Friday, January 13, 2012

ಗಮನ ಸೆಳೆದ ಕಲಾಕೃತಿಗಳು


ಈ ಬ್ಯೂಸಿ ಜಮಾನ, ವರ್ಣರಂಜಿತ ಬದುಕಿನಲ್ಲಿ ಎಲ್ಲರೂ ಹೊಸ ಹೊಸ ಡಿಸೈನ ವಸ್ತುಗಳ ಬಗ್ಗೆ ಒಲವು ತೋರಿಸುವೂದೇ ಹೆಚ್ಚು ಅದರೆ ಎಲ್ಲರಿಗೂ ಕೂಡ ಕಲಾತ್ಮಕ ವಸ್ತುಗಳ ಮೇಲೆ ಕಿಳರಿಮೆಯ ಭಾವ. ಆದರೆ ಈ ಮಂಗಳೂರಿನ ಯುವ ಜನೋತ್ಸವದಲ್ಲಿ ಇದಕ್ಕೆಲ್ಲಾ ಬ್ರೇಕ್ ಬಿದ್ದಿದೆ. ಇಲ್ಲಿ ಕಲಾತ್ಮಕ ವಸ್ತುಗಳದೆ ಕಾರುಬಾರು. ರಾಷ್ಷೀಯ ಯುವಜನ ಅಭಿವೃದಿ ಕೇಂದ್ರ ಇಲಾಖೆ ವಯನಾಡ್ ಕೇರಳ ಇಲ್ಲಿನ ಅಧಿಕಾರಿಗಳು ಈ ಒಂದು ಕಲಾತ್ಮಕ ವಸ್ತುಗಳ ಮಳಿಗೆಯನ್ನು ಆಯೋಜಿಸಿದ್ದಾರೆ.


2007ರಲ್ಲಿ ರಾಷ್ಟ್ರೀಯ ಯುವಜನ ಪ್ರಶಸ್ತಿ ಪಡೆದಿರುವ ಇವರು ಎಥಿಕ್ಸ್ ಪ್ರೋಡಕ್ ವಯನಾಡ್ ಎಂಬ ಪ್ರೊಡಕ್ಷನ್ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇವರ ತಂಡವು ಸುಮಾರು ಒಟ್ಟು 32 ಬಗೆಯ ವಸ್ತು ವೈವಿದ್ಯಗಳನ್ನು ಮಾರಾಟಕ್ಕಿಟ್ಟಿದ್ದಾರೆ. ಹಾಗು ಬಲು ಅಪರೂಪ ವಾಗಿರುವಂತಹ ಬಿದಿರಿನ ಅಕ್ಕಿಯನ್ನು ಮಳಿಗೆಯಲ್ಲಿಟ್ಟಿದ್ದಾರೆ. ಬಿದಿರಿನಿಂದ ಮಾಡಿದ 14 ಕಲಾತ್ಮಕಾರಿ ವಸ್ತುಗಳು ಸುಂದರ ಕೆತ್ತನೆಯಿಂದ ಗಮನ ಸೆಳೆಯುತ್ತಿದೆ. ಗಮನಿಸಬೇಕಾದ ಅಂಶವೆಂದರೆ ಬಿದಿರಿನ ಕೆತ್ತನೆಗಳನ್ನು ಅಲ್ಲಿನ ಆದಿವಾಸಿಗಳು ಮಾಡಿಕೊಡುತ್ತಿದಾರೆ. ಅವರಿಗೆ ಹಣವನ್ನು ಕೊಟ್ಟು ಅವರಿಂದ ತೆಗೆದು ಕೊಳ್ಳುತ್ತಿದ್ದಾರೆ. ಇಂತಹ ಪ್ರತಿಭೆಗಳು ಕೇವಲ ಹಳ್ಳಿಗಳಲ್ಲಿ ಉಳಿಯದೆ ಇಂತಹ ಕಾರ್ಯಕ್ರಮಗಳಲ್ಲಿ ಪ್ರದರ್ಶಿಸಲ್ಪಡಬೇಕು ಒಟ್ಟು 10 ಜನ ಕೆಲಸಗಾರರು ಇವರ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ಬೇರೆ ಬೇರೆ ಕಡೆಗಳಲ್ಲಿ ಭಾಗವಹಿಸಿರುವ ಇವರು ಎಲ್ಲರಿಂದಲೂ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹನಿಆಮ್ಲ, ಹನಿಸೋಪ್, ಆಯುರ್ವೇದ ಪ್ರಾಡಕ್ಟ್, ಹೀಗೆ ಹತ್ತು ಹಲವು ಬಗೆಯ ವಸ್ತುಗಳನ್ನು ಈ ಮಳಿಗೆಯಲ್ಲಿ ಕಾಣಬಹುದು.

ವರದಿ: ಮಾಣಿಕ್ಯ ಮೂಡಬಿದಿರೆ.