Friday, May 15, 2009

ದ.ಕ.ಜಿಲ್ಲೆ ಮತಚಲಾವಣೆ ವಿವರ

ಮಂಗಳೂರು, ಮೇ 15: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಏ.30ರಂದು ನಡೆದ ಲೋಕಸಭಾ ಚುನಾವಣೆಯಲ್ಲಿ ಒಟ್ಟು 1363651 ಮತದಾರರಿದ್ದು, 1015499 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
ಬೆಳ್ತಂಗಡಿ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 178202 ಮತದಾರರಿದ್ದು, ಇವರಲ್ಲಿ 129485 ಮತದಾರರು ಮತ ಚಲಾಯಿಸಿದ್ದಾರೆ. ಇವರಲ್ಲಿ 65749 ಪುರುಷರು, 63736 ಮಹಿಳೆಯರು.
ಮೂಡಬಿದ್ರೆಯಲ್ಲಿ ಒಟ್ಟು 110122 ಮತದಾರರಿದ್ದು, ಇವರಲ್ಲಿ 110122 ಮತದಾರರು ಮತ ಚಲಾಯಿಸಿದ್ದಾರೆ. ಇವರಲ್ಲಿ 52289 ಪುರುಷರು, 57833 ಮಹಿಳೆಯರು. ಮಂಗಳೂರು ನಗರ ಉತ್ತರದಲ್ಲಿ ಒಟ್ಟು 184428 ಮತದಾರರಿದ್ದು, 135060 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಇವರಲ್ಲಿ 66281 ಪುರುಷರು, 68779 ಮಹಿಳೆಯರು. ಮಂಗಳೂರು ನಗರ ದಕ್ಷಿಣದಲ್ಲಿ 190952 ಮತದಾರರಿದ್ದು, 130336 ಮತಚಲಾಯಿಸಿರುತ್ತಾರೆ. ಇವರಲ್ಲಿ 63239ಪುರುಷರು, 67097 ಮಹಿಳೆಯರು. ಮಂಗಳೂರು ಕ್ಷೇತ್ರದಲ್ಲಿ 145715 ಮತದಾರರಿದ್ದು, 108496 ಮತದಾರರು ಮತಚಲಾಯಿಸಿದ್ದು, 53323 ಪುರುಷರು, 55273 ಮಹಿಳೆಯರು ಮತ ಚಲಾಯಿಸಿರುತ್ತಾರೆ.
ಬಂಟ್ವಾಳ ಕ್ಷೇತ್ರದಲ್ಲಿ 179057 ಮತದಾರರಿದ್ದು, ಇವರಲ್ಲಿ 139004 ಮತದಾರರು ಮತ ಚಲಾಯಿಸಿದ್ದಾರೆ. 68587 ಪುರುಷರು, 70417 ಮಹಿಳೆಯರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
ಪುತ್ತೂರು ಕ್ಷೇತ್ರ ವ್ಯಾಪ್ತಿಯಲ್ಲಿ 165034 ಒಟ್ಟು ಮತದಾರರಿದ್ದು, ಇವರಲ್ಲಿ 129502 ಮತದಾರರು ಮತ ಹಾಕಿರುತ್ತಾರೆ. ಇವರಲ್ಲಿ 65591ಪುರುಷರು, 63911 ಮಹಿಳೆಯರು ಮತ ಚಲಾಯಿಸಿರುತ್ತಾರೆ. ಸುಳ್ಯ ಕ್ಷೇತ್ರ ವ್ಯಾಪ್ತಿಯಲ್ಲಿ 166421 ಮತದಾರರಿದ್ದು, 133494 ಮತದಾರರು ಮತ ಚಲಾಯಿಸಿದ್ದು, ಇವರಲ್ಲಿ 68005 ಪುರುಷರು, 65489 ಮಹಿಳೆಯರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.