
ಇಂದು ಬೆಳ್ತಂಗಡಿ ತಾಲೂಕಿನ ಐ ಬಿ ಪಕ್ಕದಲ್ಲಿ ಸ್ಥಾಪಿಸಲಾದ ಗುಣ ನಿಯಂತ್ರಣ ಪ್ರಯೋಗಾಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು, ಲೋಕೋಪಯೋಗಿ ಇಲಾಖೆಯ ಸಿಬ್ಬಂದಿ ಕೊರತೆ ನೀಗಿಸುವ ಭರವಸೆಯನ್ನು ನೀಡಿದರಲ್ಲದೆ, ಜಿಲ್ಲೆಯ ರಸ್ತೆ ಕಾಮಗಾರಿಗೆ ಅಗತ್ಯ ಹಣವನ್ನು ಮಂಜೂರು ಮಾಡಿರುವುದಾಗಿ ಹೇಳಿದರು.

ಕಾರ್ಯ ಕ್ರಮದಲ್ಲಿ ಪಾಲ್ಗೊಂಡ ಗೃಹ ಸಚಿವ ಡಾ. ವಿ. ಎಸ್. ಆಚಾರ್ಯ ಅವರು, ಲೋಕೋ ಪಯೋಗಿ ಇಲಾಖೆ ಕಟ್ಟಡ ಕಾಮಗಾರಿ ಕೈಗೊಳ್ಳುವಾಗ, ರಸ್ತೆ ನಿರ್ಮಾಣ ಮಾಡುವಾಗ ಸೂಕ್ತ ವಿನ್ಯಾಸ ರೂಪಿಸಬೇಕು. ರಸ್ತೆ ಉತ್ತಮವಾಗಿರಬೇಕಾದರೆ ಚರಂಡಿ ಸುವ್ಯವಸ್ಥಿತವಾಗಿರಬೇಕೆಂದು ಸಲಹೆ ಮಾಡಿದರು.
ಸಮಾ ರಂಭದಲ್ಲಿ ಶಾಸಕ ವಸಂತ ಬಂಗೇರ,ಉಡುಪಿ ಶಾಸಕ ರಘುಪತಿ ಭಟ್, ತಾ.ಪಂ ಅಧ್ಯಕ್ಷ ವಿಜಯ ಕುಮಾರ್, ನಗರಸಭಾ ಅಧ್ಯಕ್ಷೆ ಬೇಬಿ, ಉಡುಪಿ ನಗರಸಭಾ ಅಧ್ಯಕ್ಷ ವಿಜಯಕುಮಾರ್ ಉಪಸ್ಥಿತರಿದ್ದರು. ಲೋಕೋಪಯೋಗಿ ಇಲಾಖಾ ಅಧೀಕ್ಷಕ ಬಾಲಕೃಷ್ಣ ಸ್ವಾಗತಿಸಿದರು.