ಸಮಾರಂಭ ಉದ್ಘಾಟಿಸಿ ಮಾತನಾಡಿದ ಸಂಸದ ನಳೀನ್ ಕುಮಾರ್ ಕಟೀಲ್ ಅವರು ದೇಶದ ಆಸ್ತಿಯಾದ ಯುವಕರಿಂದ ಮಾತ್ರ ಸಧೃಡ ಭಾರತ ನಿರ್ಮಾಣ ಮಾಡಲು ಸಾಧ್ಯ.ರಾಷ್ಟ್ರ ಅಭಿವೃದ್ದಿಯೇ ಗುರಿಯಾಗಿರಿಸಿ ಯುವ ಜನತೆ ಮುಂದಡಿ ಇಡಬೇಕೆಂದು ಕರೆ ನೀಡಿದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷ ಕೆ. ಸಂತೋಷ್ ಕುಮಾರ್ ಭಂಡಾರಿ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.ಮಂಗಳೂರು ಮೇಯರ್ ಎಂ. ಶಂಕರ್ ಭಟ್ ಅವರು ಮುಖ್ಯ ಅಥಿತಿಯಾಗಿ ಸಮಾರಂಭದಲ್ಲಿ ಭಾಗವಹಿಸಿದ್ದರು. 2008-09 ರ ಯುವ ಪ್ರಶಸ್ತಿಯನ್ನು ಹಳೆಯಂಗಡಿ ಯುವತಿ ಮಂಡಲದ ಕುಮಾರಿ ವನಿತ ಮತ್ತು ಕಾರ್ಕಳ ಯುವಕ ಮಂಡಲದ ಯತೀಶ್ ಅವರಿಗೆ,ಹಾಗೂ ಅತ್ತ್ಯುತ್ತಮ ಯುವ ಮಂಡಲ ಪ್ರಶಸ್ತಿಯನ್ನು ಕನಕ ಮಜಲು ಯುವಕ ಮಂಡಲಕ್ಕೆ ಅತಿಥಿಗಳು ಪ್ರದಾನ ಮಾಡಿದರು.