ಅವರು ಗುರುವಾರ ಜಿಲ್ಲಾ ಪಂಚಾಯತ್ ನಲ್ಲಿ ಆಯೋಜಿಸಿದ ಕುಷ್ಠರೋಗ ನಿರ್ಮೂಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಜನವರಿಯನ್ನು ಕುಷ್ಠರೋಗ ನಿರ್ಮೂಲನಾ ಮಾಸಾಚರಣೆಯ ಮೂಲಕ ನಗರವಾಸಿಗಳಿಗೆ ಹೆಚ್ಚಿನ ಮಾಹಿತಿ ಕಾರ್ಯಕ್ರಮದ ಮೂಲಕ ಅರಿವು ನೀಡಲು ಬಳಸಲಾಗುವುದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ .25 ಹತ್ತು ಸಾವಿರ ಜನಸಂಖ್ಯೆಗೆ. ರೋಗ ಪ್ರಕರಣ ಪತ್ತೆಯಾಗಿದ್ದು, ರಾಜ್ಯದಲ್ಲಿ .53, ದೇಶದಲ್ಲಿ .83 ಪ್ರಿವಿಲೆನ್ಸ್ ರೇಟ್ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಓ. ಶ್ರೀರಂಗಪ್ಪ ಸಭೆಗೆ ಮಾಹಿತಿ ನೀಡಿದರು.
ಕಳೆದ ಸಾಲಿನ 215 ರೋಗ ಪ್ರಕರಣಕ್ಕೆ ಸಂಬಂಧಿಸಿದಂತೆ 11650 ಸಂಬಂಧಿಕರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು ಎರಡು ಪಿ ಬಿ ರೋಗಿಗಳು ಪತ್ತೆಯಾಗಿದ್ದು, ಅವರು ಗುಣಮುಖರಾಗಿದ್ದಾರೆ. ಮತ್ತೆ ಈ ಸಂಬಂಧ ನಡೆಸಿದ ಮಾಹಿತಿ ಪ್ರಚಾರದಿಂದ 12 ರೋಗಿಗಳು ಪತ್ತೆಯಾಗಿದ್ದು, ಚಿಕಿತ್ಸೆ ನೀಡಲಾಯಿತು.

ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರಿಗೆ ತರಬೇತಿ ಹಾಗೂ ಅವರ ಸಕ್ರಿಯ ನೆರವನ್ನು ಪಡೆದುಕೊಳ್ಳಲು ಸೂಚಿಸಿದರು. ಅರಿವು ಕಾರ್ಯಕ್ರಮ ಯಶಸ್ವಿಯಾಗಿ ನಡೆಯಬೇಕೆಂದ ಅವರು ಕಾಟಾಚಾರಕ್ಕೆ ಯಾವುದೇ ಕಾರ್ಯಕ್ರಮಗಳಾಗಬಾರದು ಎಂದರು.
ಕಾರ್ಯಕ್ರಮಗಳು ಪಾರದರ್ಶಕವಾಗಿ ನಡೆಯುವುದರಿಂದ ಆತ್ಮವಿಶ್ವಾಸ ಹೆಚ್ಚಲಿದೆ ಎಂದ ಅವರು, ಯೋಜನೆಗಳ ಪ್ರಾಮಾಣಿಕ ಅನುಷ್ಠಾನಕ್ಕೆ ಒತ್ತು ನೀಡಲು ಸಿಇಒ ಸೂಚಿಸಿದರು. ನಗರದ ವಿವಿಧ ಮೆಡಿಕಲ್ ಕಾಲೇಜಿನ ಚರ್ಮರೋಗ ತಜ್ಞರನ್ನೊಳಗೊಂಡಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.