Friday, November 6, 2009

ಹರೇಕಳ-ನ್ಯೂ ಪಡ್ಪುವಿಗೆ ಪಿಯು ಕಾಲೇಜು: ಸಂಸದ ಕಟೀಲ್

ಮಂಗಳೂರು,ನ.6:ಶೈಕ್ಷಣಿಕ ಸಂಸ್ಥೆಗಳನ್ನು ಹೇಗೆ ಕಟ್ಟಿ ಬೆಳೆಸಬೇಕೆಂಬುದಕ್ಕೆ ಇಡೀ ರಾಜ್ಯಕ್ಕೆ ಮಾದರಿಯಾಗಿರುವ ಹಾಜಬ್ಬರ ಅಕ್ಷರ ಪ್ರೀತಿಗೆ ಪ್ರೋತ್ಸಾಹಕ ವಾಗಿ ಅವರ ಹರೇಕಳ ನ್ಯೂಪಡ್ಪುವಿಗೆ ಪಿಯು ಕಾಲೇಜನ್ನು ಮಂಜೂರು ಮಾಡಿಸುವ ಭರವಸೆಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ಅವರು ನೀಡಿದರು.
ಅವರು ಇಂದು ಹರೇಕಳ-ನ್ಯೂಪಡ್ಪುವಿನ ಶಾಲಾ ಆಟದ ಮೈದಾನ ಉದ್ಘಾಟಿಸಿ ಮಾತನಾಡುತ್ತಿದ್ದರು.ಅಕ್ಷರ ಸಂತ ಹಾಜಬ್ಬರಿಂದ ಇಲ್ಲಿನ ಶಾಲೆಗೆ ರಾಷ್ಟ್ರ ಮಟ್ಟದ ಕೀರ್ತಿ ಬಂದಿದ್ದು,ಈ ಶಾಲೆಯ ಅಭಿವೃದ್ಧಿಗೆ ಎಲ್ಲರ ನೆರವು ದೊರಕಿದೆ.ಸಂಸದರ ನಿಧಿಯಿಂದ ಸಾಧ್ಯವಿರುವ ನೆರವು ಹಾಗೂ ಪಿಯುಸಿ ಕಾಲೇಜು ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳುವ ಭರವಸೆಯನ್ನು ಸಂಸದರು ನೀಡಿದರು.ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಶಾಲೆಗಳಿಂದ ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯ ಎಂದ ನುಡಿದರು.
ಸಮಾರಂಭದಲ್ಲಿ ಶಾಸಕ ಯು ಟಿ ಖಾದರ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ,ಸದಸ್ಯರಾದ ಅಜೀಜ್ ಮಲ್ಹಾರ್,ತಾ.ಪಂ.ಅಧ್ಯಕ್ಷ ರಾಮಚಂದ್ರ ಕುಂಪಲ, ಸಿಇಒ ಶಿವಶಂಕರ್, ವಿದ್ಯಾಂಗ ಉಪನಿರ್ದೇಶಕ ಚಾಮೇಗೌಡ,ಶಾಲೆಗೆ ನೆರವು ನೀಡಿದ ಹಲವು ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.