ಮಂಗಳೂರು: 17ನೇ ರಾಷ್ಟ್ರೀಯ ಯುವಜನೋತ್ಸವದಲ್ಲಿ ಕರ್ನಾಟಕದ ಸಾಧನೆ ಉತ್ತಮವಾಗಿತ್ತು. ಒಟ್ಟು ಹದಿನೆಂಟು ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ನಡೆದಿದ್ದು ಈ ಪೈಕಿ ಕರ್ನಾಟಕದ ಒಟ್ಟು ಏಳು ಬಹುಮಾನಗಳನ್ನು ತನ್ನದಾಗಿಸಿಕೊಂಡಿದೆ.
ಜಾನಪದ ಗೀತೆ, ಶಾಸ್ತ್ರೀಯ ನೃತ್ಯ ಕೂಚುಪುಡಿ ,ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತ, ಶಾಸ್ತ್ರೀಯ ಸಂಗೀತ ವಾದ್ಯ ಸಿತಾರ್ ಇವುಗಳಲ್ಲಿ ಪ್ರಥಮ ಸ್ಥಾನ, ಭರತನಾಟ್ಯ, ಕರ್ನಾಟಕ ಶಾಸ್ತ್ರೀಯ ಸಂಗೀತ ದಲ್ಲಿ ದ್ವಿತೀಯ, ತಬಲಾ ಮತ್ತು ಹಾರ್ಮೋನಿಯಂನಲ್ಲಿ ತೃತೀಯ ಸ್ಥಾನ ಪಡೆಯುವ ಮೂಲಕ ತೃಪ್ತಿಕರ ಸಾಧನೆ ಮೆರೆಯುವಲ್ಲಿ ಯಶಸ್ವಿಯಾಯಿತು.