ಮಂಗಳೂರು,ಜನವರಿ.10:ಹೆಚ್ಚುತ್ತಿರುವ ಜನಸಂಖ್ಯೆಯಷ್ಟೆ ರಸ್ತೆಗಳಲ್ಲಿ ವಾಹನಗಳ ಸಂಖ್ಯೆಯೂ ಹೆಚ್ಚುತ್ತಿದ್ದು, ಪ್ರತೀ ದಿನ ಒಂದಿಲ್ಲೊಂದು ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, ಅನೇಕರ ಸಾವಿಗೆ ಕಾರಣವಾಗುತ್ತಿದೆ.ಆದ್ದರಿಂದ ಸರ್ಕಾರ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚಾರ ನಿಯಮಗಳ ಪಾಲನೆಗೆ ಫಲಕಗಳನ್ನು ಅಳವಡಿಸ ಬೇಕೆಂದು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಅವರು ಇಂದು ನಗ ರದ ಸಂತ ಅಲೋ ಶಿಯಸ್ ಪಿ.ಯು. ಕಾಲೇ ಜಿನಲ್ಲಿ ಜಿಲ್ಲಾ ಆಡ ಳಿತ,ಸಾರಿಗೆ ಇಲಾಖೆ, ಪೋ ಲೀಸ್ ಇಲಾಖೆ ಮಂಗ ಳೂರು ಇವರ ಆಶ್ರ ಯದಲ್ಲಿ ಏರ್ಪ ಡಿಸಿದ್ದ 23ನೇ ರಾ ಷ್ಟ್ರೀಯ ರಸ್ತೆ ಸುರ ಕ್ಷತಾ ಸಪ್ತಾಹ 2012 ನ್ನು ಉದ್ಘಾ ಟಿಸಿ ಮಾತ ನಾಡು ತ್ತಿದ್ದರು.ವಾಹನ ಚಾಲನೆ ಪರ ವಾನಿಗೆ ಲೈಸನ್ಸ್ ನೀಡು ವಾಗ ಅವರಿಗೆ ಸಂಪೂ ರ್ಣವಾಗಿ ಸಂ ಚಾರ ನಿಯಮಗಳ ತರಬೇತಿ ನೀಡುವುದಲ್ಲದೆ, ಅವರಿಗೆ ಸಂಚಾರ ಕಾನೂನುಗಳ ಅರಿವನ್ನು ಮೂಡಿಸಬೇಕೆಂದು ತಿಳಿಸಿದ ಡಾ.ವೀರೇಂದ್ರ ಹೆಗ್ಗಡೆಯವರು ವಾಹನ ಸಂಚಾರದಲ್ಲಿ ಶಿಸ್ತು ಪಾಲನೆಗೆ ಪ್ರಾಮುಖ್ಯತೆ ನೀಡುವಂತೆ ತಿಳಿಸಿದರು.ರಸ್ತೆ ಸುರ ಕ್ಷತೆ ಬಗ್ಗೆ ಕೇವಲ ಒಂದು ವಾರ ಅರಿವು ಮೂಡಿಸಿ ದರೆ ಸಾಲದು ಬದ ಲಾಗಿ ವರ್ಷ ಪೂರ್ತಿ ರಸ್ತೆ ಸು ರಕ್ಷ ತೆಗೆ ಗಮನ ವಹಿಸ ಬೇಕೆಂ ದರು.ಸಮಾ ರಂಭದ ಅಧ್ಯ ಕ್ಷತೆ ಯನ್ನು ವಹಿ ಸಿದ್ದ ವಿಧಾನ ಸಭಾ ಉಪಾ ಧ್ಯಕ್ಷ ರಾದ ಎನ್.ಯೋ ಗಿಶ್ ಭಟ್ ಅವರು ಮಾತನಾಡಿ ಇಂದು ಶಾಲಾಕಾಲೇಜುಗಳಲ್ಲಿ ಹೆಚ್ಚುತ್ತಿರುವ ಡ್ರಗ್ ಸೇವನೆಗೊಳಗಾಗಿ ಯುವಕರು ವಾಹನವನ್ನು ಅತೀ ವೇಗವಾಗಿಚಲಾಯಿಸುವ ಮೂಲಕ ಅಜಾಗರೂಕತೆಯಿಂದ ಅಪಘಾತಗಳು ಸಂಭವಿಸುತ್ತಿದೆ.ಆದ್ದರಿಂದ ಡ್ರಗ್ ಮಾಫಿಯಾ ಕೊನೆಗೊಳಿಸಿದರೆ ರಸ್ತೆ ಅಪಘಾತಗಳು ಸಹ ಕ್ಷೀಣಿಸಲಿವೆಯಂದರು.ಜಿಲ್ಲಾ ಧಿಕಾರಿ ಡಾ ಎನ್. ಎಸ್. ಚನ್ನಪ್ಪ ಗೌಡ,ರೆ.ಫಾ.ವಿ ಲಿಯಂ ಮಿನೇ ಜಸ್, ರೆ.ಫಾ. ಎಲ್.ಎಸ್. ಲೂಯಿಸ್, ದ.ಕ.ಜಿಲ್ಲಾ ಬಸ್ ಮಾಲೀ ಕರ ಸಂ ಘದ ಅಧ್ಯಕ್ಷ ರಾದ ರಾಜ ವರ್ಮ ಬಲ್ಲಾಳ್,ಕಾಲೇಜಿನ ಪ್ರಾಂಶು ಪಾಲ ರಾದ ಜಾನ್ ಎಡ್ವರ್ಡ್ ಡಿ ಸಿಲ್ವಾ ಮುಂತಾದವರು ಭಾಗವಹಿಸಿದ್ದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಮಲ್ಲಿಕಾರ್ಜುನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸಭೆಗೆ ಎಲ್ಲರನ್ನು ಸ್ವಾಗತಿಸಿದರು.
ಸಮಾರಂಭಕ್ಕೆ ಮುನ್ನಾ ನೆಹರೂ ಮೈದಾನದಿಂದ ಶಾಲಾ ಮಕ್ಕಳ ಆಕರ್ಷಕ ಜಾಥಾ ಹಾಗೂ ವಿಂಟೇಜ್ ಕಾರ್ ರಾಲಿ ಏರ್ಪಡಿಸಲಾಗಿತ್ತು.