Friday, April 6, 2012

24 ಶಿಬಿರಗಳಲ್ಲಿ 837 ಅಪೌಷ್ಠಿಕ ಮಕ್ಕಳ ತಪಾಸಣೆ

ಮಂಗಳೂರು,ಏಪ್ರಿಲ್.06:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು ಆರು ವರ್ಷದೊಳಗಿನ 1,13,664 ಮಕ್ಕಳನ್ನು ಸಮಗ್ರ ಮಕ್ಕಳ ಅಭಿವೃದ್ಧಿ ಇಲಾಖೆ ಪರಿಶೀಲಿಸಿ ಇವರಲ್ಲಿ 860 ಮಕ್ಕಳನ್ನು ಅಪೌಷ್ಠಿಕ ಮಕ್ಕಳೆಂದು ಗುರುತಿಸಿತ್ತು.
ಇವರಲ್ಲಿ 837 ಮಕ್ಕಳಿಗೆ ಆರೋಗ್ಯ ಇಲಾಖೆ ಮಹಾನಗರಪಾಲಿಕೆ ಸೇರಿದಂತೆ ಎಲ್ಲ ತಾಲೂಕುಗಳಲ್ಲಿ ಆರೋಗ್ಯ ಶಿಬಿರಗಳನ್ನು ಮಾಡಿ ತಜ್ಞವೈದ್ಯರಿಂದ ತಪಾಸಣೆಗೊಳಪಡಿಸಿ ಸೂಕ್ತ ಚಿಕಿತ್ಸೆ ನೀಡಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಶ್ರೀರಂಗಪ್ಪ ಅವರು ತಿಳಿಸಿದ್ದಾರೆ.
837 ಮಕ್ಕಳಲ್ಲಿ 17 ಮಕ್ಕಳನ್ನು ಬಾಲಸಂಜೀವಿನಿ ಯೋಜನೆಯಡಿಯಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗಿದ್ದು, ಸುಳ್ಯದಲ್ಲಿ ಎರಡು ಮಕ್ಕಳು ಕೇರಳಕ್ಕೆ ವಲಸೆ ಹೋಗಿದ್ದು, ಬೆಳ್ತಂಗಡಿ ತಾಲೂಕಿನ 21 ಮಕ್ಕಳು ಶಿಬಿರಕ್ಕೆ ಹಾಜರಾಗಿರುವುದಿಲ್ಲ ಎಂದು ಪ್ರಕಟಣೆಯಲ್ಲಿ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪುತ್ತೂರಿನಲ್ಲಿ 131 ಮಕ್ಕಳನ್ನು ಮಾರ್ಚ್ 2012ರಲ್ಲಿ ತಪಾಸಣೆಗೊಳಪಡಿಸಿದ್ದು, ಉಳಿದ 39 ಮಕ್ಕಳನ್ನು ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ತಪಾಸಣೆಗೆ ಒಳಪಡಿಸಲಾಗಿತ್ತು.