ಚಿನ ಸಮಸ್ಯೆ ಉಂಟಾ ಗಲಿದೆ ಆದರಿಂದ ತುರ್ತಾ ಗಿ ರೂ.2 ಕೋಟಿ ಗಳ ಅನು ದಾನ ವನ್ನು ಜಿಲ್ಲೆಗೆ ಬಿಡು ಗಡೆ ಮಾಡಿ ಸುವಂತೆ ಜಿಲ್ಲಾ ಧಿಕಾರಿ ಡಾ|ಎನ್.ಎಸ್. ಚನ್ನಪ್ಪ ಗೌಡ ಅವರು ಯೋ ಗೀಶ್ ಭಟ್ ಹಾಗೂ ಸಂಸದ ರಾದ ನಳಿನ್ ಕುಮಾರ್ ಕಟೀಲ್ ಅವ ರಲ್ಲಿ ಮನವಿ ಮಾಡಿ ದರು.
ತಾಲೂಕುಗಳಲ್ಲಿ ನೀರು ನಿರ್ವಹಣೆಗೆ ಹಾಗೂ ಜನರ ಸಮಸ್ಯೆ ಆಲಿಸಲು ಕಂಟ್ರೋಲ್ ರೂಂ ತೆರೆಯಲಾಗಿದ್ದು, ಇಒ ಮತ್ತು ಪಿಡಿಒ ಹಾಗೂ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ಗಳು ನೇರ ಜವಾಬ್ದಾರರು ಎಂದು ಸಭೆಯಲ್ಲಿ ಸ್ಪಷ್ಟಪಡಿಸಲಾಯಿತು.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾಮಾನ್ಯ ದಿನಗಳಲ್ಲಿ 38ಎಮ್,ಜಿ.ಡಿ. ನೀರನ್ನು ನಾಗರಿಕರಿಗೆ ಒದಗಿಸಲಾಗುತ್ತಿತ್ತು, ಆದರೆ ಈಗ ನೀರಿನ ಅಭಾವ ಇರುವುದರಿಂದ ಪ್ರತಿನಿತ್ಯ 24 ಎಮ್.ಜಿ.ಡಿಗಳಷ್ಟು ಮಾತ್ರ ಬಿಡುಗಡೆ ಮಾಡಲಾಗುತ್ತಿದೆ, ನಗರದಲ್ಲಿ ವಿಶೇಷವಾಗಿ ಎತ್ತರದ ಗುಡ್ಡೆ ಪ್ರದೇಶಗಳಿಗೆ ನೀರು ಸರಬರಾಜಿನಲ್ಲಿ ತೊಂದರೆ ಆಗುತ್ತಿದೆ ಎಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಾದ ಡಾ|ಹರೀಶ್ ಕುಮಾರ್ ಅವರು ಸಭೆಯ ಅಧ್ಯಕ್ಷರಿಗೆ ತಿಳಿಸಿದರು.
ಮುಲ್ಕಿ, ಸುರತ್ಕಲ್ ಪ್ರದೇಶಗಳಿಗೆ ನೀರನ್ನು ಸಮರ್ಪಕವಾಗಿ ಸರಬರಾಜು ಮಾಡುವಂತೆ ಯೋಗೀಶ್ ಭಟ್ ಅವರು ಆಯುಕ್ತರ ಗಮನ ಸೆಳೆದಾಗ ಆಯುಕ್ತರು ಇದಕ್ಕೆ ಉತ್ತರಿಸಿ ಈಗಾಗಲೇ ಕೆಐಒಸಿಎಲ್ ನಿಂದ ನೀರನ್ನು ಮಹಾನಗರ ಪಾಲಿಕೆ ನೀರು ಸರಬರಾಜು ಕೊಳವೆಗೆ ಅಳವಡಿಸುವ ಕಾರ್ಯ ನಡೆಯುತ್ತಿದ್ದು, ಮಂಗಳವಾರದಿಂದ ಆ ಭಾಗಗಳ ಜನರಿಗೆ ಸಮರ್ಪಕವಾಗಿ ನೀರನ್ನು ಒದಗಿಸುವುದಾಗಿ ತಿಳಿಸಿದರು. ಅತ್ಯಗತ್ಯ ಕಡೆಗಳಲ್ಲಿ ಟ್ಯಾಂಕರ್ ಮೂಲಕ ನೀರು ಒದಗಿಸಲಾಗುತ್ತಿದೆ ಎಂದೂ ಅವರು ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೆ.ದಯಾನಂದ, ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.