
ಮಂಗಳೂರು: ಕಳೆದ ಐದು ದಿನಗಳಿಂದ ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆಯುತ್ತಿದ್ದ 17ನೇ ರಾಷ್ಟ್ರೀಯ ಯುವಜನೋತ್ಸವದ ಸಮಾರೋಪ ಸಮಾರಂಭ ಪ್ರಾರಂಭಗೊಂಡಿತು. ಸಾಂಸ್ಕೃತಿಕ ಮೆರವಣಿಗೆ ಇದೀಗ ವೇದಿಕೆಯ ಮುಂಭಾಗದಲ್ಲಿ ಸಾಗಿಬರುತ್ತಿದ್ದು,ಈ ಬಾರಿಯ ರಾಷ್ಟ್ರೀಯ ಯುವಜನೋತ್ಸವಕ್ಕೆ ಇನ್ನೇನು ಕಲವೇ ಗಂಟೆಗಳಲ್ಲಿ ಅಂತಿಮ ತೆರೆ ಬೀಳಲಿದೆ.ವೇದಿಕೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದಾರೆ. ಅತ್ಯಂತ ಶಿಸ್ತುಬದ್ಧ ರೀತಿಯಲ್ಲಿ ಸಾಗಿ ಬರುತ್ತಿರುವ ಸಾಂಸ್ಕೃತಿಕ ಮೆರವಣಿಗೆಯನ್ನು ಇದೀಗ ಗಣ್ಯಾತಿಗಣ್ಯರು ವೀಕ್ಷಿಸುತ್ತಿದ್ದಾರೆ. ಒಟ್ಟಿನಲ್ಲಿ ವ್ಯವಸ್ಥಿತವಾದಂತಹ 17ನೇ ರಾಷ್ಟ್ರೀಯ ಯುವಜನೋತ್ಸವದ ಸಮಾರೋಪಕ್ಕೆ ಅಧಿಕೃತ ಚಾಲನೆ ದೊರೆತಂತಾಗಿದೆ.